ಮಳಿಗೆ ಉದ್ಘಾಟಿಸಿದ ನಟ ರಮೇಶ್ ಅರವಿಂದ್ | 11056 ಗ್ರಾಹಕರಿಂದ ಚಿನ್ನ ಖರೀದಿಯ ವಿಶ್ವದಾಖಲೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಡಿಕೆನ್ಸನ್ ರಸ್ತೆಯ ಮಣಿಪಾಲ್ ಸೆಂಟರ್‌ನಲ್ಲಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನ ವಿಸ್ತ್ರತ ಆಭರಣ ಮಳಿಗೆಯ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ಅದ್ದೂರಿಯಾಗಿ ಜರಗಿತು.
ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ 1056 ಗ್ರಾಹಕರು ಚಿನ್ನ ಖರೀದಿಸುವ ಮೂಲಕ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆಯನ್ನು ಸ್ಥಾಪಿಸಿತು. ಇದು ಮುಳಿಯ ಅವರ ಕಲಾತ್ಮಕತೆ ಮತ್ತು ನಾವೀನ್ಯತೆಯ ಪರಂಪರೆಯನ್ನು ದೃಢಪಡಿಸಿತು.
ಬಂಗಾರ ಜೀವನದ ಒಂದು ಭಾಗ
ನಟ ಹಾಗೂ ಮುಳಿಯ ಬ್ಯಾಂಡ್ ಅಂಬಾಸಿಡರ್ ರಮೇಶ್ ಅರವಿಂದ್ ನವೀಕೃತ ಆಭರಣ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಚಿನ್ನ ಎಂದರೇ ಸೌಂದರ್ಯ, ಸುರಕ್ಷತೆ, ಶ್ರೇಷ್ಠತೆ, ಆದ್ದರಿಂದ ಬಂಗಾರ ಎನ್ನುವುದು ನಮ್ಮ ಜೀವನದ ಭಾಗವಾಗಿದೆ. ಅದನ್ನು ಮಾರಾಟ ಮಾಡುವ ರೀತಿ ಪ್ರಾಮಾಣಿಕವಾಗಿರಬೇಕು ಎಂದು ಹೇಳಿದರು.
ಸದಾ ಸಂತೋಷಕ್ಕಾಗಿ ಬನ್ನಿ ಮುಳಿಯಕ್ಕೆ:
ಮುಳಿಯ ಸಮೂಹ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಹಕರೊಂದಿಗೆ ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ನಡೆದುಕೊಳ್ಳುವುದೇ ವ್ಯಾಪಾರ ಧರ್ಮ. ನಮ್ಮ ಹಿರಿಯರು ಹೇಳಿದ್ದು ಅದನ್ನೇ ನಾವು ಇವತ್ತು ಪಾಲಿಸುತ್ತಿದ್ದೇವೆ. ನಮ್ಮಲ್ಲಿನ ಆಭರಣಗಳು ಶುದ್ಧತೆ ಮೀರಿದ ಪರಿಪೂರ್ಣತೆ ಹೊಂದಿವೆ. ಆದ್ದರಿಂದ ಸದಾ ಸಂತೋಷಕ್ಕಾಗಿ ಬನ್ನಿ ಮುಳಿಯಕ್ಕೆ ಎನ್ನುವುದೇ ಮಳಿಗೆಯ ಧ್ಯೇಯ ವಾಕ್ಯವಾಗಿದೆ ಎಂದರು.
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಕೃಷ್ಣವೇಣಿ ಪ್ರಸಾದ್ ಮುಳಿಯ, ಮುಳಿಯ ಮಾರುಕಟ್ಟೆ ಸಲಹೆಗಾರ ವೇಣು ಶರ್ಮ, ಬೆಂಗಳೂರು ಶಾಖಾ ಪ್ರಬಂಧಕ ಸುಬ್ರಹ್ಮಣ್ಯ ಭಟ್, ಬಿಗ್ ಬಾಸ್ ಕನ್ನಡ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
ಅಷ್ಟ ಲಕ್ಷ್ಮಿಯವರು (ಎಂಟು ಮಹಿಳೆಯರು) ವಿವಿಧ ಬಗೆಯ ಆಭರಣಗಳನ್ನು ಅನಾವರಣ ಗೊಳಿಸಿದರು. ಇದೇ ವೇಳೆ ಅರಮೇಶ್ ಅರವಿಂದ್ ವಿಶೇಷ ರಿಂಗ್ ವಾಚನ್ನು ಅನಾವರಣಗೊಳಿಸಿದರು.
ಬೆಂಗಳೂರಿನ ಮುಳಿಯ ವಿಸ್ತೃತ ಶೋರೂಮ್ 4000 ಚದರ ವಿಸ್ತೀರ್ಣ ಹೊಂದಿದ್ದು, ವಿಶಾಲ ಪಾರ್ಕಿಂಗ್, ಚಿನ್ನ ಬೆಳ್ಳಿ, ವಜ್ರ, ವಾಚುಗಳು ಹಾಗೂ ಗಿಫ್ಟ್ ಐಟಂ ಸೇರಿದಂತೆ ವಿವಿಧ ಬಗೆಯ ಚಿನ್ನಾಭರಣಗಳ ವಿಶೇಷ ಕೌಂಟರ್ ಇರಲಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

