ಬ್ರಾಹ್ಮಣರಲ್ಲಿ ಕ್ರಿಶ್ಚಿಯನ್-ಮುಸ್ಲಿಂ ಉಪಜಾತಿ ಇಲ್ಲ: ಎಸ್. ರಘುನಾಥ್

Upayuktha
0

ಇದು ನಕಲಿ ಜಾತಿ ಗಣತಿ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ...?




ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ದಿನಾಂಕ:22-8-2025 ವಿಜಯವಾಣಿ ದಿನಪತ್ರಿಕೆಯಲ್ಲಿ ಆಯೋಗದಿಂದ ಪ್ರಕಟಿಸಿದ ಜಾತಿ ಮತ್ತು ಉಪಜಾತಿ ಪಟ್ಟಿಯಲ್ಲಿ ಬ್ರಾಹ್ಮಣ ಜನಾಂಗದ ಕುರಿತು ಪ್ರಕಟಿಸಿರುವುದು ಸತ್ಯದೂರ ಸಂಗತಿಯಾಗಿದ್ದು ಇದಕ್ಕೆ ನಮ್ಮ ಆಕ್ಷೇಪಣೆ ಇದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.


ವಿಜಯವಾಣಿಯಲ್ಲಿ ಪ್ರಕಟವಾಗಿರುವಂತೆ ಕ್ರಮ ಸಂಖ್ಯೆ ಇದೆ. ನಮ್ಮ ಸಮುದಾಯದಲ್ಲಿ ಈ 209 ಬ್ರಾಹ್ಮಣ ಕ್ರಿಶ್ಚಿಯನ್, ಕ್ರಮ ಸಂಖ್ಯೆ 883, ಬ್ರಾಹ್ಮಣ ಮುಜಾವರ ಮುಸ್ಲಿಂ, ಕ್ರಮ ಸಂಖ್ಯೆ 1384 ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್ ಎಂದು ನಮೂದಿಸಿದ್ದು ನಮ್ಮಗಳ ಆಕ್ಷೇಪಣೆ ರೀತಿಯ ಯಾವುದೇ ಉಪ ಜಾತಿ ಇರುವುದಿಲ್ಲ. ಅದ್ದರಿಂದ ಈ ಕೂಡಲೇ ಸದರಿ ಕ್ರಮದ ಸಂಖ್ಯೆಗಳ ಜಾತಿ ಕಾಲಂಗಳನ್ನು ತೆಗೆದುಹಾಕಬೇಕು ಮತ್ತು ಇನ್ನುಳಿದ ಬ್ರಾಹ್ಮಣ ಉಪ ಪಂಗಡಗಳ ಕುರಿತು ಕೂಲಂಕುಶವಾಗಿ ಮರು ಪರಿಶೀಲನೆ ಮಾಡಬೇಕು. ನಮ್ಮ ಜನಾಂಗದಲ್ಲಿ ಒಟ್ಟು 64 ಉಪಜಾತಿ ಇದ್ದು ಆದನ್ನು ಮಾತ್ರ ಪರಿಗಣಿಸಬೇಕೆಂದು ಮನವಿ ಪತ್ರದಲ್ಲಿ ಸ್ಪಷ್ಟನೆ ನೀಡಲಾಗಿದೆ.


ಇದನ್ನು ಉಗ್ರವಾಗಿ ಖಂಡಿಸುತ್ತಾ ಕೂಡಲೇ ಈ ಸುಳ್ಳು ಮಾಹಿತಿಯನ್ನು ಕೈಬಿಡಬೇಕೆಂದು ಅಖಿಲ ಕನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್, ಹಿರಿಯ ಉಪಾಧ್ಯಕ್ಷ ಲಕ್ಷ್ಮೀಕಾಂತ್‌ ಹಾಗೂ ವಿಪ್ರ ಸಮಾನ ಮನಸ್ಕರ ಸಂಘದ ಪರವಾಗಿ ಅಧ್ಯಕ್ಷ ಸುದರ್ಶನ ಶರ್ಮಾ, ಕಾರ್ಯ ದರ್ಶಿ ರಾಮು ಕೆ.ಎನ್, ಈಗ ಪ್ರಕಟವಾಗಿರುವ ಪಟ್ಟಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತಾವು ಬ್ರಾಹ್ಮಣ ಸಮುದಾಯಕ್ಕೆ ಆಗಬಹುದಾದ ಅನ್ಯಾಯವನ್ನು ತಡೆಯಬೇಕೆಂದು ಸಂಘಟನೆ ಆಗ್ರಹಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top