ಚಟ್ಟಂಚಾಲ್ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಗಾನ ನೃತ್ಯ ವೈಭವ

Chandrashekhara Kulamarva
0


ಕಾಸರಗೋಡು: ನವರಾತ್ರಿ ಹಬ್ಬದ ಪ್ರಯುಕ್ತ ಚಟ್ಟಂಚಾಲ್ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕಾಸರಗೋಡು ವತಿಯಿಂದ 127ನೇ ವೈವಿಧ್ಯಮಯ ನಿತ್ಯ ನೂತನ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಬಹಳ ವೈಭವದಿಂದ ಜರಗಿತು. ಡಾ. ವಾಣಿಶ್ರೀ ಸಾಹಿತ್ಯ ಪ್ರಸ್ತುತಿಯೊಂದಿಗೆ ಸಂಸ್ಥೆಯ ಗಾನರತ್ನ ಮಧುಲತಾ ಪುತ್ತೂರು ಹಾಗೂ ಗಾನಸಿರಿ ಆದ್ಯಂತ್ ಅಡೂರು ಅವರು ಗಾನ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು.


ಸಂಸ್ಥೆಯ ಅಪ್ರತಿಮ ಕಲಾಮಾಣಿಕ್ಯಗಳಾದ ಪೂಜಾಶ್ರೀ, ಶ್ರದ್ಧಾ, ಮೇಧಾ, ನವ್ಯಶ್ರೀ ಕುಲಾಲ್, ಶಿವ ಪ್ರಿಯ, ದಿಯಾ ಸುಖೇಶ್ ಗಟ್ಟಿ, ಗೌತಮಿ, ರಶ್ಮಿತಾ, ಮನೀಶ್, ಖುಷಿ, ಯಶಿಕಾ, ಮುಂತಾದವರು ಶ್ರೀದೇವಿಯ ಸಾನ್ನಿಧ್ಯದಲ್ಲಿ ಕಲಾಪ್ರದರ್ಶನ ನೀಡಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.


ಕಿಕ್ಕಿರಿದ ಜನ ಸಮೂಹ ಕಾರ್ಯಕ್ರಮವನ್ನು ವೀಕ್ಷಿಸಿ ಶ್ಲಾಘಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಡಾ. ವೆಂಕಟಗಿರೀಶ್, ಉಪಾಧ್ಯಕ್ಷ ಅಚ್ಯುತ ಭಟ್, ಕಲಾಪೋಷಕ ವಿರಾಜ್ ಅಡೂರ್, ಮೋಹಿನಿ, ವನಿತಾ, ಶಾಂತ, ಅಶ್ವಿನಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀಧರನ್, ಗೋಪಿನಾಥನ್, ರತೀಶ್, ರವೀಂದ್ರನ್ ಕಲಾವಿದರಿಗೆ ‌ಸಂಸ್ಥೆಯ ವತಿಯಿಂದ ನೀಡುವ ಗೌರವ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಿದರು. ಡಾ.ವಾಣಿಶ್ರೀ ಇವರಿಗೆ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top