ನಮ್ಮ ಜೀವನದಲ್ಲಿ ಸಹಾಯ ಮಾಡಿದವರನ್ನು ಮತ್ತು ದಾರಿ ತೋರಿರುವವರನ್ನು ಎಂದಿಗೂ ಮರೆಯಲಾರೆ. ತಂದೆ, ತಾಯಿಯ ಪ್ರೀತಿ, ಮತ್ತು ಕುಟುಂಬದ ಪ್ರೀತಿ ಎಂದಿಗೂ ಮರೆಯಲಾಗದ ಜೀವ. ಜೀವ ಕೊಟ್ಟವಳು ತಾಯಿ, ತುತ್ತು ನೀಡುವವಳು ತಾಯಿ. ಹೆಗಲು ಮೇಲೆ ಕೂರಿಸಿಕೊಂಡು ಊರನ್ನೇ ತಿರುಗಿಸುವ ಜೀವವೇ ಅಪ್ಪ. ಅವರ ನೋವನ್ನು ಮರೆತು ನಮಗಾಗಿ ಕಷ್ಟಪಟ್ಟು ಬೆವರು ಸುರಿಸಿ ಕಾಳಜಿ ವಹಿಸುವ ಧೀಮಂತ ನನ್ನ ಅಪ್ಪ.
ಹೆತ್ತು ಹೊತ್ತು ಸಾಕಿ, ಪ್ರೀತಿ, ಮಮತೆಯನ್ನು ತೋರಿ ನಮ್ಮನ್ನು ಒಂಬತ್ತು ತಿಂಗಳುಗಳ ಕಾಲ ಹೊಟ್ಟೆಯಲ್ಲಿ ಕಾಪಾಡಿಕೊಂಡು ನಮಗೆ ಜನ್ಮ ನೀಡಿದ ದೇವತೆಯ ಸ್ವರೂಪವೇ ನನ್ನಮ್ಮ. ಕುಟುಂಬವು ಪ್ರೀತಿ, ನೋವಿನಲ್ಲಿ ಜೊತೆಯಾಗಿ ದಾರಿ ತೋರಿಸುವ ದೀಪದ ಬೆಳಕು. ಬೆಳಕನ್ನು ನಮ್ಮ ಬಾಳಿನಲ್ಲಿ ತುಂಬಿ ಹೆಜ್ಜೆ ಹೆಜ್ಜೆಗೂ ಬೆನ್ನೆಲುಬಾಗಿ ಜೋಪಾನ ಮಾಡಿದ ಪ್ರಾಣವೇ ಅಮ್ಮ. ಅಮ್ಮ ನನ್ನ ಎದೆಯ ಬಡಿತದ ಸಾರಥಿ. ಅವಳಲ್ಲಿ ನಾನು ನನ್ನಲ್ಲಿ ಅವಳನ್ನು ಕಾಣಲು ಸಾಧ್ಯವಿಲ್ಲ.
ಕುಟುಂಬದಲ್ಲಿ ಜೊತೆ ಸೇರಿ ಎಲ್ಲರೂ ಒಟ್ಟಾಗಿ ಬಾಳುವುದೇ ಅದೊಂದು ಪ್ರೀತಿಯ ಸಾಗರದ ಹಾಗೆ. ಅಪ್ಪನ ಪ್ರೀತಿ ಆಕಾಶದ ರೀತಿ. ಅಮ್ಮನ ಪ್ರೀತಿ ಭೂಮಿಯ ಹಾಗೆ, ಎಲ್ಲಾ ಪ್ರೀತಿಯೂ ಒಟ್ಟಾರೆ ಇದೊಂದು ಮರೆಯಲಾಗದ ಜೀವ. ಒಂದು ಕ್ಷಣ ಅಪ್ಪಾ! ಎಂದು ಕರೆದಾಗ ಅವರಲ್ಲಿ ಆಗುವ ಬದಲಾವಣೆಯನ್ನು ಕಂಡೆ. ಮಗಳೇ ಎಂದು ಕರೆದಾಗ ಏನೋ ರೋಮಾಂಚನ. ಅಲ್ವಾ....! ಇದೇ ಪ್ರೀತಿ ಅಂದ್ರೆ ಅಪ್ಪ ಮಗಳ ಸಂಬಂಧ ಅನ್ನೋದು. ಹೆಣ್ಣು ಮಕ್ಕಳಿಗೆ ಅಪ್ಪನೇ ಪ್ರೀತಿ, ಅಪ್ಪನೇ ಒಲವು, ಬಂಗಾರ, ಚಿನ್ನ, ಆಕಾಶ ಎಲ್ಲಾನೂ ಅಪ್ಪನಲ್ಲಿ ಕಾಣುತ್ತೇವೆ. ನಿಮಗೆ ಪ್ರಪಂಚವನ್ನೇ ತೋರಿಸುವ ಅವರು ಹೆಗಲೇ ನಮಗೆ ಬೆಂಬಲ. ಪ್ರತಿಯೊಬ್ಬ ಅಪ್ಪನೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಕಷ್ಟಪಡುತ್ತಾರೆ. ನಮ್ಮ ಸಾಧನೆಯನ್ನು ಕಂಡು ಖುಷಿಪಡುವ ಜೀವವೇ ಅಂದ್ರೆ ಅಪ್ಪ, ಅಮ್ಮ. ಈ ಜೀವ ಎಂದೆಂದಿಗೂ ಮರೆಯಲಾಗದ ಜೀವ.
ಮಗಳೆಂದರೆ ಅಪ್ಪನಿಗೆ ಜೀವ, ಅಪ್ಪ ಎಂದರೆ ಮಗಳಿಗೆ ಪ್ರಪಂಚ. ಮಗಳ ಪುಟ್ಟ ಪುಟ್ಟ ಆಸೆಗಳಿಗೋಸ್ಕರ ತನ್ನ ದೊಡ್ಡ ಕನಸುಗಳನ್ನು ದೂರವಿರಿಸಿ ಅವಳಿಗೇನು ಕಮ್ಮಿ ಆಗದಂತೆ, ಬೆಳೆಸುತ್ತಾನೆ.
ಅಪ್ಪ ಎಂದರೆ ಪ್ರೀತಿ, ವಿಶ್ವಾಸ, ಗೌರವ ಹೀಗೆ ಎಲ್ಲ ಭಾವನೆಗಳೂ ಒಟ್ಟಿಗೆ ಕೊಡುವ ವ್ಯಕ್ತಿ. ಜೀವನವನ್ನು ರೂಪಿಸಿದ ವ್ಯಕ್ತಿ ನಾವು ಚಿಕ್ಕವರಿದ್ದಾಗ ದೇವಸ್ಥಾನದಲ್ಲಿ ದೇವರು ಕಾಣಿಸುತ್ತಿಲ್ಲ ಎಂದು ತಂದೆಗೆ ಹೇಳಿದಾಗ, ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ದೇವರನ್ನು ತೋರಿಸುತ್ತಿದ್ದರು. ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ, ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ. ಜೀವನದಲ್ಲಿ ಯಾರ ಋಣ ಬೇಕಾದರೂ ತೀರಿಸಬಹುದು! ಆದರೆ ತಂದೆ ತಾಯಿಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ.
- ಶಿವಾನಿ ಕೊಡಂಗಾಯಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


