ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

Upayuktha
0


ಮಂಗಳೂರು: ಭಾರತದ ಲೋಹಪುರುಷ, ರಾಷ್ಟ್ರೀಯ ಏಕತಾ ಶಿಲ್ಪಿ, ಭಾರತ ರತ್ನ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ, ಅಕ್ಟೋಬರ್ 30- 2025 ರಂದು ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ "ರಾಷ್ಟ್ರೀಯ ಏಕತಾ ದಿವಸ"ವನ್ನು ವಿದ್ಯಾರ್ಥಿಗಳ ಕಲ್ಯಾಣ ಪರಿಷತ್ತಿನ ಆಶ್ರಯದಲ್ಲಿ ಸುಂದರವಾಗಿ ಆಚರಿಸಲಾಯಿತು.


ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಕರ್ನಲ್ ನಿಟ್ಟೆ ಗುತ್ತು ಶರತ್ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸೈನಿಕ ಸಂಘದ ಮಾಜಿ ಅಧ್ಯಕ್ಷರು ಭಾಗವಹಿಸಿದರು. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಅಸಾಮಾನ್ಯ ನಾಯಕತ್ವ ಹಾಗೂ ರಾಷ್ಟ್ರ ಏಕೀಕರಣದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ಅವರ ದೃಢತೆ, ಶಿಸ್ತಿನ ನಿಲುವು, ದೇಶಭಕ್ತಿ, ಧೈರ್ಯ, ನಿರ್ಣಯ, ನಾಯಕತ್ವ ಗುಣ, ಸೇವಾ ಮನೋಭಾವ ಸಾಮಾಜಿಕ ಜವಾಬ್ದಾರಿ ಇವೆಲ್ಲವೂ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ಸ್ವಾತಂತ್ರ್ಯ ನಂತರ 562 ಸಂಸ್ಥಾನಗಳನ್ನು ಒಗ್ಗೂಡಿಸಿ ಏಕೀಕೃತ ಭಾರತವನ್ನು ನಿರ್ಮಿಸುವಲ್ಲಿ ಪಟೇಲ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.


ಭಾರತೀಯ ಸಂವಿಧಾನದ 51 (ಎ) ಉಲ್ಲೇಖಿಸಿ, "ಭಾರತದ ಪ್ರಜೆಗಳಾದ ನಮ್ಮೆಲ್ಲರ ಜವಾಬ್ದಾರಿ ಕರ್ತವ್ಯ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು". "ಒಗ್ಗಟ್ಟಿನಲ್ಲಿ ಬಲವಿದೆ" ಎಂಬ ಸಂದೇಶದ ಮೂಲಕ ದೇಶಪ್ರೇಮ ಶಿಸ್ತಿನ ಮಹತ್ವ ಹಾಗೂ ರಾಷ್ಟ್ರೀಯ ಏಕತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.


ಅತಿಥಿಗಳು ತಮ್ಮ ಕಿರು ಪರಿಚಯವನ್ನು ಅವರೇ ಮಾಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಸೈನ್ಯದಲ್ಲಿ ಸೇವೆ ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ನಮ್ಮ ದೇಶದ ರಕ್ಷಣೆಗೆ ಸೇವೆ ಸಲ್ಲಿಸುವುದು ನಮ್ಮ ಅತ್ಯುನ್ನತ ಕರ್ತವ್ಯ  ನೀವು ಕೂಡ ಭವಿಷ್ಯದಲ್ಲಿ ಸೈನ್ಯದಲ್ಲಿ ಸೇರಿ ರಾಷ್ಟ್ರಸೇವೆಯ ಮೂಲಕ ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು  ನೀಡಿದರು.


ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಏಕತಾ ಪ್ರತಿಜ್ಞೆ ಸ್ವೀಕರಿಸಿ ರಾಷ್ಟ್ರದ ಏಕತೆ ಮತ್ತು ಸಹಕಾರದ ಮಹತ್ವವನ್ನು ಮನವರಿಕೆ ಮಾಡಿದರು. "ಏಕತೆಯೇ ಶಕ್ತಿ ವಿಭಜನೆಯೇ ದುರ್ಬಲತೆ" ಎಂಬ ಘೋಷಣೆ ಘೋಷಣೆಯಾಗಿ ಉಳಿಯದೆ ಅದರ ಸದ್ಬಲಕೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತನ್ನು ಆಡಿದರು. ಪಟೇಲ್ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೀವು ಉತ್ತಮವಾದ ನಾಗರಿಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ತಿಳಿಸಿದರು.


ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಎಸ್ ಸಿ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಯು.ಕೆ ಖಾಲಿದ್ ಅವರು ವಿದ್ಯಾರ್ಥಿಗಳು ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ತಮ್ಮ ಪಾತ್ರವನ್ನು ನಿಷ್ಠೆಯಿಂದ ನಿಭಾಯಿಸಬೇಕು. ಏಕತೆ ರಾಷ್ಟ್ರದ ಶಕ್ತಿ, ವಿದ್ಯಾರ್ಥಿಗಳು ತಮ್ಮ ಕರ್ತವ್ಯ, ಜವಾಬ್ದಾರಿ ಮತ್ತು ಶಿಸ್ತಿನೊಂದಿಗೆ ಬೆಳೆಯಬೇಕು. ನೀವು ಎಲ್ಲರೂ ದೇಶದ ಹೆಮ್ಮೆಯ ನಾಗರಿಕರಾಗಬೇಕೆಂದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಮೌಲ್ಯದ ಅರಿವನ್ನು ಮೂಡಿಸಿದರು.


ವಿದ್ಯಾರ್ಥಿ ಕಲ್ಯಾಣದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕರಾದ ಮಾಧವ ಕೆ ಸ್ವಾಗತಿಸಿದರು, ಬಿಎಸ್‌ಸಿ ಫ್ಯಾಷನ್ ಡಿಸೈನ ಮುಖ್ಯಸ್ಥರಾದ ಶ್ರೀಮತಿ ಅಶ್ವಿನಿ. ಎಸ್ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಕುರಿತು ತಿಳಿಸಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಅಧ್ಯಕ್ಷ ಸುದೀಪ್ ರೈ ತೃತೀಯ ಬಿ.ಕಾಂ ವಂದಿಸಿದರು. ವಿದ್ಯಾರ್ಥಿ ಕಲ್ಯಾಣ ಪರಿಷತ್ತಿನ ಕಾರ್ಯದರ್ಶಿ ದ್ವಿತೀಯ ಬಿ ಕಾಂ ರಾಹುಲ್ ಶೆಟ್ಟಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಸೊಗಸಾದ ರಾಷ್ಟ್ರಭಕ್ತಿಯ ಸ್ಪರ್ಶ ನೀಡಲು ವಿದ್ಯಾರ್ಥಿಗಳ ಗುಂಪು "ಏಕತಾ  ಗೀತೆ"ಯನ್ನು ಮನೋಹರವಾಗಿ ಹಾಡಿದರು. ಇದು ಏಕತೆ ಮತ್ತು ಸಹೋದರತ್ವದ ಪ್ರತೀಕವಾಗಿ ಪರಿಣಮಿಸಿತು. ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹ ಭರಿತವಾಗಿ ಪಾಲ್ಗೊಂಡು ದೇಶದ ಏಕತಾ ಸ್ಪೂರ್ತಿಯನ್ನು ಆಚರಿಸಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಶಾಶ್ವತ ಪರಂಪರೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಜಾಯ್ಲಿನ್ ರೋವೇನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top