ಮಂಗಳೂರು: ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್ ಕಂಪನಿ, ಟಾಟಾ ಇಂಡಿಯಾ ಡೈನಾಮಿಕ್ ಈಕ್ವಿಟಿ ಫಂಡ್ - ಗಿಫ್ಟ್ ಐಎಫ್‍ಎಸ್‍ಸಿ ಹೂಡಿಕೆ ನಿಧಿ ಆರಂಭಿಸಲು ಅಂತಾರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐಎಫ್‍ಎಸ್‍ಸಿಎ)ದಿಂದ ಅನುಮೋದನೆ ಪಡೆದಿದೆ.
ಗುಜರಾತಿನ ಗಿಫ್ಟ್ ಸಿಟಿಯಿಂದ ಆರಂಭವಾಗಿರುವ ಈ ನಿಧಿಯಲ್ಲಿ ಕನಿಷ್ಠ 500 ಡಾಲರ್ ಮೊತ್ತವನ್ನು ಹೂಡಿಕೆ ಮಾಡಲು ಅವಕಾಶವಿದೆ. ಈ ನಿಧಿಯು ಜಾಗತಿಕ ಹೂಡಿಕೆದಾರರಿಗೆ ಮತ್ತು ಅನಿವಾಸಿ ಭಾರತೀಯ ಹೂಡಿಕೆದಾರರಿಗೆ ಭಾರತದ ಬೆಳೆಯುತ್ತಿರುವ ಈಕ್ವಿಟಿ ಮಾರುಕಟ್ಟೆ ಪ್ರವೇಶಿಸಲು ಮತ್ತು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸುಲಭವಾದ ಮಾರ್ಗ ತೋರುತ್ತದೆ ಎಂದು ಟಾಟಾ ಅಸೆಟ್ ಮ್ಯಾನೇಜ್‍ಮೆಂಟ್ ಕಂಪನಿ(ಟಾಟಾ ಎಎಂಸಿ)ಯ ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮುಖ್ಯಸ್ಥ ಅಭಿನವ್ ಶರ್ಮಾ ಹೇಳಿದ್ದಾರೆ.
ಇದು ಬಿಡಿ ಹೂಡಿಕೆ ಉತ್ಪನ್ನವಾಗಿದ್ದು, ಮ್ಯೂಚುಯಲ್ ಫಂಡ್ ಈಕ್ವಿಟಿ ಯೋಜನೆಗಳು ಮತ್ತು ಎಕ್ಸ್‍ಚೇಂಜ್-ಟ್ರೇಡೆಡ್ ಫಂಡ್‍ಗಳಲ್ಲಿ(ಇಟಿಎಫ್ ಗಳು) ಹೂಡಿಕೆ ಮಾಡುವ ಫೀಡರ್ ನಿಧಿಯನ್ನಾಗಿ ವಿನ್ಯಾಸಗೊಳಿಸಲಾಗಿದೆ. ಈ ನಿಧಿಯು ಮಾರುಕಟ್ಟೆ ಪ್ರವೃತ್ತಿಗಳಿಗೆ ಹೊಂದಿಕೊಳ್ಳುವ ಸಕ್ರಿಯ ಹಂಚಿಕೆ ಕಾರ್ಯತಂತ್ರವನ್ನು ಅನುಸರಿಸುತ್ತದೆ, ದೊಡ್ಡ, ಮಧ್ಯಮ ಮತ್ತು ಸಣ್ಣ-ಬಂಡವಾಳ ಕಂಪನಿಗಳ ಹೂಡಿಕೆಗಳನ್ನು ಒಟ್ಟುಗೂಡಿಸಿ ಸಮತೋಲಿತ ಆದಾಯ ನೀಡುತ್ತದೆ. ತಂತ್ರಜ್ಞಾನ, ಇಂಧನ ಮತ್ತು ಆರೋಗ್ಯ ರಕ್ಷಣೆಯಂತಹ ಉದಯೋನ್ಮುಖ ವಲಯಗಳಲ್ಲಿ ಸಮರ್ಥ ಕಾರ್ಯತಂತ್ರ ಹೂಡಿಕೆಯು ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ.
ಈ ನಿಧಿಯ ಮೂಲಕ ಗಳಿಸಿದ ಆದಾಯ, ಭಾರತೀಯ ತೆರಿಗೆಗಳಿಂದ ಸಂಪೂರ್ಣ ಮುಕ್ತವಾಗಿರುತ್ತದೆ. ಹೂಡಿಕೆದಾರರು ತಮ್ಮ ವಾಸಸ್ಥಳದ ಕಾನೂನುಗಳ ಪ್ರಕಾರ ಮಾತ್ರ ತೆರಿಗೆಗೆ ಒಳಪಡುತ್ತಾರೆ, ಇದು ಭಾರತೀಯ ಷೇರುಗಳಿಗೆ ಅತ್ಯಂತ ತೆರಿಗೆ-ಸಮರ್ಥ ಹೂಡಿಕೆ ಸಾಧನವಾಗಿದೆ. ಇದು ವಿದೇಶಿ ಹೂಡಿಕೆದಾರರು, ಸಂಸ್ಥೆಗಳು, ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ನಾಗರಿಕರಿಗೆ ಮುಕ್ತವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ