SG ಪೈಪರ್ಸ್‌ ತಂಡ ಸೇರಲಿದ್ದಾರೆ ರೋಹನ್ ಬೋಪಣ್ಣ

Upayuktha
0


ಬೆಂಗಳೂರು, ಅಕ್ಟೋಬರ್ 8, 2025: ಅಕ್ಟೋಬರ್ 9 ರಂದು ನಡೆಯಲಿರುವ ಟೆನ್ನಿಸ್ ಪ್ರೀಮಿಯರ್ ಲೀಗ್ (TPL) 2025 ಹರಾಜಿಗೂ ಮುನ್ನ SG ಪೈಪರ್ಸ್‌ ಈ ಸೀಸನ್‌ನ ಅತ್ಯಂತ ಶಕ್ತಿಶಾಲಿ ತಂಡಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಮತ್ತು ಗ್ರ್ಯಾಂಡ್ ಸ್ಲ್ಯಾಮ್ ಮತ್ತು ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಎರಡನ್ನೂ ಗೆದ್ದ ಅತ್ಯಂತ ಹಿರಿಯ ಆಟಗಾರ ರೋಹನ್ ಬೋಪಣ್ಣ ಎಸ್‌ಜಿ ಪೈಪರ್ಸ್‌ ತಂಡವನ್ನು ಸೇರಲಿದ್ದಾರೆ. 


ಬೋಪಣ್ಣರ ಸೇರ್ಪಡೆ SG ಪೈಪರ್ಸ್ ತಂಡದ ಅನುಭವ ಹೆಚ್ಚಿಸಲಿದ್ದು, ಈ ಬಾರಿ ಪ್ರಶಸ್ತಿಗಾಗಿ ಗಂಭೀರವಾಗಿ ಹೋರಾಡುವ ಉದ್ದೇಶ ತಂಡದಾಗಿದೆ.  

ಭಾರತದ ಅತ್ಯಂತ ಯಶಸ್ವಿ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾಗಿರುವ ಹಾಗೂ SG ಪೈಪರ್ಸ್‌ ಮಾಲೀಕತ್ವದ ಎಸ್ ಗುಪ್ತಾ ಸ್ಪೋರ್ಟ್ಸ್‌ನ ಸಿಇಒ ಆಗಿರುವ ಮಹೇಶ್ ಭೂಪತಿ ಮಾತನಾಡಿ 'ಭಾರತೀಯ ಟೆನ್ನಿಸ್‌ ನಲ್ಲಿ ಅತ್ಯುನ್ನತ ಮಟ್ಟದ ಪ್ರದರ್ಶನ ನೀಡುವ ತಂಡವನ್ನು ಕಟ್ಟುವುದೇ ನಮ್ಮ ಉದ್ದೇಶವಾಗಿದೆ. ರೋಹನ್ ಬೋಪಣ್ಣ ನಮ್ಮ ತಂಡದಲ್ಲಿ ಸೇರಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಅವರ ಅಪಾರ ಅನುಭವ, ನಾಯಕತ್ವದ ಗುಣ ಮತ್ತು ಗೆಲ್ಲುವ ಮನೋಭಾವ ನಮ್ಮ ತಂಡಕ್ಕೆ ಅಮೂಲ್ಯವಾದದ್ದು. TPL ಮುಂತಾದ ಲೀಗ್‌ಗಳು ಭಾರತೀಯ ಟೆನ್ನಿಸ್ ಅಭಿವೃದ್ಧಿಗೆ ಅತ್ಯಗತ್ಯ. ಇವು ಯುವ ಪ್ರತಿಭೆಗೆ ಸ್ಥಾಪಿತ ಆಟಗಾರರ ಜೊತೆ ಸ್ಪರ್ಧಿಸಲು ವೇದಿಕೆ ಒದಗಿಸುತ್ತವೆ ಎಂದಿದ್ದಾರೆ. 


ಭಾರತೀಯ ಮತ್ತು ಅಂತರರಾಷ್ಟ್ರೀಯ ಆಟಗಾರರಿಗಾಗಿ ಫ್ರಾಂಚೈಸಿಗಳು ಹರಾಜಿನಲ್ಲಿ ಸ್ಪರ್ಧಿಸುವುದರಿಂದ ಅದಕ್ಕೆ ಹೆಚ್ಚಿನ ಗಮನ ಸೆಳೆಯುವ ನಿರೀಕ್ಷೆಯಿದೆ. ಬೋಪಣ್ಣ ಈಗಾಗಲೇ ತಂಡದ ಭಾಗವಾಗಿರುವುದರಿಂದ ಮತ್ತು ಸ್ಪಷ್ಟವಾದ ಕಾರ್ಯಯೋಜನೆಯೊಂದಿಗೆ, SG ಪೈಪರ್ಸ್ ಮುಂದಿನ ಸೀಸನ್‌ನಲ್ಲಿ ಪ್ರಶಸ್ತಿಗಾಗಿ ಬಲವಾದ ಹೋರಾಟ ನಡೆಸಲು ಸಿದ್ಧವಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top