ಮನುಷ್ಯ ಬದ್ಕೋಕ್ಕೆ ಬರೀ ಬಾಡಿ ಚೆನ್ನಾಗಿದ್ರೆ ಸಾಲ್ದು ಮನಸ್ಸು ಚೆನ್ನಾಗಿರ್ಬೇಕು...!

Upayuktha
0


ದ್ತಾ ಇರೋ ಎಲ್ಲಾ ಓದುಗರಿಗೂ ಒಂದ್ ಪ್ರಶ್ನೆ ಏನಂದ್ರೆ ನಿಮ್ಗೆ ಸಡನ್ನಾಗಿ ಜ್ವರ, ಶೀತ, ಕೆಮ್ಮು, ತಲೆನೋವು ಬಂದ್ರೆ ಏನ್ ಮಾಡ್ತೀರಾ...? ಎಲ್ರೂ ಹೇಳೋ ಉತ್ರ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ತಗೊಂಡ್ ನುಂಗ್ತಿವಿ, ಆದ್ರೂ ಸರಿ ಹೋಗ್ಲಿಲ್ಲ ಅಂದ್ರೆ ಆಸ್ಪತ್ರೆಗೆ ಹೋಗಿ ಡಾಕ್ಟ್ರು ಹತ್ರ ತೋರಿಸ್ತೀವಿ...... ಇದು ನಿಮ್ ದೇಹಕ್ಕಾಯ್ತು, ಅದೇ ನಿಮ್ ಮನ್ಸಿಗ್ ಹುಷಾರಿಲ್ಲ ಅಂದ್ರೆ ಏನ್ ಮಾಡ್ತೀರಾ....? ಈ ಪ್ರಶ್ನೆಗೆ ಬಹುತೇಕ ಜನ ಉತ್ರನೇ ಕೊಡಲ್ಲಾ. ಇಫ್ ಇನ್ ಕೇಸ್ ಕೊಟ್ರೂ ಹೇಳೋ ಉತ್ರ ಸುಮ್ನೆ ಅಳ್ತೀನಿ, ದೇವ್ರು ಹತ್ರ ಪ್ರಾರ್ಥನೆ ಮಾಡ್ತೀನಿ, ಊಟ-ತಿಂಡಿ ಏನೂ ಮಾಡ್ದೆ, ಯಾರ್ ಜೊತೆನೂ ಮಾತಾಡ್ದೆ ರೂಮಲ್ಲಿ ಒಂದ್ ಕಡೆ ಸುಮ್ನೆ ಕೂತ್ಕೊಂಡ್ಬಿಡ್ತೀನಿ ಅಂತಾ...


ಇದೇ ರೀತಿ ನಿಮ್ ದೇಹಕ್ಕೆ ಸಮಸ್ಯೆಯಾದ್ರೆ ನೀವ್ ಹೀಗೆ ಮಾಡ್ತೀರಾ...? ಇಫ್ ಇನ್ ಕೇಸ್ ಹೀಗ್ ಮಾಡಿದ್ರೆ ನಿಮ್ ಖಾಯಿಲೆ ಉಲ್ಬಣವಾಗಿ ಏನೂ ಕೆಲ್ಸ ಮಾಡಕ್ಕಾಗ್ದೆ ಒಂದೇ ಕಡೆ ಮಲ್ಗಿರ್ಬೇಕಾಗುತ್ತೆ. ಹಾಗೇ ದೇಹದ ತರಾನೇ ಮನ್ಸು ಕಣ್ರೀ, ದೇಹಕ್ಕೆ ಹೆಂಗೆ ವೈರಸ್, ಬ್ಯಾಕ್ಟೀರಿಯಾ ಅಟ್ಯಾಕ್ ಮಾಡ್ದಾಗ ಹುಷಾರಿಲ್ದಂಗಾಗುತ್ತೋ ಹಂಗೆ ಮನ್ಸಿಗೂ ಹುಷಾರ್ ತಪ್ಪುತ್ತೆ.


ಯಾವ್ದೋ ಒಂದ್ ದುರ್ಘಟನೆ, ಯಾವ್ದೋ ಒಂದ್ ಮಾತು, ಯಾವ್ದೋ ಒಂದ್ ಚಟ, ಯಾವ್ದೋ ಒಂದ್ ತಪ್ಪು, ಯಾವ್ದೋ ಒಂದ್ ಸನ್ನಿವೇಶ, ಯಾವ್ದೋ ಒಂದ್ ನೋವು... ಹೀಗೆ ಯಾವ್ದೋ ಒಂದು ನಮ್ ಮನ್ಸಿಗೆ ವೈರಸ್ ತರ ಅಟ್ಯಾಕ್ ಮಾಡ್ದಾಗ, ಮನ್ಸಿಗೆ ಬೇಜಾರಾದಾಗ, ಯಾವ್ದೋ ವಿಚಾರವನ್ನೇ ಮನ್ಸಲ್ಲೇ ಇಟ್ಕೊಂಡು ಕೊರುಗ್ದಾಗ ನಿಧಾನಕ್ಕೆ ಮನ್ಸು ಹುಷಾರ್ ತಪ್ಪೋಕ್ಕೆ ಸ್ಟಾರ್ಟಾಗುತ್ತೆ... ಹಾಗಂತ ಮನ್ಸು ಹುಷಾರ್ ತಪ್ಪೋಕ್ಕೆ ಮೇಲಿನ ಕಾರಣಗಳಷ್ಟೇ ಅಲ್ದೆ ಇನ್ನೂ ನಾನಾ ಕಾರಣಗಳಿರ್ತವೆ. ಆದ್ರೆ ಬೇಸಿಕ್ಕಾಗಿ ದೇಹಕ್ಕೆ ಜ್ವರ, ಶೀತ, ತಲೆನೋವು ಎಲ್ಲ ಬಂದಾಗ ಹೇಗೆ ಮೆಡಿಕಲ್ ಶಾಪಲ್ಲಿ ಮಾತ್ರೆ ತೊಗೊಂಡು ನುಂಗ್ತಿರೋ ಹಾಗೆ ನಿಮ್ ಮನ್ಸು ಭಾರ ಅನ್ನುಸ್ತಿದೆ ಅಂದ್ರೆ ರಾತ್ರಿ-ಹಗಲು ಅನ್ನೋದು ನೋಡ್ದೆ 14416 ಗೆ ಕಾಲ್ ಮಾಡಿ, 14416 ಅಂದ್ರೆ ಟೆಲಿ ಮನಸ್. ಇಲ್ಲಿ ವೃತ್ತಿಪರ ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು ಹಾಗೂ ವೃತ್ತಿಪರ ಮನಃಶಾಸ್ತ್ರಜ್ಞರು ನಿಮ್ಗೆ ಕೌನ್ಸಿಲಿಂಗ್ ಕೊಡೋಕ್ಕೆ 24×7 ರೆಡಿಯಾಗಿ ಕೂತಿರ್ತಾರೆ.


ಹೆಂಗೆ ಮೆಡಿಕಲ್ ಶಾಪಲ್ಲಿ ಮಾತ್ರೆ ತೊಗೊಂಡ್ರೂ ಗುಣ ಆಗ್ಲಿಲ್ಲಾ ಅಂದ್ರೆ ಹತ್ರದ್ ಆಸ್ಪತ್ರೆಗೆ ಹೋಗ್ತಿರೋ ಹಂಗೆ ನಿಮ್ಗೆ ಟೆಲಿಮನಸ್ ಕೌನ್ಸಿಲಿಂಗ್ ತೃಪ್ತಿ ತರ್ಲಿಲ್ಲ ಅಂದ್ರೆ ನಿಮ್ ಹತ್ರದ ಆಸ್ಪತ್ರೆಗೆ ಹೋಗಿ ಡಾಕ್ಟ್ರನ್ನ ಭೇಟಿ ಮಾಡಿ. ಆದಾದ್ಮೇಲೂ ಯಾಕೋ ಸ್ಯಾಟಿಸ್ ಫ್ಯಾಕ್ಷನ್ ಇಲ್ಲ ಅಂದ್ರೆ ಅತ್ವ ನಿಮ್ ಡಾಕ್ಟ್ರು ಮನೋವೈದ್ಯರನ್ನ ಭೇಟಿ ಮಾಡಿ ಅಂತ ಅಂದ್ರೆ ನಿಮ್ ಹತ್ರದ ಮನೋವೈದ್ಯರನ್ನ ಭೇಟಿ ಮಾಡಿ. ಹೆಂಗೆ ದೇಹಾರೋಗ್ಯ ಹಾಳಾದ್ರೆ ಡಾಕ್ಟ್ರಿಗೆ ತೋರ್ಸಿದ್ಮೇಲೆ ಸರಿ ಹೋಗುತ್ತೋ ಹಂಗೆ ಮನ್ಸಿನ್ ಆರೋಗ್ಯನೂ ಡಾಕ್ಟ್ರಿಗೆ ತೋರ್ಸಿದ್ಮೇಲೆ ಸರಿ ಹೋಗುತ್ತೆ... ಮನ್ಸು ಚೆನ್ನಾಗಿದ್ರೆ ನೀವ್ ಚೆನ್ನಾಗಿರ್ತೀರ, ನೀವ್ ಚೆನ್ನಾಗಿದ್ರೆ ನಿಮ್ ಕುಟುಂಬ, ನಿಮ್ಮನೆ ಚೆನ್ನಾಗಿರುತ್ತೆ, ನಿಮ್ಮನೆ ಚೆನ್ನಾಗಿದ್ರೆ ಸಮಾಜನೂ ಚೆನ್ನಾಗಿರುತ್ತೆ. ಅದ್ಕೆ ನಿಮ್ ಮನ್ಸನ್ನ ಆರೋಗ್ಯವಾಗಿಟ್ಕೊಂಡ್ರೆ ಇಡೀ ಸಮಾಜವನ್ನೇ ಆರೋಗ್ಯಪೂರ್ಣವಾಗಿ ಕಟ್ಬೋದು ಅಂತ ಹೇಳ್ತಾ ಎಲ್ರಿಗೂ ವಿಶ್ವ ಮಾನಸಿಕ ಆರೋಗ್ಯ ಮಾಸದ ಶುಭಾಶಯಗಳು.




- ನಾಗೇಂದ್ರ ಶಿವಮೊಗ್ಗ

ಸಂಯೋಜಕರು,

ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ,

ನಿಮ್ಹಾನ್ಸ್, ಬೆಂಗಳೂರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top