ಭಾರತದಲ್ಲಿ ರೂ. 100 ಕೋಟಿ ಹೂಡಿಕೆಗೆ ಆಮ್ವೇ ನಿರ್ಧಾರ

Upayuktha
0


ಮಂಗಳೂರು: ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಭಾರತದಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡಲು ಆಮ್ವೇ ನಿರ್ಧರಿಸಿದೆ ಎಂದು ಆಮ್ವೇ ಅಧ್ಯಕ್ಷ ಮತ್ತು ಸಿಇಒ ಮೈಕಲ್ ನೆಲ್ಸನ್ ಪ್ರಕಟಿಸಿದ್ದಾರೆ.


ಭಾರತದಲ್ಲಿ ಉತ್ಪಾದನೆ ಆರಂಭಿಸಿ ಹತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡಿದ ಅವರು, ಆಮ್ವೇ ಬ್ಯುಸಿನೆಸ್ ಮಾಲೀಕರು/ ವಿತರಕ ಸಾಮಥ್ರ್ಯಗಳನ್ನು ಮತ್ತಷ್ಟು ಹೆಚ್ಚಿಸುವುದು, ತನ್ನ ಭೌತಿಕ ಉಪಸ್ಥಿತಿಯನ್ನು ಬಲಪಡಿಸುವುದು ಮತ್ತು ವಿಸ್ತರಿಸುವುದು ಹಾಗೂ ಗ್ರಾಹಕ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.


ಸಂಸ್ಥೆಯ ಭೌತಿಕ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಚೌಕಟ್ಟು ಮರುವಿನ್ಯಾಸ, ವಿಶೇಷ ತರಬೇತಿ ವಲಯಗಳು ಮತ್ತು ಸುಧಾರಿಸಿದ ಸೇವಾ ಅಭುಭವಗಳ ಜೊತೆಯಲ್ಲಿ ಪ್ರಸ್ತುತ ಮಳಿಗೆಗಳನ್ನು ಸಮಯ ಕಳೆಯುವ ಡೈನಾಮಿಕ್ ಹಬ್ ಗಳಾಗಿ ಬದಲಾಯಿಸುವ ಮೂಲಕ ವಿತರಕ ಮತ್ತು ಗ್ರಾಹಕ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.


ಮೇಕ್ ಇನ್ ಇಂಡಿಯಾ ದೃಷ್ಟಿಕೋನದಡಿ ಭಾರತ ವಿಕಸಿತ ಭಾರತದೆಡೆಗೆ ದಾಪುಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಉಪಸ್ಥಿತಿಯನ್ನು ಬಲಪಡಿಸುವ ಮೂಲಕ ಮತ್ತು ಜನರು ಹಾಗೂ ನಾವಿನ್ಯತೆಯಲ್ಲಿ ಹೂಡಿಕೆ ಮಾಡುವ ಮೂಲಕ ಈ ಪರಿವರ್ತನಾ ಪ್ರಯಾಣದಲ್ಲಿ ಕೊಡುಗೆ ನೀಡಲು ಬಹಳ ಹೆಮ್ಮೆ ಪಡುತ್ತೇವೆ ಎಂದು ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಜನೀಶ್ ಚೋಪ್ರಾ ಹೇಳಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top