ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು 10 ದಿನಗಳ ಕಾಲ ಬಹಳ ಶಾಸ್ತ್ರಬದ್ಧವಾಗಿ ಧಾರ್ಮಿಕ, ವೈದೀಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಈ ಶುಭ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಸಂಸ್ಥೆಯ ಸಾಂಸ್ಕೃತಿಕ ಕಲಾ ವೈಭವವು ಜನಮನ ರಂಜಿಸಿತು.
ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಹಾಗೂ ನಿರೂಪಣೆಯೊಂದಿಗೆ ಕಾರ್ಯಕ್ರಮ ನಡೆಯಿತು. ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಶ್ವೇತಾ ಹೊಳ್ಳ, ಐಶ್ವರ್ಯ ಆರ್ ಪೂಜಾರಿ, ಸಮೃದ್ಧಿ ಎಂ ಕೆ, ಸಾನ್ವಿ ಆರ್ ರೈ, ಧೀಕ್ಷಾ ಕುಲಾಲ್, ಸನುಷಾ ಸುಧಾಕರನ್, ಜಯಪ್ರಭಾ ವೈ, ಪ್ರಮೀಳಾ ಕೆ, ಪನ್ವಿತಾ ಜಿ, ಹೃತಿಕಾ, ಆಧ್ಯಾ ಎಂ ಶೆಟ್ಟಿ, ಇಶಾನ್ ಆರ್ ಶೆಟ್ಟಿ, ತೇಜಸ್ ಹೊಳ್ಳ, ಭಾನ್ಸಿ ಕುಲಾಲ್, ಧನ್ವಿ ರೈ, ತೇಜಸ್, ತೇಜೂಷ, ಸಾನ್ವಿ ಶೆಟ್ಟಿ, ಮನ್ವಿತ್ ರೈ, ಶ್ರೀರಾಗ್, ಮೌಲ್ಯ ಶೆಟ್ಟಿ, ನಿಶಿತಾ ಎ ಆರ್ ಮುಂತಾದ ಸಂಸ್ಥೆಯ ಅಪ್ರತಿಮ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಗಾಯಕ ವಿಜಯ ಶಂಕರ, ರವೀಂದ್ರ ರೈ, ರಾಜೇಶ್ವರಿ ಎಂ ವಿ, ರಾಘವೇಂದ್ರ ಚಡಗ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಗುರುರಾಜ್ ಅವರಿಗೆ ಶಾಲು ಹೊದೆಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಭಾಗವಹಿಸಿದ ಎಲ್ಲಾ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


