ಕಲಾಗ್ರಾಮದಲ್ಲಿ ಯುವಪ್ರತಿಭೆಗಳಿಂದ ಅದ್ಭುತ ನೃತ್ಯ ಪ್ರದರ್ಶನ

Upayuktha
0



ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ (ರಿ) ವತಿಯಿಂದ 2025 ಅಕ್ಟೋಬರ್ 5,  ಭಾನುವಾರ ಬೆಳಗ್ಗೆ ಕಲಾಗ್ರಾಮದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರು. ಡಾ|| ದರ್ಶಿನಿ ಮಂಜುನಾಥ್ ರವರ ಶಿಷ್ಯೆಯರಾದ ಕು|| ಅದಿತಿ ಸುರೇಶ್,ಕು|| ಬಿ. ಸಮೀಕ್ಷಾ, ಕು|| ಆರ್. ಅಂಕಿತಾ ಹಾಗೂ ಕು|| ತನ್ವಿ ಶೆಟ್ಟಿ ಭರತನಾಟ್ಯ ಕಾರ್ಯಕ್ರಮ ನೀಡಿದರು.


ಈ ಕಾರ್ಯಕ್ರಮದ ಅತಿಥಿಗಳಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯ ಶರ್ಮಾ (ಖ್ಯಾತ ಕನ್ನಡ ಸಾಹಿತಿಗಳು ಹಾಗೂ ವಿಮರ್ಶಕರು), ಪ್ರಶಾಂತ್ ಮಾರ್ಟಿನ್ ಆಗೇರ (ನಿರ್ದೇಶಕರು, ಇಮ್ಯಾನ್ಯುಯಲ್ ಸ್ಕೂಲ್ ಆಫ್ ಮ್ಯುಸಿಕ್) ಹಾಗೂ ಶ್ರೀ ಬಿ. ಅಭಿಷೇಕ್ (ಯೋಗ ಗುರುಗಳು, ಅಚ್ಯುತ ಯೋಗ ಸ್ಟುಡಿಯೋ) ಭಾಗವಹಿಸಿದ್ದರು.


ಈ ಕಾರ್ಯಕ್ರಮವು ಸಾಂಪ್ರದಾಯಿಕ "ಪುಷ್ಪಾಂಜಲಿ"ಯೊಂದಿಗೆ ಪ್ರಾರಂಭಭಿಸಿ ಗಣೇಶ, ಶಿವ, ಪಾರ್ವತಿ ಹಾಗೂ ಷಣ್ಮುಖನ ಶ್ಲೋಕಗಳಿಂದ ದೈವಿಕವಾಗಿ ಮುಂದುವರೆಸುತ್ತ ನೃತ್ತ ಭಾಗದ ಖಂಡ ಅಲರಿಪು, ಅಭೋಗಿ ಜತಿಸ್ವರ ನರ್ತಿಸಿದರು ಕಲಾವಿದರು.


ಏಕ ವ್ಯಕ್ತಿಗಳಾಗಿ ಅದಿತಿ ಸುರೇಶ್ ಆಂಜನೇಯ ಶಬ್ದಂ ನೃತ್ಯವನ್ನು ಅಮೋಘವಾಗಿ ನರ್ತಿಸಿದರು. ಕು. ಸಮೀಕ್ಷಾ ತ್ಯಾಗರಾಜರ ಕೃತಿ "ಶಂಭೋ ಮಹಾದೇವ" ನೃತ್ಯದಲ್ಲಿ ಶಿವನ ತಾಂಡವ ಹಾಗೂ ಪಾರ್ವತಿಯ ಲಾಸ್ಯವನ್ನು ಸುಂದರವಾಗಿ ಅಭಿನಯಿಸಿ, ಅದರೊಂದಿಗೆ ಶಿವನು ಆದಿಯೋಗಿ (ಮೊದಲ ಯೋಗಾಭ್ಯಾಸಿ) ಹಾಗೂ ಆದಿಗುರು (ಮೊದಲ ಗುರು) ಎಂದು ಆರಾಧಿಸಲ್ಪಡುತ್ತಾನೆ.


ಈ ಎಲ್ಲಾ ಸ್ವರೂಪವನ್ನು ಮನೋಹರವಾಗಿ ವ್ಯಕ್ತಪಡಿಸಿದಳು. ಮುಂದಿನ ಪ್ರಸ್ತುತಿ ಕು|| ತನ್ವಿ ಶೆಟ್ಟಿ ಮೈಸೂರು ವಾಸುದೇವಾಚಾರ್ ಅವರ ಬಹಳ ಪ್ರಸಿದ್ಧ ಕೃತಿಗಳಲ್ಲಿ ರಾ ರಾ ರಾಜೀವ ಲೋಚನ ರಾಮ, ಶಬರಿಯ ಭಕ್ತಿ, ಸೀತಾ ಕಲ್ಯಾಣವನ್ನು  ಮನೋಹರವಾಗಿ ಅಭಿನಯಿಸಿದಳು.  ಕು|| ಅಂಕಿತ ಪುರಂದರದಾಸರ ದೇವರನಾಮ "ತಾತ್ತ ಧಿಮಿತ"ದಲ್ಲಿ ಕಾಳಿಂಗನ ನರ್ತನ ಪ್ರದರ್ಶಿಸಿದಳು.


ಕೊನೆಯಲ್ಲಿ ನಾಲ್ಕು ಜನ ಕಲಾವಿದರು ಶೃಂಗಪುರಾಧೀಶ್ವರಿ, ಕದನಕುತೂಹಲ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಪ್ರದರ್ಶನ ಕೊನೆಯಾಯಿತು. ಒಟ್ಟಿನಲ್ಲಿ ನಾಲ್ಕು ಕಲಾವಿದರ ಅಭಿನಯ ಅಚ್ಚುಕಟ್ಟಾಗಿ ಮೂಡಿಬಂತು. ಗುರು ಡಾ|| ದರ್ಶಿನಿ ಮಂಜುನಾಥ್ ನವರ ಸಂಯೋಜನೆ ಪ್ರಸಂಶೆಗೆ ಪಾತ್ರವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top