ವಿವಿಧ ವಯಸ್ಸು, ಜೀವನದ ಹಂತಗಳು, ಲಿಂಗ ಆಧರಿಸಿ, ಪ್ರತಿ ಆಹಾರ ಗುಂಪಿನಿಂದ, ಪ್ರತಿದಿನ ಇವರು ಏನು, ಎಷ್ಟು ಬಾರಿ ತಿನ್ನಬೇಕು, ಇವರ ಶರೀರದ ಅವಶ್ಯಕತೆಗಳಿಗೆ ತಕ್ಕಂತೆ, ಉತ್ತಮ ಪೌಷ್ಟಿಕತೆ ಸಿಗಬೇಕು, ಈ ರೀತಿಯ ಆಹಾರದ ಬಗೆಗಿನ ಮಾರ್ಗಸೂಚಿ ಕೊಟ್ಟಿದೆ, ಆಸ್ಟ್ರೇಲಿಯಾದ ಆಹಾರ ಮಾರ್ಗದರ್ಶಿ. ಬಹಳ ಜನ ತೂಕ ಇಳಿಸಬೇಕೆನ್ನುವವರು, ಕಡಿಮೆ ಸಲ ತಿನ್ನಬೇಕು. ಆರೋಗ್ಯವಂತ ತೂಕದ ವಲಯದಲ್ಲಿರುವವರು, ಸಾಮಾನ್ಯರಿಗಿಂತ ಎತ್ತರವಾಗಿರುವವರು, ಶಾರೀರಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುವವರು ಇವರಿಗೆ ಬೇರೆಯವರಿಗಿಂತ ಹೆಚ್ಚು ಆಹಾರ ಬೇಕಾಗುತ್ತದೆ.
ಆದರ್ಶವೆಂದರೆ ಹೆಚ್ಚಿನ ಬಡಿಸುವಿಕೆಯನ್ನು, ತರಕಾರಿಗಳು, ಹಣ್ಣುಗಳು, ದ್ವಿದಳ ಧಾನ್ಯಗಳ ಗುಂಪುಗಳಿಂದ ಆರಿಸಿಕೊಳ್ಳಬೇಕು. ಹಾಲು, ಮೊಸರು, ಚೀಸ್ ಮಾಂಸ, ಕೋಳಿ, ಮೀನು, ಮೊಟ್ಟೆ ಇವುಗಳೊಂದಿಗೆ, ಕರಗದ/ಅತೃಪ್ತ (unsaturated) ಕೊಬ್ಬು/ಎಣ್ಣೆಗಳಿಂದಲೂ ಸ್ವಲ್ಪ ಪಡೆಯಬೇಕು.
ಇದಕ್ಕಾಗಿ 5 ಆಹಾರ ಗುಂಪುಗಳಿಂದ ಅವರವರ ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚು ದಿನಗಳಲ್ಲಿ, 2 ಊಟಗಳಲ್ಲಿ ರೊಟ್ಟಿ ಅಥವಾ ಧಾನ್ಯಗಳನ್ನು, ಊಟದ ಭಾಗ ಮಾಡಿಕೊಳ್ಳಿ. ತೂಕ ಇಳಿಸಬೇಕೆನ್ನುವವರು, ದಿನಾ 2 ಬಾರಿ, ತರಕಾರಿಗಳನ್ನು ಮರೆಯದೇ ತಿನ್ನಿ. ಊಟದ 1/3 ಭಾಗ ತರಕಾರಿಗಳಿರಲಿ. ತೂಕ ಇಳಿಸಲು, ಊಟದ 1/2 ಭಾಗ ತರಕಾರಿಗೆ ಮೀಸಲಿಡಿ. ಸಲಾಡ್ ಆಗಿ, ಅಥವಾ ತರಕಾರಿಗಳನ್ನು ಉಪ ಆಹಾರದಂತೆ ಹೆಚ್ಚು ಸಲ ಬಡಿಸಿ. ಇದರಿಂದ ಇತರ ಆಹಾರ ತೆಗೆದುಕೊಳ್ಳುವಿಕೆ, ಕಡಿಮೆಯಾಗುತ್ತದೆ.
ಪ್ರತಿದಿನ ವಿವಿಧ ಬಣ್ಣಗಳ, ವೈವಿಧ್ಯಮಯ ತರಕಾರಿಗಳನ್ನು ಬಳಸಿ. ಎರಡು ಊಟಗಳಲ್ಲಿ, ಹಣ್ಣುಗಳನ್ನು ಸ್ವೀಕರಿಸಿ. ಊಟದಲ್ಲಿ ಕಡಿಮೆ ಕೊಬ್ಬಿರುವ ಹಾಲು, ಮೊಸರುಗಳನ್ನು ತಪ್ಪದೆ ಬಳಸಿ. ದೇಹಕ್ಕೆ ಬೇಕಾದ ಕೆಲರಿಗಳ ಲೆಕ್ಕದಲ್ಲಿ ಹೇಳುವುದಾದರೆ 500ರಿಂದ ಕಿಲೋಜೋಲ್ಸ್ (kilojoules) ಪಡೆಯಲು, 1 ಕಪ್ ಅಥವಾ 250 ಮಿಲಿ ಲೀಟರ್ ತಾಜಾ ಹಾಲು, ಅಥವಾ ಮಜ್ಜಿಗೆ / 200 ಗ್ರಾಮ್ ಮೊಸರು / 1 ಕಪ್ ಅಥವಾ 250 ಮಿಲಿ ಲೀಟರ್ ಅಕ್ಕಿ/ ಸೊಯಾ ಅಥವಾ ಇತರ ಧಾನ್ಯದ ಗಂಜಿ ಸಾಕು. 100 ಗ್ರಾಂ ಬಾದಾಮಿ (ಸಿಪ್ಪೆಯೊಂದಿಗೆ) ಹಾಲು ಮೊಸರಿನಷ್ಟು ಕ್ಯಾಲ್ಸಿಯಂ ಕೊಡುತ್ತೆ. ಹಣ್ಣು 2 ಬಾರಿ, ಹಸಿರು ಸೊಪ್ಪು 5 ಬಾರಿ, 2 ಬಾರಿ ಗಂಜಿಯಿರುವ ತರಕಾರಿ ತಿಂದರೆ, 500ರಿಂದ 600 ಕಿಲೋ ಜೋಲ್ಸ್ ಸಿಗುತ್ತೆ. ಕ್ರಿ.ಶ 1900ರಲ್ಲಿ ದಕ್ಷಿಣ ಭಾರತದವರು ತಿನ್ನುತ್ತಿದ್ದ ಆರೋಗ್ಯಕರ.
ಆಹಾರ :- ನಮ್ಮ ಮುತ್ತಜ್ಜ ಅವರ ಹಿಂದಿನವರು, ಶಕ್ತಿಶಾಲಿಗಳಾಗಿ ದೀರ್ಘ ಕಾಲ ಬದುಕುತ್ತಿದ್ದರು. ಮುತ್ತಜ್ಜ 88 ವರ್ಷ ಬಾಳಿದರೆ, ಮುತ್ತಜ್ಜಿ 92 ವರ್ಷ ಬಾಳಿದರು. ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ತರಹ ರೋಗಗಳಿಂದ, ನರಳಲಿಲ್ಲ. 86 ವರ್ಷದ ನನ್ನ ತಾಯಿ ಗಿರಿಜಾ, 85 ವರ್ಷದ ನನ್ನ ಅತ್ತೆ ಸರಸ್ವತಿ ಹಾಗೂ ಮಾಮಿ ರಾಜಲಕ್ಷ್ಮಿ ಅವರುಗಳು ಹೇಳಿದಂತೆ, ಅಲ್ಲದೇ ಇನ್ನೂ ಎಷ್ಟೋ 80 ವರ್ಷ ಛಿಟಿದ ಹಿರಿಯರು ವಿವರಿಸಿದಂತೆ, ಅವರು ಚಿಕ್ಕವರಿದ್ದಾಗ ಹೆಚ್ಚು ಜನ ಸಸ್ಯ ಜನ್ಯ ತರಕಾರಿಗಳನ್ನು, ಹಾಲು, ಮೊಸರು, ಬೆಣ್ಣೆ, ತುಪ್ಪ, ಸೇವಿಸುತ್ತಿದ್ದರು. ನೈತಿಕ ಹಾಗೂ ಧಾರ್ಮಿಕ ಕಾರಣಗಳಿಂದ ಮೊಟ್ಟೆ, ಮಾಂಸ, ತಿನ್ನುತ್ತಿರಲಿಲ್ಲ.
ಪೌಷ್ಠಿಕತೆ:- ಆ ಕಾಲದಲ್ಲಿ ಮುತ್ತಜ್ಜ ಮುತ್ತಜ್ಜಿಯರು ಶ್ರೀಮಂತರಾಗಿರಲಿಲ್ಲ. ಹೀಗಾಗಿ ಅವರಿಗೆ ಸಿಕ್ಕಿದ, ಅವರು ಕೊಳ್ಳಬಹುದಾದ ಸಸ್ಯಾಹಾರಿ ಆಹಾರ ತಿನ್ನುತ್ತಿದ್ದರು. ಧಾರ್ಮಿಕ ಉತ್ಸವಗಳಿಗಾಗಿ aving gluttony ಉಳಿಸುತ್ತ ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿದ್ದರು. ಪ್ರತಿದಿನ ಅಕ್ಕಿಯನ್ನು ಮುಖ್ಯ ಆಹಾರವಾಗಿ, ಹಲವಾರು ಬಾರಿ ತಿನ್ನುತ್ತಿದ್ದರಂತೆ.
ದೋಸೆ ಇಡ್ಲಿಗಾಗಿ lentils ನ್ನು ತಿಂಗಳಿಗೊಮ್ಮೆ ಬಳಸುತ್ತಿದ್ದರು. ಸಿಕ್ಕಿದಾಗ ತರಕಾರಿಗಳನ್ನು. ಆಯಾ ಕಾಲಕ್ಕೆ ಲಭ್ಯವಾಗುವ ಹಣ್ಣುಗಳನ್ನು ಅಪರೂಪಕ್ಕೆ ಬಳಸುತ್ತಿದ್ದರು. ಪ್ರತಿದಿನ ಒಂದು ಚಮಚ ಎಳ್ಳೆಣ್ಣೆ (sesame) ಮಾತ್ರ ಬಳಸುತ್ತಿದ್ದರು. ಪ್ರತಿದಿನ ತಂಗಳನ್ನ, ಸ್ಥಳೀಯ ಬೆಲ್ಲ ಅಥವಾ ಹಸಿರು ಮೆಣಸಿನಕಾಯಿ ಅಥವಾ ಲಿಂಬೆ/ಮಾವಿನ ಉಪ್ಪಿನಕಾಯಿಯೊಂದಿಗೆ ತಿನ್ನುತ್ತಿದ್ದರು. ದಿನ 2-3 ಕಪ್ ಹಾಲು, ಸಾಧ್ಯವಾದಾಗ ಸಾಕಷ್ಟು ತುಪ್ಪ ತಿನ್ನುತ್ತಿದ್ದರು.
ಪ್ರತಿವರ್ಷ ಹಬ್ಬಗಳಲ್ಲಿ, 2-3 ಬಾರಿ ಮಾತ್ರ, ಮನೆಯಲ್ಲಿ ಮಾಡಿದ ಸಿಹಿ ಹಾಗೂ ಖಾರ ತಿಂಡಿಗಳನ್ನು ಸೇವಿಸುತ್ತಿದ್ದರು. ಹೆಚ್ಚು ಮಜ್ಜಿಗೆ ಬಳಸುತ್ತಿದ್ದರು. ಆಗ ಗೋಧಿಯ ಚಪ್ಪಾತಿ, ಪೂರಿ, ಹೆಸರೇ ಇರಲಿಲ್ಲ. ಸ್ವಲ್ಪ ಶ್ರೀಮಂತಿಕೆ ಬಂದಂತೆ ಪ್ರತಿದಿನ ಅಕ್ಕಿ ಮುಖ್ಯ ಆಹಾರವಾಗಿ ಅನ್ನ, ಇಡ್ಲಿ, ದೋಸೆ, ಪೊಂಗಲ್ ಬಳಸುತ್ತಿದ್ದರು. ಪ್ರತಿ ಒಬ್ಬರೂ ದಿನಾ ಬಾಳೆಹಣ್ಣು ತಿನ್ನುತ್ತಿದ್ದರು. ಅಡಿಗೆಯಲ್ಲಿ ತೆಂಗಿನಕಾಯಿ ತುರಿ, ಎಳನೀರು, ಹಾಗೂ ಕೊಬ್ಬರಿ ಎಣ್ಣೆ, ಉಪಯೋಗಿಸುತ್ತಿದ್ದರು. ನಟ್ಸ್ ಹಾಗೂ ಡ್ರೈ ಫ್ರೂಟ್ಸ್ ಗಳನ್ನು ತಿನ್ನುತ್ತಿರಲಿಲ್ಲ.
ಭಾರತದಲ್ಲಿ ಸಸ್ಯಾಹಾರ :- ಹಿಂದೂಗಳ ಆಹಾರ, ಪದ್ಥತಿಗೆ ವೇದಗಳು, ಭಗವದ್ಗೀತೆ ಮಾರ್ಗದರ್ಶನ ಕೊಟ್ಟಿವೆ. ಆಹಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ವಿಧಿಗಳ ಪಾಲನೆ ಇವೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ “ನೀವು ಮಾಡುವುದೆಲ್ಲ, ನೀವು ತಿನ್ನುವುದೆಲ್ಲ, ನೀವು ಅರ್ಪಿಸುವುದು, ಕೊಡುವುದು, ನೀವು ಆಚರಿಸುವ ಕ್ರಿಯೆಗಳು ಎಲ್ಲವನ್ನೂ, ನನಗೆ ಅರ್ಪಿಸುತ್ತಿದ್ದೀರಿ ಎಂದು ತಿಳಿದು, ಮಾಡಿರಿ.”. ಹೀಗಾಗಿ ನಮ್ಮ ದೇಹ ಹಾಗೂ ಮನಸ್ಸುಗಳ ಗುಣಮಟ್ಟ ಹಾಗೂ ನಾವು ಸೇವಿಸುವ ಆಹಾರಕ್ಕೂ ಸಂಬಂಧವಿದೆ. ಹೀಗಾಗಿ ಬಹಳ ಜನ ಸಸ್ಯಾಹಾರವನ್ನೇ ಅವಲಂಭಿಸಿದ್ದಾರೆ.
ಈಗಿನ ಮಕ್ಕಳು ಹಾಗೂ ಯುವಜನರ ಆಹಾರ ಶೈಲಿ:- ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು, ಅವರು ತಿನ್ನುವ ಹವ್ಯಾಸಗಳು ಹಾಗೂ ಜೀವನಶೈಲಿ ಗಮನಿಸಿ. ಆಧುನಿಕ ಕಾಲದಲ್ಲಿ ಮಕ್ಕಳು ರೂಢಿ ಮಾಡಿಕೊಂಡಿರುವ ಆಹಾರ ಪದ್ಥತಿ, ಅವರ ಆರೋಗ್ಯಕ್ಕೆ ಅಪಾಯಕಾರಿ. Fast food ರೆಸ್ಟೊರೆಂಟ್‌ಗಳಲ್ಲಿಯ ಆಹಾರಗಳಲ್ಲಿ, ಪೌಷ್ಠಿಕಾಂಶಗಳ ಕೊರತೆಯೊಂದಿಗೆ, ರೋಗ ತರುವ ಸಾಧ್ಯತೆ ಹೆಚ್ಚು. ಇದು ತಕ್ಷಣ ತಿಳಿಯದಿದ್ದರೂ, ಮಕ್ಕಳ ಮುಂದಿನ ಜೀವಮಾನದಲ್ಲಿ, ಇದರ ಕೆಟ್ಟ ಪ್ರಬಾವ ಖಂಡಿತ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಹಿಲೆಗಳು, ಮಧುಮೇಹ ಸಾಲುಸಾಲಾಗಿ ಆಕ್ರಮಿಸಲು ಕಾದು ನಿಂತಿವೆ. ಪೌಷ್ಠಿಕಾಂಶದ ಕೊರತೆ, ಮಕ್ಕಳ ಮಾನಸಿಕ ಅಭಿವೃದ್ಧಿಗೂ ತಡೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.
ಕಂಪ್ಯೂಟರ್ ಆಟಗಳನ್ನು ಆಡುತ್ತ, ಅಂತರ್ಜಾಲ ಹುಡುಕುವುದೇ ಈಗಿನ ಮಕ್ಕಳು ಸಮಯ ಕಳೆಯುವ ಮುಖ್ಯ ಸಾಧನ. ಆಗಲೂ ಸುಮ್ಮನೆ ಕೂರಲಾಗದೆ, ಸಿಕ್ಕ ಸಿಕ್ಕ ಕುರುಕಲುಗಳನ್ನು ಮೆಲ್ಲುತ್ತಾ, ಗಂಟೆಗಟ್ಟಲೆೆ ಒಂದೇ ಸ್ಥಳದಲ್ಲಿ, ಒಂದೇ ಸ್ಥಿತಿಯಲ್ಲಿ ಕೂತಿರುವುದರಿಂದ ಚಿಕ್ಕ ವಯಸ್ಸಿನಲ್ಲೇ ದಢೂತಿ ಆದರೆ ಶಕ್ತಿ ಇರದ ಪೊಳ್ಳು ದೇಹ, ಕಾಣಿಕೆಯಾಗಿ ಸಿಗುತ್ತದೆ. ಆಟದ ಮೈದಾನದಲ್ಲಿ ಬಿಸಿಲು, ಮಳೆಗಳಲ್ಲಿ ಓಡಾಡದೇ, ನಡೆದಾಡದೇ, ಆಟಗಳನ್ನು ಆಡದೇ, ಶಾರೀರಿಕ, ಹಾಗೂ ಮಾನಸಿಕ ಆರೋಗ್ಯ, ಅಭಿವೃದ್ಧಿಯಾಗುತ್ತಿಲ್ಲ.
ಸಾಮಾಜಿಕವಾಗಿ ಸಂಬಂಧಗಳು, ಇತರರೊಂದಿಗೆ ಸಹಕರಿಸಿ, ಸಹಾಯ ಮಾಡಿ, ಹಂಚಿಕೊಂಡು ಬಾಳುವ, ಇತರರೊಂದಿಗೆ ಮಾತನಾಡುವ ಪ್ರವೃತ್ತಿಯೇ ಮಾಯವಾಗಿದೆ. ಪ್ರತಿ ಮಗುವೂ ತನ್ನಷ್ಟಕ್ಕೆ ತಾನೇ, ಒಂದು ದ್ವೀಪವಾಗಿ, ಪಾಲಕರಿಂದ, ಬಂಧು ಬಾಂಧವರಿಂದ, ಗೆಳೆಯರಿಂದ ದೂರ ದೂರವಾಗುತ್ತಾ, ಏಕಾಂತವಾಸದತ್ತ ಹೋಗುತ್ತಿದ್ದಾರೆ.
ಆಹಾರ ಆಯ್ಕೆಗಳ ಮೇಲೆ ವೈಯಕ್ತಿಕ ಇಷ್ಟಗಳು, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಪರಿಸರದ, ರಾಜಕೀಯ ಪ್ರಭಾವಗಳಿರುತ್ತವೆ. ಸದ್ಯ ನಾವೆಲ್ಲ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಕಡಿಮೆ ತಿನ್ನುತ್ತಾ, ಕೈಗಾರಿಕೆಗಳು ತಯಾರಿಸಿದ, ಸಂಸ್ಕರಿಸಿದ ಆಹಾರಪದಾರ್ಥಗಳನ್ನು, ಹೆಚ್ಚು ಬಳಸುತ್ತಿದ್ದೇವೆ. ನಾರು ಪದಾರ್ಥಗಳನ್ನು ಹಿಂದಿನವರಿಗಿಂತ ಇಂದು ನಾವು, ಕಡಿಮೆ ಬಳಸುತ್ತಿದ್ದೇವೆ.
ಅಪಾಯಕಾರಿ ಕೊಲೆಗಾರ ಅನಾರೋಗ್ಯಕರ ತಿನ್ನುವಿಕೆ :- ಅಮೇರಿಕಾದಲ್ಲಿ, ಧೂಮ್ರಪಾನದ ನಂತರ, ಎರಡನೇ ದೊಡ್ಡ ಕೊಲೆಗಾರ ಯರು ಬಲ್ಲಿರಾ ? ಅದು ಅನಾರೋಗ್ಯಕರ ತಿನ್ನುವಿಕೆ. ಅಲ್ಲಿಯ ಶೇಕಡಾ 60 ಜನ, ಸ್ಥೂಲಕಾಯರಾಗಿರುವುದಕ್ಕೆ ಕಾರಣ, ಸಂಸ್ಕರಿಸಿದ ಆಹಾರ ಹಾಗೂ Fast Food.. ಗರಿಷ್ಟ ಕೊಬ್ಬು ಹಾಗೂ ಸಕ್ಕರೆಯ ಅಂಶಗಳು ಅನಾರೋಗ್ಯಕಾರಿ ಆದರೂ, ದಾಸ್ಯಕ್ಕೆ ಒಳಪಡಿಸುವ ಶಕ್ತಿ ಇವು ಹೊಂದಿವೆ.
ಎರಡನೇಯದಾಗಿ, ಆಕ್ರಮಣಕಾರಿ ಪ್ರಚಾರ, ಮಾರುಕಟ್ಟೆ ದಾರಿಗಳು, ಬೇಕಾದದ್ದಕ್ಕಿಂತ ಹೆಚ್ಚು ಪ್ರಮಾಣದ ಆಹಾರ ತೆಗೆದುಕೊಳ್ಳುವಿಕೆಯತ್ತ, ನಮ್ಮನ್ನು ದೂಡುತ್ತವೆ. ಕೃಷಿ ಉತ್ಪನ್ನಗಳ ಕಾದಿರಿಸುವಿಕೆಯ ಮಿತಿಗಳು, ನಮ್ಮಲ್ಲಿಯ ಸಂಸ್ಕರಣಾ ತಂತ್ರಜ್ಞಾನ, ಕಡಿಮೆ ಗುಣಮಟ್ಟದ ಆಹಾರ ಕೊಡುತ್ತಿವೆ. ಕಳೆದ ವರ್ಷ ಸೀಸರ್ ಬಾರ್ಬರ್ ಎಂಬ 56 ವರ್ಷದ ಮಧುಮೇಹ ರೋಗಿ ಹಾಗೂ 2 ಬಾರಿ ಹೃದಯಘಾತವಾಗಿದ್ದ ವ್ಯಕ್ತಿ, ಮ್ಯಾಕ್ ಡೋನಾಲ್ಡ್, ಬರ್ಗರ್ ಕಿಂಗ್, ಕೆಎಫ್‌ಸಿ, ಹಾಗೂ ವೆಂಡೀಸ್‌ಗಳ ಮೇಲೆ ಖಟ್ಲೆ ಹಾಕಿದ್ದಾನೆ.
ಆತನ ಅನಾರೋಗ್ಯಕ್ಕೆ ಕಾರಣ, ಇವುಗಳಲ್ಲಿ ಆತ ಬಹಳ ವರ್ಷ ಸತತ ತಿಂದಿದ್ದು ಇವರಾರೂ ಅಲ್ಲಿಯ ಆಹಾರ ಆತನ ಆರೋಗ್ಯ ಹಾಳು ಮಾಡಬಲ್ಲದು ಎಂದು ತಿಳಿಸಲಿಲ್ಲ ಎಂಬುದೇ ಆತನ ದೂರಿನ ಸಾರಾಂಶ. ಅಮೇರಿಕಾ ಕೃಷಿ ಇಲಾಖೆ ಹೇಳಿರುವಂತೆ, ಸಾಮಾನ್ಯ ವಯಸ್ಕ ಗಂಡಸಿಗೆ, ಪ್ರತಿದಿನದ ಅವಶ್ಯಕತೆ 2800 ಕಿಲೋ ಕೆಲರಿ. ಗರಿಷ್ಟ 93 ಗ್ರಾಂ ಕೊಬ್ಬು ಬೇಕು. ಆದರೆ fast food ನ ಒಂದು ತಿಂಡಿ, ಇಷ್ಟನ್ನೂ ಒಂದೇ ಬಾರಿ ಕೊಡುತ್ತದೆ.
ಸಂಶೋಧಕರು ಕಂಡು ಹಿಡಿದಿರುವಂತೆ, ದೇಹದ ಹಸಿವು, ಆಹಾರದ ಆವಶ್ಯಕತೆಯನ್ನು, ಕೆಲವು ಹಾರ್ಮೋನುಗಳು ನಿಯಂತ್ರಿಸುತ್ತವೆ. ಹಿಂದೆ ಸಾಮಾನ್ಯ ಸ್ಥಿತಿಯಲ್ಲಿ, ಈ ಹಾರ್ಮೋನುಗಳು, ಆಹಾರದ ಬಳಕೆ ನಿಯಂತ್ರಿಸಿ, ಸರಿಯಾದ ದೇಹದ ತೂಕಕ್ಕೆ ಸಹಾಯ ಮಾಡುತ್ತಿದ್ದವು ಉದಾಹರಣೆಗೆ ಕೊಬ್ಬಿನ ಕೋಶಗಳು ಲೆಪ್ಟಿನ್ ಎಂಬ ರಸವನ್ನು ಸತತ ಸ್ರವಿಸುತ್ತವೆ. ಇವು ರಕ್ತಪ್ರವಾಹದಲ್ಲಿಯ ಕೊಬ್ಬಿನ ಮಟ್ಟ, ದೇಹದಲ್ಲಿಯ ಕೊಬ್ಬಿನ ಸಂಗ್ರಹ ಸೂಚಿಸುತ್ತದೆ.
ಮೆದುಳಿನಲ್ಲಿಯ ಹೈಪೊಥಾಲ್ಮಸ್ ಎಂಬ ಕೇಂದ್ರ, ಈ ಸೂಚನೆ ಗಮನಿಸಿ, ವ್ಯಕ್ತಿಯ ಆಹಾರ, ಸ್ವಭಾವ, ಸಂಯೋಜಿಸುತ್ತದೆ ಮತ್ತು ಕೊಬ್ಬಿನ ಸಂಗ್ರಹ ಒಂದೇ ರೀತಿ ಇರುವಂತೆ ಮಾರ್ಗದರ್ಶನ ನೀಡುತ್ತದೆ. ಆದರೆ ತೂಕ ಹೆಚ್ಚಾದಂತೆ, ವ್ಯಕ್ತಿಗಳು, ಲೆಪ್ಟಿನ್ ಶಕ್ತಿಗೆ ಪ್ರತಿರೋಧ ಒಡ್ಡುತ್ತಾರೆ. ಅಮೇರಿಕಾದ ವಾಶಿಂಗ್‌ಟನ್ ವಿಶ್ವ ವಿದ್ಯಾಲಯದ ಮೈಕಲ್ ಸ್ಕಾರ್ಝ್ ವಿವರಿಸುವಂತೆ ದೇಹದಲ್ಲಿಯ ಕೊಬ್ಬು ಹೆಚ್ಚಿದಂತೆ, ಈ ಹಾರ್ಮೋನುಗಳಿಗೆ ಇಂಥ ವ್ಯಕ್ತಿಗಳ ಮೆದುಳು ಸ್ವಂದಿಸುವ ಶಕ್ತಿ ಕಳೆದುಕೊಳ್ಳುತ್ತದೆ.
ಹೆಚ್ಚು ಹೆಚ್ಚು ದಪ್ಪವಾದಂತೆ, ಹೆಚ್ಚು ಲೆಪ್ಟಿನ್ ಸಿದ್ಧವಾಗಿ, ಮೆದುಳಿನ ಹೈಪೋಥಾಲ್ಮಸ್ ಕೇಂದ್ರ ಹೆಚ್ಚು ಹೆಚ್ಚು ಸೂಕ್ಮತೆ ಕಳೆದುಕೊಳ್ಳುತ್ತದೆ. ಹೀಗಾಗಿ ಕ್ರಮೇಣ ಹೆಚ್ಚಿದ ಕೊಬ್ಬಿನಂಶವನ್ನೇ, ಇದು ಸಾಮಾನ್ಯ ಎಂದು ತಿಳಿದುಬಿಡುತ್ತದೆ. ಇದೇ ರೀತಿ, ಸಕ್ಕರೆ ಅಥವಾ ಸಿಹಿ ಆಹಾರದ ಆಕರ್ಷಣೆ ಹಾಗು ಮೋಹ, ಮಾದಕ ಪದಾರ್ಥಗಳಾದ ಮಾರ್ಫಿನ್, ನಿಕೋಟಿನ್, ಹೆರಾಯಿನ್‌ಗಳಂತೆ, ಬಿಡಲಾಗದ ಆಕರ್ಷಣೆಯ ಜೇಡರ ಬಲೆಯಾಗುತ್ತಿದೆ.
-ಎನ್.ವ್ಹಿ.ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


