ಕತ್ತಲೆ ಕಳೆದು ಬೆಳಕು ಚೆಲ್ಲುವ
ಹಬ್ಬವೇ ಅದುವೇ ದೀಪಾವಳಿ
ಬಣ್ಣ ಬಣ್ಣದ ದೀಪಗಳ ಚಿತ್ತಾರ
ಮೂಡಿದೆ ಬಾನಂಗಳದಲ್ಲಿ
ನಾನು, ನಮ್ಮದು ಎಂಬ ಅಹಂ
ನಮ್ಮಿಂದ ದೂರ ಹೋಗಲಿ
ನಾವೆಲ್ಲರೂ ಒಂದೇ ಎನ್ನುವ
ಭಾವನೆ ದೀಪಾವಳಿ ಬೆಳೆಸಲಿ
ಜಾತಿ, ಮತಗಳ, ಭೀತಿ ನಮ್ಮಯ
ನಡುವೆ ಎಂದು ಸುಳಿಯದಿರಲಿ
ದ್ವೇಷ,ಅಸೂಯೆ, ಮತ್ಸರ
ನಮ್ಮಿಂದ ದೂರ ಹೋಗಲಿ
ಸ್ನೇಹ, ಪ್ರೀತಿ ಸಂಬಂಧಗಳು
ದೀಪಾವಳಿ ಹಬ್ಬದೀ ಉಜ್ವಲಿಸಲಿ
ನಾವೆಲ್ಲರೂ ಒಂದೇ ಎನ್ನುವ ಭಾವನೆ
ಈ ಹಬ್ಬದಿ ಪ್ರಜ್ವಲಿಸಲಿ
ಸುಖ, ಶಾಂತಿ, ನೆಮ್ಮದಿ
ನಿತ್ಯ ನಿಮ್ಮ ಬಾಳಲಿ ದೊರಕಲಿ
ಅನುದಿನವೂ ದೀಪಾವಳಿ ನಮ್ಮ ಬದುಕಲಿ
ಹೊಸ ಕಾಂತಿಯ ತರಲಿ
ದುಃಖದಲ್ಲಿ ನಗಿಸುವ
ಹಣತೆಯಂತೆ ಬೆಳಗಲಿ
ಜನರ ಮನೆ ಮನಗಳಲ್ಲಿ
ವಿಜಯದೀಪ ಎಂದಿಗೂ ಪ್ರಜ್ವಲಿಸಲಿ...
- ಕೌಶಲ್ಯ ಅಂಬೆಕಲ್ಲು, ಚೆಂಬು
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



