ಕಾಸರಗೋಡು: ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಬಹಳ ವೈಭವಪೂರಿತವಾಗಿ ಹಲವಾರು ಧಾರ್ಮಿಕ, ವೈದೀಕ, ವಿಧಿ ವಿಧಾನಗಳಿಂದ ಶಾಸ್ತ್ರಬದ್ಧವಾಗಿ ನಡೆಯಿತು. ಹಲವಾರು ಭಕ್ತ ಮಹಾಜನರು ಶ್ರೀ ಅಮ್ಮನವರ ದರುಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಈ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವ ವು ಅತ್ಯಂತ ನಯನ ಮನೋಹರವಾಗಿ ಪ್ರಸ್ತುತಗೊಂಡು ಜನ ಮನ ಗೆದ್ದಿತು. ಹರೀಶ್ ಕೂಟತ್ತಜೆ ಅವರು ಸಂಸ್ಥೆಯನ್ನು ಹಾಗೂ ಸಂಸ್ಥೆಯ ಕಲಾವಿದರನ್ನು ಶುಭ ನುಡಿಯಿಂದ ಸ್ವಾಗತಿಸಿದರು. ಸಂಯೋಜನೆ ಹಾಗೂ ನಿರೂಪಣೆಯನ್ನು ಗುರುರಾಜ್ ಕಾಸರಗೋಡು ಅವರು ನಿರ್ವಹಿಸಿದರು. ಸಂಸ್ಥೆಯ ಕಲಾವಿದರು ಭಾಗವಹಿಸಿ ಯಶಸ್ವಿಗೊಳಿಸಿದರು.
ಕೊನೆಯಲ್ಲಿ ಹರೀಶ್ ಕೂಟತ್ತಜೆ, ಡಾ. ಹರಿಕಿರಣ್ ಬಂಗೇರ, ಶೈಲೇoದ್ರ ಭರತ್ ನಾಯ್ಕ್, ಕಿರಣ್ ಶೆಟ್ಟಿ, ಆನಂದ ಜೋಗಿ ಕೂಟತ್ತಜೆ, ಸತೀಶ್ ಬದಿಯಾರ್, ರವಿ ಕಾಂಗೋಡಿ ಮುಂತಾದ ಗಣ್ಯ ಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಗುರುರಾಜ್ ಕಾಸರಗೋಡು ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ಭಾಗವಹಿಸಿದ ಸಂಸ್ಥೆಯ ಎಲ್ಲಾ ಅಪ್ರತಿಮ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ