ಬರಿಯ ತೆನೆಯ ಲಾಲಿ ಇದಲ್ಲ
ಭೂಮಿ ತಾಯಿಯ ನಗುವಹುದು
ರೈತನ ಭಕ್ತಿ ಪ್ರೀತಿಗಳಿಗೊಲಿದ
ದೇವನ ಕರುಣೆಯ ಕಣ್ಣಹುದು
ಉಂಡ ನೋವಿನ ಗೆರೆಗಳನಳಿಸುತ
ನಲಿವನು ತುಂಬುವ ಭಾವವದು
ಲೋಕದ ಒಳಿತಿನ ಚಿಂತನ ನಡೆಸಿದ
ಒಡಲನು ತಣಿಸುವ ಭಾಗ್ಯವದು
ಜೀವಕೋಟಿಗೆ ಪುಷ್ಟಿಯ ನೀಡುವ
ಜೀವ ದ್ರವ್ಯದ ಮೂಲವದು
ದಣಿದ ಭಾವಗಳಲ್ಲಿ ಜೀವನವರಳುವ
ಹಿಗ್ಗಿನ ಸುಗ್ಗಿಯ ಕಾಲವದು
ಬೇಕು ಎನ್ನಲು ಕೈಗೆ ಎಟುಕುವ
ಸಿರಿ ಸಂಪದವಲ್ಲವದು
ಯಾವುದೋ ಪುಣ್ಯದ ಫಲದಲೊದಗಿದ
ತೀರಿಸಲಾಗದ ಸಾಲವದು
- ವಿಶ್ವನಾಥ ಕುಲಾಲ್ ಮಿತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


