ಅಭಾಸಾಪ ಬೆಳ್ತಂಗಡಿ: ಗೀತೆಯ 14ನೇ ಅಧ್ಯಾಯದ ಉಪನ್ಯಾಸ

Upayuktha
0

ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆ | 14ನೇ ಅಧ್ಯಾಯ ಗುಣತ್ರಯವಿಭಾಗ ಯೋಗ




ಗುರುವಾಯನಕೆರೆ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಭಾನುವಾರ (ಅ.5) ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ 14ನೇ ಅಧ್ಯಾಯ ಗುಣತ್ರಯವಿಭಾಗ ಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ, ಶ್ರೀ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆಯ ಸಹ ಪ್ರಾಧ್ಯಾಪಕ ಡಾ. ದಿವ ಕೊಕ್ಕಡ ಇವರು ನೀಡಿದರು.

   

ಕಾಂಚನದ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್ ಮಯ್ಯ ಇವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು.


ಸ್ವಸ್ತಿಕ ಕುಳಮರ್ವ ಇವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರು ರಚಿಸಿದ ಆಶಯಗೀತೆಯನ್ನು ಶ್ರೀಮತಿ ವಸಂತಿ ಕುಳಮರ್ವ ಇವರು ಹಾಡಿದರು. ಶ್ರೀಮತಿ ಅಶ್ವಿಜ ಶ್ರೀಧರ್ ಇವರು ಆಗಮಿಸಿದ್ದ ಸರ್ವರನ್ನು ಸ್ವಾಗತಿಸಿದರು. ಅಭ್ಯಾಗತರನ್ನು ತಾಂಬೂಲ ನೀಡಿ ಸ್ವಾಗತಿಸಲಾಯಿತು.


ಸಂಪನ್ಮೂಲ ವ್ಯಕ್ತಿ ಡಾ. ದಿವ ಕೊಕ್ಕಡ ಇವರು ಗೀತೆಯ 14ನೇ ಅಧ್ಯಾಯ ಗುಣತ್ರಯವಿಭಾಗ ಯೋಗದಲ್ಲಿ ಪ್ರಕೃತಿಯ ಮೂರು ಗುಣಗಳಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕಗಳ ಪರಿಣಾಮಗಳು, ಮತ್ತು ಅವು ಮಾನವನ ಮೇಲೆ ಹೇಗೆ ಪ್ರಭಾವ ಬೀರುತ್ತವೆ, ಅವುಗಳ ಗುಣಲಕ್ಷಣಗಳು, ಹಾಗೂ ಇವೆಲ್ಲವನ್ನೂ ಮೀರಿ ಗುಣಾತೀತನಾಗುವುದು ಹೇಗೆ ಎಂಬುವುದರ ಬಗ್ಗೆ ಶ್ರೀ ಕೃಷ್ಣ ಭಗವಂತ ಅರ್ಜುನನಿಗೆ ನೀಡಿದ ವಿವರಣೆಯನ್ನು ಸಾಹಿತ್ಯದ ಅನೇಕ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು.


ರಮೇಶ್ ಮಯ್ಯ ಇವರು ಮನುಷ್ಯನ ಒಳಗಿರುವ ಅರಿಷಡ್ವರ್ಗಗಳ ಬಗ್ಗೆ ಮಾತನಾಡಿ, ಅವುಗಳನ್ನು ಜಯಿಸಲು ಇರುವ ಸಾತ್ವಿಕ ಮಾರ್ಗಗಳನ್ನು ಡಿವಿಜಿಯವರ ಮಂಕುತಿಮ್ಮನ ಕಗ್ಗದ ಉದಾಹರಣೆ ಯೊಂದಿಗೆ ಸುಂದರವಾಗಿ ನಿರೂಪಿಸಿದರು.


ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಹಾಬಲ ಗೌಡ ಇವರು ಕಾರ್ಯಕ್ರಮ ನಿರೂಪಿಸಿ, ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಸರ್ವರಿಗೂ ಧನ್ಯವಾದವನ್ನಿತ್ತರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top