ಮಂಗಳೂರು: ಹಿರಿಯ ಪತ್ರಕರ್ತರು, ಬಹುಭಾಷಾ ಸಾಹಿತಿಗಳು, ಕೊಂಕಣಿಯ ಪತ್ರಿಕೆಗಳಲ್ಲಿ ಸಹ- ಸಂಪಾದಕ, ಸಂಪಾದಕರಾಗಿದ್ದ ರೇಮಂಡ್ ಡಿಕೂನಾ ತಾಕೊಡೆ ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ 17 ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಕೊಂಕಣಿ ಭಾಷಾ ಮಂಡಳ್ ಸಕಲ ಧರ್ಮದ ಕೊಂಕಣಿ ಭಾಷಿಗರ ಸಂಘಟನೆಯಾಗಿದೆ.
ಕಾನೂನು ವ್ಯಾಸಂಗ, ಪತ್ರಿಕಾ ಮಾಧ್ಯಮ ಉನ್ನತ ವ್ಯಾಸಂಗ ಮಾಡಿರುವ ರೇಮಂಡ್ ಡಿಕೂನಾ ತಾಕೊಡೆ 1985 ರಿಂದ ಪತ್ರಕರ್ತರು, ಆಗಲೇ ಕೊಂಕಣಿ ಮಾತೃಭಾಷೆಗೆ ಟೊಂಕಕಟ್ಟಿ ರಾಕ್ಣೊದಲ್ಲಿ ಪ್ರಚಾರಕರು ಆಗಿ ಕೆಲಸ ಮಾಡಿದರು. ನಂತರ ಮಿತ್ರ್ ಕೊಂಕಣಿ ಪತ್ರಿಕೆಯ ಸಹ ಸಂಪಾದಕ ಆಗಿ ಹನ್ನೆರಡು ವರ್ಷಗಳ ಕಾಲ ಉಚಿತವಾಗಿ ಸೇವೆ ನೀಡಿದರು. ಕೆಥೊಲಿಕ್ ಸಭಾದ ಅಮ್ಚೊ ಸಂದೇಶ್ ಪತ್ರಿಕೆಯ ಸಂಪಾದಕ ಆಗಿ ಅದನ್ನು ಲಾಭಕ್ಕೆ ತಂದು ನಂತರ ಕನ್ನಡದ ಜನವಾಹಿಯಲ್ಲಿ ವರದಿಗಾರ ಆದರು. ದೈಜಿವರ್ಲ್ಡ್ ನ ಆರಂಭದಲ್ಲಿ ವರದಿಗಾರ ಆದರು. ನಂತರ ಪಿಂಗಾರ ವಾರ ಪತ್ರಿಕೆ ಆರಂಭಿಸಿದರು. ಕಳೆದ ಇಪ್ಪತ್ತು ವರ್ಷಗಳ ಕಾಲ ಸಂಪಾದಕ ಆಗಿ ಏಕೈಕ ಕ್ರೈಸ್ತರ ಪತ್ರಿಕೆ ನಡೆಸುತ್ತಿದ್ದಾರೆ.
ನಾಲ್ಕು ನಾಟಕ, ಹದಿನೇಳು ಪುಸ್ತಕಗಳು ಪ್ರಕಟ ಆಗಿದೆ.
ಎಂಸಿಸಿ ಬ್ಯಾಂಕ್ ಆರ್ಥಿಕ ಕಷ್ಟದಲ್ಲಿ ಇದ್ದಾಗ ಲಾಭಕ್ಕೆ ತರಲು ತಂಡ ಕಟ್ಟಿ ನಿರ್ದೇಶಕಮಂಡಳಿಯ ಸದಸ್ಯರಾಗಿ ಶ್ರಮಿಸಿದರು, ಡೊನ್ ಬಾಸ್ಕೊ ಹಾಲ್ ಪುನರ್ನಿರ್ಮಾಣ ಮಾಡಲು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ದುಡಿದರು, ಕ್ರಿಸ್ಟೊಫರ್ ಅಸೋಸಿಯೇಷನ್ ಮೆನ್ಸ್ ಹಾಸ್ಟೆಲ್ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಇದ್ದು ಕಟ್ಟಡದ ಹಾಸ್ಟೆಲಿನ ಕಾಯಕಲ್ಪ ಮಾಡಿ ನಿವಾಸಿಗಳಿಗೆ ನೆಮ್ಮದಿ ನೀಡಿದರು. ಕೆಥೊಲಿಕ್ ಸಭಾದ ಆರಂಭಕ್ಕೆ ಮೊದಲು ನಡೆದ ಒ.ಪಿ ತ್ಯಾಗಿ ವಿರುದ್ಧದ ಚಳುವಳಿಯಲ್ಲಿ ವಿದ್ಯಾರ್ಥಿಯಾಗಿ ಸಕ್ರಿಯ ಭಾಗವಹಿಸಿದರು. ಇಂದು ಕೊಂಕಣಿ ಮಾತೃಭಾಷೆಯ ಯೋಗ್ಯ ರಾಜ್ಯ ಮಟ್ಟದ ಅಧ್ಯಕ್ಷ ಆಗಿದ್ದಾರೆ.
ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರು ಇತರ ಪದಾಧಿಕಾರಿಗಳಾಗಿ; ಕಾರ್ಯದರ್ಶಿ ಆಗಿ ವಕೀಲರು ಮತ್ತು ಕೊಂಕಣಿ ನಾಟಕ ಸಭೆಯ ಡೊನ್ ಬೊಸ್ಕೊ ಹೊಲ್ ಪುನರ್ನಿರ್ಮಾಣದ ರೂವಾರಿ ಲಿಸ್ಟನ್ ಡಿಸೋಜ, ಖಜಾಂಚಿ ಆಗಿ ಸ್ಕವ್ಟ್ ಮತ್ತು ಗೈಡ್ ದಕ ಜಿಲ್ಲಾ ಉಪಾಧ್ಯಕ್ಷರು ಮತ್ತು ನಿವೃತ್ತ ಬ್ಯಾಂಕ್ ಯೂನಿಯನ್ ಪದಾಧಿಕಾರಿಗಳು ಆದ ಲಯನ್ ಕೆ ವಸಂತ ರಾವ್, ಉಪಾಧ್ಯಕ್ಷರು ಆಗಿ ಜಿಎಸ್‌ಬಿ ಮಹಿಳಾ ಮಂಡಳ್ ಇದರ ಸಕ್ರಿಯ ಪದಾಧಿಕಾರಿ ಮೀನಾಕ್ಷಿ ಪೈ, ಸಹ ಕಾರ್ಯದರ್ಶಿ ಆಗಿ ಯುವ ಉದ್ಯಮಿ ಪ್ರಸಾದ್ ಶೆಣೈ ಅವಿರೋಧವಾಗಿ ಆಯ್ಕೆಯಾದರು.
ಕೆಬಿಎಂಕೆ ಕಾರ್ಯಕಾರಿಣಿಯ ಅಹ್ವಾನಿತ ಸದಸ್ಯರಾದ ಹಿರಿಯರಾದ ಗೀತಾ ಸಿ ಕಿಣಿ ಚುನಾವಣಾ ಅಧಿಕಾರಿಯಾಗಿ ಆಯ್ಕೆಯನ್ನು ನಡೆಸಿ ಹೊಸ ಪದಾಧಿಕಾಗಳ ಘೋಷಣೆ ಮಾಡಿದರು.
ಕಾರ್ಯಕಾರಿ ಸದಸ್ಯರಾದ ಜೂಲಿಯೆಟ್ ಫೆರ್ನಾಂಡೀಸ್, ಲಾರೆನ್ಸ್ ಪಿಂಟೊ, ಜೊಸ್ಸಿ ಪಿಂಟೊ, ಸುರೇಶ್ ಶೆಣೈ, ಎಡೊಲ್ಫ್ ಡಿಸೋಜ, ಝಿನಾ ಫೆರ್ನಾಂಡೀಸ್, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
