ಶಿವಮೊಗ್ಗ: ಮಾನಸ ಸಮೂಹ ಸಂಸ್ಥೆಗಳು ಹಾಗೂ ಐ ಎಂ ಎ, ರೋಟರಿಕ್ಲಬ್ ಮಿಡ್‌ಟೌನ್, ರೋಟರಿ ಬ್ಲಡ್ ಬ್ಯಾಂಕ್ ಮತ್ತು ಸಂಜೀವಿನಿ ರಕ್ತ ನಿಧಿ ಕೇಂದ್ರ ಶಿವಮೊಗ್ಗ ಜಂಟಿಯಾಗಿ, ದಿನಾಂಕ 11.10.2025 ರ ಶನಿವಾರದಂದು ಶಿವಮೊಗ್ಗದ ಜೆ ಪಿ ಎನ್ ರಸ್ತೆಯಲ್ಲಿರುವ ಮಾನಸ ಆಸ್ಪತ್ರೆ ಎದುರು ಇರುವ ಮುತ್ತಣ್ಣ ಗ್ಯಾಲರಿ ಕಟ್ಟಡದ ಸಭಾಂಗಣದಲ್ಲಿ ದಿವಂಗತ ಡಾ.ಅಶೋಕ್ ಪೈ ಸ್ಮರಣಾರ್ಥವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುತ್ತಾರೆ.
ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.00 ಗಂಟೆವರೆಗೆ ನಡೆಯುವ ಈ ರಕ್ತದಾನ ಶಿಬಿರದಲ್ಲಿ 18 ವರ್ಷ ಮೀರಿದ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದಾಗಿದ್ದು. ಸಾರ್ವಜನಿಕರು, ಆಸಕ್ತರು, ಭಾಗವಹಿಸಬೇಕೆಂದು ಆಯೋಜಕರ ಪರವಾಗಿ ಮಾನಸ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಪ್ರೀತಿ ಪೈ ಶಾನ್‌ಭಾಗ್ ಹಾಗೂ ಡಾ. ವಾಮನ್ ಎಂ ಶಾನ್‌ಭಾಗ್ ಅವರು ಕೋರಿರುತ್ತಾರೆ. ರಕ್ತದಾನಿಗಳಿಗೆ ಪ್ರಮಾಣ ಪತ್ರ ಹಾಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಕಾರ್ಯ ಕ್ರಮದ ಉದ್ಘಾಟನೆಯನ್ನು ಡಾ.ರವೀಶ್ ಕೆ.ಆರ್ ಅಧ್ಯಕ್ಷರು, ಐ.ಎಂ.ಎ, ಶಿವಮೊಗ್ಗ, ಹರ್ಷ ಬಿ ಕಾಮತ್, ಅಧ್ಯಕ್ಷರು, ರೋಟರಿಕ್ಲಬ್ ಮಿಡ್‌ಟೌನ್ ಮತ್ತು ರೋಟರಿ ಬ್ಲಡ್ ಬ್ಯಾಂಕ್ ಶಿವಮೊಗ್ಗ, ಡಾ. ದಿನಕರ್ ಎಸ್ ವೈದ್ಯಾದಿಕಾರಿಗಳು, ದರಣೇಂದ್ರ ದಿನಕರ್ ಜೆ ಹಿರಿಯ ಸಂಚಾಲಕರು , ರೆಡ್ ಕ್ರಾಸ್-ಸಂಜೀವಿನಿ ಬ್ಲಡ್ ಬ್ಯಾಂಕ್, ಶಿವಮೊಗ್ಗ ಹಾಗೂ ಡಾ.ರಜನಿ ಎ ಪೈ, ಅಧ್ಯಕ್ಷರು, ಮಾನಸ ಸಮೂಹ ಸಂಸ್ಥೆಗಳು, ಶಿವಮೊಗ್ಗ ಇವರುಗಳು ನಡೆಸಿಕೊಡಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ