ಸರ್ವೆಯ ಭಕ್ತಕೋಡಿಯಲ್ಲಿ ಸುಸಜ್ಜಿತ ಕಾಂಪ್ಲೆಕ್ಸ್, ಸಭಾಭವನ ಹಾಗೂ ವಸತಿಗೃಹ
ಒಂದೇ ಸೂರಿನಡಿ ಹತ್ತಾರು ಸೌಲಭ್ಯಗಳು.
ಪುತ್ತೂರು: ಪುತ್ತೂರಿನಿಂದ ಕೇವಲ 10 ಕಿಲೋಮೀಟರ್ ದೂರದ ಸರ್ವೆಯ ಭಕ್ತಕೋಡಿಯಲ್ಲಿ ನೂತನ ‘ಆರಾಧ್ಯ ಸಂಕೀರ್ಣ’ ವಾಣಿಜ್ಯ ಮಳಿಗೆ, ಹವಾನಿಯಂತ್ರಿತ ಸಭಾಂಗಣ, ಈಜುಕೊಳ ಸಹಿತ ನೂತನ ಸಂಕೀರ್ಣ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ. ಒಂದೇ ಸೂರಿನಡಿಯಲ್ಲಿ ಹತ್ತಾರು ಸೌಲಭ್ಯಗಳು ಈ ಕಾಂಪ್ಲೆಕ್ಸ್ ವಿಶೇಷತೆ. ಸರ್ವೆಯ, ಭಕ್ತಕೋಡಿಯಲ್ಲಿ ನವೆಂಬರ್ 8 ರಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಕೇವಲ ವಾಣಿಜ್ಯ ಸಂಕೀರ್ಣವಷ್ಟೇ ಅಲ್ಲ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗಾಗಿ ನೂತನವಾಗಿ ನಿರ್ಮಾಣಗೊಂಡ ಹವಾನಿಯಂತ್ರಿತ ಸಭಾಂಗಣ, ಸ್ಟಾರ್ಟ್‌ಅಪ್ ಕಂಪನಿಗಳಿಗಾಗಿ 8000 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ರೂಪಿಸಲಾದ ಕಛೇರಿಯ ಸಮುಚ್ಚಯವೂ ಇಲ್ಲಿದೆ.
400 ಆಸನಗಳಿರುವ ಹವಾನಿಯಂತ್ರಿತ ಮದುವೆ ಹಾಲ್ ಆರಾಧ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿದ್ದು, ಮಹಡಿಗೆ ಹೋಗಲು 8 ಮಂದಿ ಸಾಗಬಹುದಾದ ವಿಶಾಲವಾದ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. 24 ಗಂಟೆ ಜನರೇಟರ್ ಸೌಲಭ್ಯವನ್ನೂ ಒದಗಿಸಲಾಗಿದ್ದು. ಅದೇ ಮಹಡಿಯಲ್ಲಿ ಹವಾನಿಯಂತ್ರಿತ ಕಾನ್‌ಫರೆನ್ಸ್ ಹಾಲ್ ಸೌಲಭ್ಯವಿದೆ. ಇಲ್ಲಿ 50 ಮಂದಿಯ ಮೀಟಿಂಗ್ ಮಾಡಬಹುದಾಗಿದೆ. 2ನೇ ಮಹಡಿಯಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳಿಗಾಗಿ 8 ಸಾವಿರ ಚದರ ಅಡಿಯಷ್ಟು ಸ್ಥಳಾವಕಾಶ ಇರುವ ಕಚೇರಿ ಸಮುಚ್ಚಯಗಳಿವೆ. ವೈಫೈ ಸೌಲಭ್ಯ ಇದ್ದು, ಇಲ್ಲಿ 100ಕ್ಕೂ ಅಧಿಕ ಮಂದಿ ಐಟಿ, ಬಿಟಿ ಅಥವಾ ಇನ್ಯಾವುದೇ ಕ್ಷೇತ್ರದವರು ಕೆಲಸ ಮಾಡಬಹುದಾಗಿದೆ.
ಮೊದಲ ಮಹಡಿಯಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಸ್ಥಳಾವಕಾಶಗಳಿದ್ದು, ನೆಲಮಹಡಿಯಲ್ಲಿ ಹೋಟೆಲ್, ಬ್ಯಾಂಕ್, ಮೆಡಿಕಲ್ ಸಹಿತ ಇನ್ನಿತರ ವಾಣಿಜ್ಯ ಮಳಿಗೆಗಳಿವೆ.
ಸುಸಜ್ಜಿತ ಹವಾನಿಯಂತ್ರಿತ ವಸತಿಗೃಹ:
24 ಹವಾನಿಯಂತ್ರಿತ ವಸತಿ ಕೊಠಡಿಗಳು (ಲಾಡ್ಜ್), 3 ಅತ್ಯಾಧುನಿಕ ಸ್ಯೂಟ್‌ಗಳು, ವಾಕಿಂಗ್ ಪಾಥ್. ಮಕ್ಕಳ ಉದ್ಯಾನಗಳೂ ಈ ಸಂಕೀರ್ಣ ದ ವಿಶೇಷ ತೆ.
ಈಜುಕೊಳ, ಜಿಮ್: 3,500 ಚದರ ಅಡಿ ವಿಸ್ತೀರ್ಣದ ಈಜುಕೊಳ ಈ ಸಂಕೀರ್ಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಮಕ್ಕಳಿಗಾಗಿ ಇಲ್ಲಿ ಪ್ರತ್ಯೇಕ ಈಜುಕೊಳ್ ಇದೆ. ಜಿಮ್ ಸೌಲಭ್ಯವೂ ಇದೆ.
400 ಕಾರು ನಿಲುಗಡೆ: ವಾಹನ ನಿಲುಗಡೆ ಇಂದಿನ ಕಾಲದ ಬಹುದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿ ಕಾಣಿಸಲಾಗಿದೆ. 400ಕ್ಕೂ ಅಧಿಕ ಕಾರುಗಳು ನಿಲುಗಡೆ ಮಾಡಬಹುದಾದ ಪಾರ್ಕಿಂಗ್ ಸೌಲಭ್ಯ ಇಲ್ಲಿದೆ. ಇಲ್ಲಿನ ವಿಶಾಲ ಹೊರಾಂಗಣದಲ್ಲಿ ಪೆಂಡಾಲ್ ಹಾಕಿ 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಬಹುದಾದ ಹೊರಾಂಗಣ ಮದುವೆ-ರಿಸೆಪ್ಶನ್ ಸ್ಥಳವಿದ್ದು ಜನರ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ.
ಭವಿಷ್ಯದಲ್ಲಿ ರೈನ್ ಡ್ಯಾನ್ಸ್, ಟೇಬಲ್ ಟೆನಿಸ್ ಕೋರ್ಟ್, ಇಂಡೋರ್ ಗೇಮ್ಸ್‌ಗೆ ಸೌಲಭ್ಯ ಕಲ್ಪಿಸಲಾಗುವುದು.
ಪ್ರವಾಸಿಗರಿಗೆ ಅನುಕೂಲ. ಉತ್ತಮ ಪುತ್ತೂರು–ಕಾಣಿಯೂರು–ಸುಬ್ರಹ್ಮಣ್ಯ ರಸ್ತೆಯಲ್ಲಿ ಪುರುಷರಕಟ್ಟೆಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಸರ್ವೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಭಕ್ತಕೋಡಿ. ಇದು ಸರ್ವೆ ಮಾತ್ರವಲ್ಲ, ಪಂಜಳ, ಮುಂಡೂರು, ತಿಂಗಳಾಡಿ, ಸವಣೂರು, ಬೆಳ್ಳಾರೆಗಳಿಗೂ ಸಮೀಪದಲ್ಲೇ ಇರುವ ಒಂದು ಸ್ಥಳ. ಇಷ್ಟು ಊರುಗಳು ಮಾತ್ರವಲ್ಲ, ದೂರದ ಊರುಗಳ ಜನರು ಸಹ ಮದುವೆ ಮತ್ತಿತರ ಶುಭಕಾರ್ಯಗಳನ್ನು ಮಾಡಿಸಿಕೊಳ್ಳಲು ಇಲ್ಲಿ ಉತ್ತಮ ಅವಕಾಶ ಇದೆ. ಮುಖ್ಯ ರಸ್ತೆ ಬದಿಯಲ್ಲೇ ತಲೆ ಎತ್ತಿರುವ ಈ ಆರಾಧ್ಯ ಸಂಕೀರ್ಣ ಹತ್ತಾರು ಬಗೆಯಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ತಾಣ.
ಇಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ 38 ಕಿ.ಮೀ. ಧರ್ಮಸ್ಥಳಕ್ಕೆ 60 ಕಿ.ಮೀ. ಮಂಗಳೂರಿಗೆ 60 ಕಿ.ಮೀ. ಹೀಗಾಗಿ ಪ್ರವಾಸಕ್ಕೆ ಬರುವವರು ಸಹ ಇಲ್ಲಿ ವಸತಿ ಮಾಡಿಕೊಂಡು ತಮ್ಮ ಪ್ರವಾಸ ಯೋಜನೆ ರೂಪಿಸಿಕೊಳ್ಳಬಹುದು.
ಮಾಹಿತಿಗೆ ಸಂಪರ್ಕಿಸಿ: 9448128415 (ಜಿ.ಕೆ.ಪ್ರಸನ್ನ)
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ