ಮಂಗಳೂರು-ಪೊಳಲಿ: ನೂತನ ಬಸ್‍ಗೆ ಚಾಲನೆ

Upayuktha
0


ಮಂಗಳೂರು: ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗದ 3 ನೇ ಘಟಕದಿಂದ ಮಂಗಳೂರು ಬಸ್ಸು ನಿಲ್ದಾಣದಿಂದ ವಯಾ ನಂತೂರು-ವಾಮಂಜೂರು- ಕೆತ್ತಿಕಲ್ ಬೊಂಡಂತಿಲ-ತಾರಿಗುಡ್ಡೆ ಮಾರ್ಗವಾಗಿ ಪೆÇಳಲಿಗೆ ನೂತನ ನಗರ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದ್ದು, ಶಾಸಕ ಭರತ್ ಶೆಟ್ಟಿ ಗುರುವಾರ ಕೆಎಸ್‍ಆರ್‍ಟಿಸಿ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಚಾಲನೆ ನೀಡಿದರು.


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್, ವಿಭಾಗೀಯ ಯಾಂತ್ರಿಕ ಅಭಿಯಂತರ ವಿನಯ್  ಹಾಗೂ ವಿಭಾಗದ ಅಧಿಕಾರಿಗಳು/ ಸಿಬ್ಬಂದಿಗಳು, ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿಯ ಸದಸ್ಯರು ಹಾಜರಿದ್ದರು.


ಮಂಗಳೂರು-ಪೊಳಲಿ ಮಾರ್ಗದ ನೂತನ ನಗರ ಸಾರಿಗೆ ವೇಳಾ ವಿವರ:


ಮಂಗಳೂರು ಬಸ್ಸು ನಿಲ್ದಾಣದಿಂದ ಪೊಳಲಿಗೆ ಹೊರಡುವ ಸಮಯ ಬೆಳಿಗ್ಗೆ 6:00, 8:45, 11:40, 3:30, 6:30. ವಯಾ: ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್, ನಂತೂರು, ಬಿಕರ್ನಕಟ್ಟೆ, ಕುಲಶೇಖರ, ಬೈತುರ್ಲಿ, ಕುಡುಪು, ವಾಮಂಜೂರು, ಕೆತ್ತಿಕಲ್, ಬೊಂಡಂತಿಲ, ತಾರಿಗುಡ್ಡೆ, ಬದ್ರಿಯಾನಗರ, ಮಲ್ಲೂರು, ಕಲಾಯಿ, ಅಮ್ಮುಂಜೆ, ಬಡಕಬೈಲು, ಪುಂಚಮೆ.


ಪೊಳಲಿಯಿಂದ ಮಂಗಳೂರಿಗೆ ಹೊರಡುವ ಸಮಯ 6:55, 10:10, 1:50, 4:35, 8:00. ವಯಾ ಸ್ಥಳಗಳು:- ಪುಂಚಮೆ, ಬಡಕಬೈಲು, ಅಮ್ಮುಂಜೆ ಕಲಾಯಿ, ಮಲ್ಲೂರು, ಬದ್ರಿಯಾನಗರ, ತಾರಿಗುಡ್ಡೆ, ಬೊಂಡಂತಿಲ, ಕೆತ್ತಿಕಲ್, ವಾಮಂಜೂರು, ಕುಡುಪು, ಬೈತುರ್ಲಿ, ಕುಲಶೇಖರ, ಬಿಕರ್ನಕಟ್ಟೆ, ನಂತೂರು, ಬಂಟ್ಸ್ ಹಾಸ್ಟೆಲ್, ಪಿವಿಎಸ್.


ಸಾರ್ವಜನಿಕ ಪ್ರಯಾಣಿಕರು ಸಾರಿಗೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top