ಮೈಸೂರು: ಮೈಸೂರಿನ ವಿಜಯವಿಠ್ಠಲ ಕಾಲೇಜು ಸಭಾಂಗಣದಲ್ಲಿ ಲೇಖಕಿ ಎಸ್.ಎಲ್. ವರಲಕ್ಷ್ಮೀ ಮಂಜುನಾಥ್ ಅವರ ಮೂರು ಕೃತಿಗಳಾದ ಲೇಖನ ಸಂಕಲನ 'ವಿಚಾರ ಮಂಜರಿ', ಕಥಾ ಸಂಕಲನ 'ಜೀವನರಾಗ', ಕವನ ಸಂಕಲನ 'ಭಾವ ಶರಧಿ' ಕೃತಿಗಳು ಅ.25ರಂದು ಲೋಕಾರ್ಪಣೆಗೊಂಡವು.
ಹಿರಿಯ ಪತ್ರಕರ್ತ ಹಾಗೂ ಕನ್ನಡ ಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಸಂಪರ್ಕ ಹಾಗೂ ಶ್ರೀಗಂಧ ವಲಯ ಪ್ರಮುಖರಾದ ಡಾ.ವಿ. ರಂಗನಾಥ್ ಕೃತಿಗಳನ್ನು ಬಿಡುಗಡೆ ಮಾಡಿದರು. 'ವಿಚಾರ ಮಂಜರಿ' ಲೇಖನ ಸಂಕಲನ ಕುರಿತು ಅಂಶಿಪ್ರಸನ್ನ ಕುಮಾರ್, 'ಜೀವನರಾಗ' ಕಥಾಸಂಕಲನ ಕುರಿತು ನಂಜನಗೂಡು ಜೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಕೊತ್ತಲವಾಡಿ ಶಿವಕುಮಾರ್, ಕವನ ಸಂಕಲನ 'ಭಾವಶರಧಿ' ಕೃತಿ ಕುರಿತು ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್. ಸತ್ಯ ಪ್ರಸಾದ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅ.ಭಾ.ಸಾ.ಪ ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಸ್.ಸುಬ್ರಹ್ಮಣ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅ.ಭಾ.ಸಾ.ಪ. ನಂಜನಗೂಡು ತಾಲೂಕು ಸಮಿತಿ ಅಧ್ಯಕ್ಷ ನಂಜನಗೂಡು ಸತ್ಯನಾರಾಯಣ್, ತಗಡೂರು ಗೋಪಿನಾಥ್, ಎಂ.ಎ
ಮಂಜುನಾಥ್, ಲೇಖಕಿ ಎಸ್.ಎಲ್. ವರಲಕ್ಷ್ಮೀಮಂಜುನಾಥ್ ಉಪಸ್ಥಿತರಿದ್ದರು.
ಶ್ರೀಮತಿ ಶೋಭಾ ನಾಗಶಯನ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ಪಡೆಯಲು ಆಸಕ್ತರಾದವರು ಈ ಕೆಳಗಿನ ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ:9945653784
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


