ಕಾರವಾರ: ಹುಲಿ ಸಂರಕ್ಷಿತ ಪ್ರದೇಶ ಕದ್ರಾ ಸನಿಹ ಕೈಗಾ-ಬಾರೆ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಹುಲಿರಾಯನ ದರ್ಶನ ಶುಕ್ರವಾರ ಮಧ್ಯಾಹ್ನ 3:30ರ ಸುಮಾರಿಗೆ ಆಗಿದೆ. ಹುಲಿಯು ರಸ್ತೆೆ ಪಕ್ಕ ಯಾವುದೇ ಆತಂಕ ಇಲ್ಲದೆ ನಡೆದು ಹೋಗುವ ದೃಶ್ಯವನ್ನು ಅದೇ ರಸ್ತೆಯಲ್ಲಿ ಕಾರ್‌ನಲ್ಲಿ ಬರುತ್ತಿದ್ದ ಕಾರವಾರ ಮೂಲದವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಓಡಾಟ ಸಾಮಾನ್ಯವಾಗಿದ್ದು, ಈ ಹಿಂದೆ ಸಹ ಹಲವು ಬಾರಿ ಹುಲಿ ವಾಹನ ಸವಾರರಿಗೆ ಕಂಡು ಬಂದಿದೆ.
ಹಗಲಿನಲ್ಲಿ ಹುಲಿಗಳ ದರ್ಶನವಾಗಿದ್ದು ಇದೇ ಮೊದಲು. ರಾತ್ರಿ ವೇಳೆ ಕೈಗಾ ಅಣುವಿದ್ಯುತ್ ಸ್ಥಾವರದ ಗೇಟ್ ಬಳಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡ ಘಟನೆಗಳು ವರದಿಯಾಗಿತ್ತು. ಸದ್ಯ ಇದುವರೆಗೂ ಹುಲಿಯಿಂದ ಸಮಸ್ಯೆೆಯಾದ ಪ್ರಕರಣ ನಡೆದಿಲ್ಲ. ಕಾಡಲ್ಲಿ ಜಿಂಕೆ, ಕಡವೆಗಳು ಹೆಚ್ಚಿದ್ದು, ಹುಲಿಗೆ ಆಹಾರದ ಕೊರತೆಯೂ ಇಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


