ದೇರಳಕಟ್ಟೆಯಲ್ಲಿ ಕಾಸರಗೋಡಿನ ತಂಡದಿಂದ ಗಾನ ನೃತ್ಯ ವೈಭವ

Upayuktha
0


 


ಕಾಸರಗೋಡು: ಕಥಾಬಿಂದು ಪ್ರಕಾಶನ ಪ್ರದೀಪ್ ಕುಮಾರ್ ಅವರ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 130ನೇ ವೈವಿಧ್ಯಮಯ ನಿತ್ಯ ನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಹಲವು ಪ್ರಕಾರದ ನೃತ್ಯ ವೈವಿಧ್ಯಗಳೊಂದಿಗೆ ಜರಗಿತು.


ಡಾ. ವಾಣಿಶ್ರೀ ಕಾಸರಗೋಡು ಸಾಹಿತ್ಯ ಪ್ರಸ್ತುತಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರು, ಸಂಸ್ಥೆಯ ವಿಜಯಪುರದ ಕಲಾವಿದರು ಅಂತರಾಷ್ಟ್ರೀಯ ನೃತ್ಯ ಕಲಾವಿದೆ ವಿದುಷಿ ಲಕ್ಷ್ಮೀ ತೆರದಾಳ ಮಠದ ಶಿಷ್ಯೆಯರು, ಸಂಸ್ಥೆಯ ಮಹಿಳಾ ತಂಡ ಸುಭಾಷಿಣಿ ಚಂದ್ರ ಹಾಗೂ ಬಳಗದವರು ವಿನೂತನ ರೀತಿಯಲ್ಲಿ ನೃತ್ಯ ಪ್ರಸ್ತುತಿ ನೀಡಿ ದಾಖಲೆ ಮಾಡಿದರು.


ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ವಾಣಿಶ್ರೀ ಅವರಿಗೆ ಶಾಲು ಹೊದೆಸಿ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್, ಅಚ್ಯುತ ಭಟ್, ಪ್ರಿಷನ್ ಶೆಟ್ಟಿ. ಮುಂತಾದ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಡಾನ್ಸ್ ಜೊತೆಗೆ ಫೈರ್ ಡಾನ್ಸ್, , ರಿಂಗ್ ತಿರುಗಿಸಿಕೊಂಡು ಕೋಲಾಟ ಜೊತೆಗೆ ಮೊಳೆಯ ಮೇಲೆ ನಿಂತು ನೃತ್ಯ, ರಾಮಾಯಣದ ಮುಖ್ಯ ಸನ್ನಿವೇಶಗಳನ್ನು ಭರತನಾಟ್ಯದ ಮೂಲಕ ಪ್ರಸ್ತುತಿ, ಜನಪದ ನೃತ್ಯ, ಸಿನಿಮೀಯ ನೃತ್ಯ, ವೆಸ್ಟರ್ನ್ ನೃತ್ಯ, ತುಳುಬ್ರಹ್ಮ ಪುವೆಂಪು ವಿರಚಿತ ಹಾಡಿಗೆ ಭರತನಾಟ್ಯ, ಸಮೂಹ ಜನಪದ ನೃತ್ಯ, ಕನ್ನಡ ಹಾಡಿಗೆ ನೃತ್ಯ, ಸಮೂಹ ಭರತನಾಟ್ಯ, ಹೀಗೆ  ಬಹುವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಿತು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top