ಅ.19: ಸಿಂಚನ ಲಕ್ಷ್ಮಿ ಕೋಡಂದೂರು ಭರತನಾಟ್ಯ ಪ್ರಸ್ತುತಿ

Upayuktha
0


ಪುತ್ತೂರು: ಅಕ್ಟೋಬರ್ 19 2025 ರಂದು ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿ, ಜೆಡ್ಡು ಅಳಿಕೆ ಗ್ರಾಮ ಇಲ್ಲಿ ನಡೆಯಲಿರುವ ಶ್ರೀ ಧನ್ವಂತರಿ ಜಯಂತಿಯ ಶುಭ ಸಂದರ್ಭದಲ್ಲಿ ಕುಮಾರಿ ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಇವರು ಪ್ರಸಿದ್ಧ ಚಕ್ರ ಕೋಡಿ ಮನೆತನಕ್ಕೆ ಸೇರಿದ ನಿವೃತ್ತ ಶಿಕ್ಷಕ ರಘುರಾಮ ಶಾಸ್ತ್ರಿ ಹಾಗೂ ಖ್ಯಾತ ಸಂಗೀತ ವಿದುಷಿ ಸವಿತಾ ಶಾಸ್ತ್ರಿ ದಂಪತಿಗಳ ಸುಪುತ್ರಿ.


ಸಂಗೀತ ಹಾಗೂ ನಾಟ್ಯ ಎರಡರಲ್ಲಿಯೂ ಅತ್ಯಂತ ಪ್ರೌಢಿಮೆಯನ್ನು ಗಳಿಸಿರುವ ಈಕೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊದಲನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ M.tech ವ್ಯಾಸಂಗ ಮಾಡುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top