ಪ್ರೇಕ್ಷಕರ ಮನಗೆದ್ದ ಅವನಿ ಗಾಯನ

Upayuktha
0



ಬೆಂಗಳೂರು: ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಗುರುವಾರ (ಅ.30) ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ಅವನಿ ಭಟ್ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟಳು ಎಂದು ನಂದಕಿಶೋರಾಚಾರ್ ತಿಳಿಸಿದರು.


ಪುರಂದರದಾಸರ "ಶರಣು ಬೆನಕನೆ" ಎಂಬ ಗಣೇಶನ ಕೃತಿಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಅವನಿ, "ಕರೆದರೆ ಬರಬಾರದೇ" (ಕಮಲೇಶದಾಸರು), "ರೋಗಹರನೇ ಕೃಪಾಸಾಗರ" (ಶ್ರೀಜಗನ್ನಾಥದಾಸರು), "ಅಂಬರಪುರಹರ", "ಪವಮಾನ ಜಗದಪ್ರಾಣ" (ಶ್ರೀವಿಜಯದಾಸರು), "ಕಮಲೇ ಕಮಲಾಲಯೇ" (ಶ್ರೀಜಗನ್ನಾಥದಾಸರು), "ವರವ ಕೊಡು ಎನಗೆ ವಾಗ್ದೇವಿ" (ಶ್ರೀಕನಕದಾಸರು), "ವಾರಿಜನಯಪತೆ ವಾರಿಜನಾಭನೆ" (ಶ್ರೀಗೋಪಾಲದಾಸರು), "ಶರಣು ಸಕಲೋದ್ಧಾರ" (ಶ್ರೀಪುರಂದರದಾಸರು), ಶ್ರೀಪ್ರಸನ್ನವೆಂಕಟದಾಸರ "ಎಂಥಾ ಶ್ರೀಮಂತನಂತನೋ" ಎಂಬ ಹಾಡಿನೊಂದಿಗೆ ಇನ್ನೂ ಹಲವಾರು ಅಪರೂಪದ ಹರಿದಾಸರ ಪದಗಳನ್ನು ಸುಮಾರು ಒಂದೂವರೆ ತಾಸು ನಿರರ್ಗಳವಾಗಿ ಹಾಡಿ, ನೆರೆದಿದ್ದ ನೂರಾರು ಪ್ರೇಕ್ಷಕರ ಮನಗೆದ್ದಳು. ಇವಳ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಟಿ.ಎಸ್. ರಮೇಶ್ ಮತ್ತು ತಬಲಾ ವಾದನದಲ್ಲಿ ಎನ್. ಮೋಹನ್ ಸಾಥ್ ನೀಡಿದರು.


ಕು|| ಅವನಿಯ ಕಿರುಪರಿಚಯ : ಕಾರ್ತೀಕ್ ಭಟ್ ಉರಿಮಜಲು ಮತ್ತು ಚೇತನಾ ಭಟ್ ಇವರ ಪುತ್ರಿಯಾದ ಅವನಿ ಬೆಂಗಳೂರಿನ ಜಿಗಣಿಯ Achievrs Academy ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ.  ಮೂರನೇ ವಯಸ್ಸಿನಲ್ಲೇ ತನ್ನ ತಾಯಿಯ ಬಳಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದ ಅವನಿ ಈಗ ಹೆಚ್ಚಿನ ಸಂಗೀತಾಭ್ಯಾಸವನ್ನು ವಿದ್ವಾನ್ ಈಶ್ವರ ಭಟ್ ಮತ್ತು ಕಾಂಚನ ಬಳಿ ಕಲಿಯುತ್ತಿದ್ದಾಳೆ. 


ಆವನಿ ಇದುವರೆಗೆ ನೀಡಿರುವ ಕಾರ್ಯಕ್ರಮಗಳು : ಅನೇಕ ಸಂಗೀತ ಮತ್ತು ನೃತ್ಯ ಶಾಲೆಗಳ ವಾರ್ಷಿಕೋತ್ಸವಗಳು, ನಂದಿ ವಾಹಿನಿ ಯೂಟ್ಯೂಬ್ ಚಾನೆಲ್, ವಮಾನಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕಾರ್ಯಕ್ರಮ ನೀಡಿದ ಅವನಿ, ತನ್ನದೇ ಹೆಸರಿನ ಯೂಟ್ಯೂಬ್ ವಾಹಿನಿಯಲ್ಲಿ ಅನೇಕ ದಾಸರ ಪದಗಳು, ಭಕ್ತಿಗೀತೆಗಳು ಮತ್ತು ಭಾವಗೀತೆಗಳನ್ನೂ ಹಾಡಿದ್ದಾಳೆ. ಅವನಿ ಗಾಯನದಲ್ಲಿ ಮಾತ್ರವಲ್ಲದೇ ಓದಿನಲ್ಲೂ ಮುಂದಿದ್ದಾಳೆ. ಈ ಪುಟ್ಟ ಪ್ರತಿಭೆಯ ಭವಿಷ್ಯ ಇನ್ನೂ ಹೆಚ್ಚು ಹೆಚ್ಚು ಉಜ್ವಲವಾಗಲಿ ಎಂದುದು ಹಾರೈಸೋಣ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top