ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ
ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ),ಕನ್ನಡ ಗ್ರಾಮ ಕಾಸರಗೋಡು ಆಶ್ರಯದಲ್ಲಿ ನವಂಬರ್ 4ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯುವ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಹಾಗೂ ಕಾಸರಗೋಡು ಕನ್ನಡ ಗ್ರಾಮೋತ್ಸವ ದಂಗವಾಗಿ ವಿವಿಧ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಫಲಿತಾಂಶ ಪ್ರಕಟಿಸಲಾಗಿದೆ.
ಹಿರಿಯರ ವಿಭಾಗದ ಕಥಾ ಸ್ಪರ್ಧೆಯಲ್ಲಿ ಶಶಿಕಲಾ ಕುಂಬಳೆ ಪ್ರಥಮ, ಸತ್ಯವತಿ ಭಟ್ ಕೊಳಚಪ್ಪು ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿ ವಿಭಾಗದ ಕಥಾ ಸ್ಪರ್ಧೆಯಲ್ಲಿ ಕುಂಡಂಗುಳಿ ಶಾಲೆಯ ಪ್ರತೀಕಾ ಪ್ರಥಮ, ಅರ್ಪಿತ ಸಿ. ದ್ವಿತೀಯ, ಆಯಿಶತ್ ಕುಬ್ರ ಕೆ. ತೃತೀಯ ಸ್ಥಾನ ಪಡೆದಿದ್ದಾರೆ. ಹಿರಿಯರ ವಿಭಾಗದ ಕವನ ಸ್ಪರ್ಧೆಯಲ್ಲಿ ಕುಂಡಂಗುಳಿಯ ಸವಿತ ಕೆ. ಪ್ರಥಮ, ಸತೀಶ ಬೆಳಿಯೂರು ದ್ವಿತೀಯ, ಮಲ್ಲಿಕಾ ರಂಜಿತ ಮೂಲೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿ ವಿಭಾಗದ ಕವನ ಸ್ಪರ್ಧೆಯಲ್ಲಿ ಖದೀಜ ಸಫ ಧರ್ಮತ್ತಡ್ಕ ಪ್ರಥಮ, ಕುಂಡಂಗುಳಿಯ ಅಭಿಲಾಷಾ ಆರ್. ದ್ವಿತೀಯ, ಅಮೃತ ಸಿ. ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಚುಟುಕು ಸ್ಪರ್ಧೆಯಲ್ಲಿ ವೆಂಕಟೇಶ ಬೈಲೂರು ಪ್ರಥಮ, ನಿವೇದಿತಾ ಪ್ರಶಾಂತ್ ಬದಿಯಡ್ಕ ದ್ವಿತೀಯ, ಸಮೃದ್ಧಿ ಆಳ್ವ ಕಾಸರಗೋಡು ತೃತೀಯ ಸ್ಥಾನ ಪಡೆದಿದ್ದಾರೆ. "ನಾನು ಓದಿದ ಉತ್ತಮ ಪುಸ್ತಕ " ಸ್ಪರ್ಧೆಯಲ್ಲಿ ಡಾ. ಅಖಿಲೇಶ್ ಕೀರಿಕ್ಕಾಡು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
2025 ನವಂಬರ್ 4 ಮಂಗಳವಾರದಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು 60 ನೇ ಜನ್ಮದಿನೋತ್ಸವ- ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ, ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು,ಪ್ರಧಾನ ಕಾರ್ಯದರ್ಶಿ ಕೆ ಜಗದೀಶ ಕೂಡ್ಲು, ಸಾಹಿತ್ಯ ಸ್ಪರ್ಧಾ ಆಯ್ಕೆ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಕೆ. ಉಳಿಯತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


