ಅಣಕು ಪದ್ಯ: ಕಾಡು ಆನೆ ಕೊಪ್ಪಕೆ ಬಂತಂತೆ...

Upayuktha
0

ಪ್ರಾತಿನಿಧಿಕ ಚಿತ್ರ


ಕಾಡು ಆನೆ ಕೊಪ್ಪಕೆ ಬಂತಂತೆ|

ಅದು ಯಾಕೆ ಬಂತೋ ||ಕಾಡು||


ಬೈನೆ ಹುಡುಕಿ ಹೊರಟಿದೆಯಂತೆ|

ಗುಂಡಿಯ ರಸ್ತೆಯ ನೆಚ್ಚಿತಂತೆ||ಗುಂಡಿ||

ಕಾಡು ಬದುಕು ಹಿತವಿಲ್ಲವಂತೆ

ಬೀದಿಲಿ ಈಗ ಯಾರಿಲ್ಲವಂತೆ||ಕಾಡು||


ಭರದಿ ಅಂಗಡಿ ಹೊಕ್ಕಿತಂತೆ|

ಜನರು ದೊಣ್ಣೆನೆ ಎತ್ತಿದರಂತೆ||ಜನರು||

ಹೆದರಿಸುವುದು ವ್ಯರ್ಥವಂತೆ|

ಕೊಪ್ಪ ಬೆಚ್ಚಿ  ಬಿದ್ದಿತಂತೆ ||ಕಾಡು||


DJ ಶಾಸ್ತ್ರವ ಕೇಳಿತಂತೆ|

ಗಾದೆಯ ಮಾತ ಕಟ್ಟಿತಂತೆ||ಗಾದೆ||

ಆನೆ ನೆಡೆದುದೆ ದಾರಿಯಂತೆ

ಬಾಧೆ ಬವಣೆ ಪಡಿಸಿಹುದಂತೆ ||ಕಾಡು||


ಕಾನನ ಕಾನನ ತಿರುಗಿತಂತೆ| 

ಹಾಂಗೂ ಹೀಂಗೂ ಕಳೆದೀತಂತೆ||ಹಾಂಗೂ||

ಕಾಡಲಿ ಏನೂ ಇಲ್ಲವಂತೆ|

ವೀರಭದ್ರನ ನೆನೆದಿದೆಯಂತೆ||ಕಾಡು||


ಗೋಬಿ ಮಂಚುರಿ ಕೇಳಿತಂತೆ|

ATM ಕಾರ್ಡು ಉಜ್ಜಿತಂತೆ ||ATM||

ಹಿರೀಕೆರೆಯ ಮೂಸಿತಂತೆ

ಕೊಳಕು ನೀರು ಎಂದಿತಂತೆ||ಕಾಡು||


ಆನೆಯ ಜನ್ಮವನೆತ್ತಿದೆಯಂತೆ|

ಮಾನವನಾಗಿ ಹುಟ್ಟಿತ್ತಂತೆ||ಮಾನವ||

ಪಟ್ಟಣ ಅಧಿಕಾರ ಹಿಡಿದಿತ್ತಂತೆ

ಮೇಯಲು ಪುನಃ ಬಂದಿದೆಯಂತೆ||ಕಾಡು||


ರೋಡನೆಲ್ಲ ಸುತ್ತಿತಂತೆ||

ಕಸದ ರಾಶಿಯ ನೋಡಿತಂತೆ||ಕಸದ||

ಏನು ಬದುಕು ನಿಮ್ಮದು ಎಂದು|

ನಕ್ಕು ಮುಂದಕೆ ಸಾಗಿತಂತೆ||ಕಾಡು||


(ಪುರಂದರ ವಿಠಲ ಮತ್ತು ಪುರಂದರ ದಾಸರ ಕ್ಷಮೆ ಕೋರಿ, ಒಂದು ಆನೆ ಅಣಕು ಪದ್ಯ)


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top