ಮೂಡುಬಿದಿರೆ: ಮಂಗಳಗಂಗೋತ್ರಿಯ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರಕಾಲೇಜು ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ 19ನೇ ಬಾರಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.
ಸೆಮಿಫೈನಲ್ ಹಂತದಲ್ಲಿ ಆಳ್ವಾಸ್ ಕಾಲೇಜು, ಉಜಿರೆಯ ಎಸ್‌ಡಿಎಮ್ ಕಾಲೇಜನ್ನು 3-0 ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೆ ಅರ್ಹತೆ ಗಳಿಸಿತು.
ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು, ಮಂಗಳೂರಿನ ಎಸ್‌ಡಿಎಂಬಿಬಿಎಂ ಕಾಲೇಜನ್ನು 3-0 ನೇರ ಸೆಟ್‌ಗಳಲ್ಲಿ ಸೋಲಿಸಿ, 15ನೇ ಬಾರಿ, ಕೆಮ್ಮಾರ ಬಾಲಕೃಷ್ಣ ಗೌಡ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ಪುರುಷರ ವಿಭಾಗದಲ್ಲಿ ಪಡೆದುಕೊಂಡಿತು. ಅಂತೆಯೇ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ತಂಡ ಮೂರನೇ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.