ಸ್ಫೂರ್ತಿ ಸೆಲೆ: ಬದಲಾವಣೆಯೇ ಜಗದ ನಿಯಮ

Upayuktha
0


ಹಲೋ ಹೇಗಿದ್ದೀರಾ?

ನಿಸರ್ಗ ಬದಲಾವಣೆಯ ಮುಖ್ಯ ಪ್ರತಿನಿಧಿ ಎಂದು ಹೇಳಬಹುದು. ಋತುಮಾನಕ್ಕೆ ತಕ್ಕಂತೆ ನಿಸರ್ಗದಲ್ಲಿ ಅನೇಕ ಬದಲಾವಣೆಗಳನ್ನು ನೋಡಬಹುದು. ವಸಂತ ಮಾಸದ ಮೊದಲು ಎಲೆಗಳನ್ನು ಉದುರಿಸಿಕೊಂಡ ಮರಗಳು. ಮತ್ತೆ ಚಿಗಿದು ಮೊದಲಿನಂತೆ ಸುಂದರವಾಗಿ ಕಾಣುತ್ತವೆ.


ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳು ಕೂಡ ನಮಗೆ ಬದಲಾವಣೆಯ ರೀತಿಯನ್ನು ನೆನಪಿಸುತ್ತವೆ. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ಬದಲಾವಣೆಗಳನ್ನು ಗಮನಿಸಬಹುದು.


ನಮಗೆ ವಯಸ್ಸಾಗುತ್ತಾ ಹೋದ ಹಾಗೆ ನಮ್ಮ ಜೀವನದಲ್ಲಿ ಕೂಡ  ಬದಲಾವಣೆಗಳನ್ನು ಗಮನಿಸಬಹುದು. ದೈಹಿಕ ಬದಲಾವಣೆಗಳು ಆದ ಹಾಗೆ ನಮ್ಮ ಮಾನಸಿಕ ಸ್ಥಿತಿಯಲ್ಲಿಯೂ ಕೂಡ ಬದಲಾವಣೆಗಳನ್ನು ಅನುಭವಿಸುತ್ತೇವೆ. 


ಕೆಲವರು ನಮ್ಮ ಮನಸ್ಥಿಗೆ ತುಂಬ ಹತ್ತಿರವಾಗುತ್ತಾರೆ. ಅದೇ ರೀತಿ ಕೆಲವರನ್ನು ನಾವೇ ದೂರ ಇಡುತ್ತೇವೆ. ನಮ್ಮ ಮನಸ್ಸು ಮಾಗುತ್ತ ಹೋದ ಹಾಗೆ ನಮಗೆ ಎಲ್ಲರ ಮುಖವಾಡಗಳು ಅರ್ಥ ಆಗುತ್ತಾ ಬದಲಾವಣೆಗಳು ಕೆಲವೊಮ್ಮೆ ಅನಿವಾರ್ಯ ಅನಿಸುತ್ತವೆ. ನಮ್ಮ ಜೀವನದಲ್ಲಿ ಕೆಲವೊಂದು ದಾರಿ. ಬದಲಾವಣೆಗಳು ನಕಾರಾತ್ಮಕ ಮತ್ತು ಸಕಾರಾತ್ಮಕ  ಅಂಶಗಳಾಗಿ ತಿರುಗುತ್ತವೆ.


ನಮ್ಮ ಜೀವನ ಕೆಲವೊಂದು ದಾರಿ ರನ್ ವೇಯಲ್ಲಿ ನಿಂತಿರುವ ವಿಮಾನ ಇದ್ದಂತೆ. ನಾವು ಬದಲಾವಣೆ ಎಂಬ ಟೇಕಾಫ್ ಕೊಡದಿದ್ದರೆ ಅದು  ಲ್ಯಾಂಡಿಂಗ್ ಸ್ಥಿತಿಯಲ್ಲಿ ಇದ್ದು ಬಿಡುತ್ತದೆ. ಹೀಗಾಗಿ ಬದಲಾವಣೆ ನಮ್ಮ ಜೀವನದ ಅವಿಭಾಜ್ಯ ಅಂಗವೂ ಹೌದು.


ಕೆಲವೊಂದು ಸಾರಿ ನಮ್ಮಲ್ಲಿ ಆಗುವ ಬದಲಾವಣೆಯನ್ನು ನಮ್ಮ ಸುತ್ತಮುತ್ತಲಿನವರು ಕಂಡು ಹಿಡಿದು ಬಿಡುತ್ತಾರೆ. ನೀ ಭಾಳ ಚೇಂಜ್ ಆಗಿದ್ದಿ ಬಿಡಪಾ ಅನ್ನುತ್ತಾರೆ. ಆದರೆ ಅದಕ್ಕೆ ತಾವು ಕೂಡ ಕಾರಣ ಎನ್ನುವುದು ಮರೆತು ಬಿಡುತ್ತಾರೆ. ಬದಲಾವಣೆಯ ಹೆಸರಿನಲ್ಲಿ ನಾವು ನಿಂತ ಭೂಮಿಯನ್ನು, ನಮ್ಮ ಬೇರನ್ನು ಮರೆತರೆ ನಮ್ಮ ಅಧಃಪತನ ನಿಶ್ಚಿತ.


ಅದಕ್ಕೆ ಇಂಗ್ಲೀಷಿನಲ್ಲಿ Be Humble, Master on your emotions and give respect to everyone irrespective of education and qualification ಎನ್ನುತ್ತಾರೆ. ಹೀಗೆ ಬದುಕಿದರೆ ಚೆನ್ನ ಅಲ್ಲವೇ? ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top