ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಸ್ಥಾಪಕರ ದಿನಾಚರಣೆ ಅಂಗವಾಗಿ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ (ಅಂಚೆ ಕಚೇರಿ ಹತ್ತಿರ) ಅಕ್ಟೋಬರ್ 11, ಶನಿವಾರ ಸಂಜೆ 6-00 ಗಂಟೆಗೆ ಡಾ|| ಜಯಲಕ್ಷ್ಮಿ ಹೆಚ್.ಕೆ. (ಆಹಾರ ವಿಜ್ಞಾನಿ, ಸಂಗೀತಜ್ಞೆ) ಮತ್ತು ಡಾ|| ರೇಖಾ ಶ್ರೀರಾಮಚಂದ್ರಮೂರ್ತಿ ಇವರುಗಳು ಸಂಗೀತ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಶೀರ್ಷಿಕೆಯಲ್ಲಿ ನಿರೂಪಣೆಯೊಂದಿಗೆ ಯುಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದೆ.
ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದುಷಿ ಪಿ.ಎಸ್. ಉಷಾ, ಮೃದಂಗ ವಾದನದಲ್ಲಿ ವಿದ್ವಾನ್ ಅನಿರುದ್ಧ ವಾಸುದೇವ್ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳೂ, ಹಿರಿಯ ಪಿಟೀಲು ವಾದಕರೂ ಆದ ಎಸ್. ಶಶಿಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.