ವಿವೇಕಾನಂದ ಕಾಲೇಜಿನಲ್ಲಿ ಆಹಾರಮೇಳ

Upayuktha
0



ಪುತ್ತೂರು: ಒಂದು ವ್ಯವಹಾರವನ್ನು ನಡೆಸುವುದಕ್ಕಿಂತ ಮೊದಲು ಮಾರ್ಕೆಟಿಂಗ್ ಬಗೆಗೆ ನಾವು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ಆಹಾರ ಉದ್ಯಮದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪ್ಯಾಕಿಂಗ್ ಗಳ ಮೇಲೆ ಗಮನ ಮತ್ತು ಅದು ವಿಶಿಷ್ಟವಾಗಿರುವಂತೆ ನೋಡಿಕೊಳ್ಳುವ ಸಾಮರ್ಥ್ಯ. ಇದನ್ನೆಲ್ಲ ಸಾಧಿಸಲು ತಾಳ್ಮೆಯೂ ಸಹ ಅಷ್ಟೇ ಮುಖ್ಯ. ಉದ್ಯಮಗಳು ಯಶಸ್ವಿಯಾಗಬೇಕಾದರೆ ಸಂಪರ್ಕವೂ ಅತೀ ಅವಶ್ಯ ಎಂದು ಪುತ್ತೂರಿನ ದಕ್ಷಿಣ ಸ್ವಾದಿಷ್ಟ  ಹೋಂ ಪ್ರಾಡಕ್ಟ್ಸ್ ಮಾಲಕಿ ಆಶಾ ನಾಯಕ್ ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ( ಸ್ವಾಯತ್ತ) ಪುತ್ತೂರು ಇಲ್ಲಿನ ವ್ಯವಹಾರ ಆಡಳಿತ ನಿರ್ವಹಣಾ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಸ್ವಾಧ ಸಂಭ್ರಮ -2025 ಆಹಾರ ಮೇಳದಲ್ಲಿ ಕಾರ್ಯಕ್ರಮದ ಉದ್ಘಾಟಕಿಯಾಗಿ ಮಾತನಾಡಿದರು .


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ .ಬಿ, ಉಪ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ,ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ರೇಖಾ.ಪಿ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಜ್ಞಶ್ರೀ ನಿರ್ವಹಿಸಿದರು.


ವ್ಯವಹಾರ ನಿರ್ವಹಣಾ ವಿಭಾಗದಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ ಆಹಾರ ಮೇಳವೂ ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ವ್ಯವಹಾರದ ಜ್ಞಾನ ಲಭಿಸುತ್ತದೆ. ವ್ಯವಹಾರ ತಂತ್ರಗಳನ್ನು ಅರಿಯಲು, ಗ್ರಾಹಕರನ್ನು ಸೆಳೆಯಲು,ಹಣಕಾಸಿನ ವ್ಯವಹಾರವನ್ನು ಅರಿಯಲು ಇದು ಉಪಕಾರಿಯಾಗಿದೆ. ಫುಡ್ ಎಕ್ಸ್ಪೋ ನಮ್ಮ ವಿಭಾಗದ  ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ.


ರೇಖಾ.ಪಿ.

ಮುಖ್ಯಸ್ಥರು

ವ್ಯವಹಾರ ನಿರ್ವಹಣಾ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top