ಶಿಕ್ಷಕರಿದ್ದಾರೆ ಚಿಂತೆ ಬಿಡಿ

Upayuktha
0



ನಮ್ಮೆಲ್ಲರ ಜೀವನದಲ್ಲಿ ಶಾಲೆ. ಅವಿಭಾಜ್ಯ ಅಂಗ. ನಮ್ಮೆಲ್ಲರ ಬಾಲ್ಯದ ನೆನಪಾಗುವುದು ಶಾಲೆಯಲ್ಲಿ ಕಲಿತ ದಿನಗಳಿಂದಲೇ. ಮನೆಯಲ್ಲಿನ ಬೆಚ್ಚನೆಯ ವಾತಾವರಣದ ನಂತರ ಮಗು ಕಾಲಿಡುವುದು ಶಾಲೆಗೆ. ಹೀಗಾಗಿ ಶಾಲೆಯ ನೆನಪಿನ ಜೊತೆಗೆ ಶಿಕ್ಷಕರು ಸಹ ನಮ್ಮ ನೆನಪಿನ ಬುತ್ತಿಯಲ್ಲಿ ತುತ್ತಾಗಿ ಬಿಡುತ್ತಾರೆ.


ನಮ್ಮ ತತ್ವಜ್ಞಾನಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ನೆನಪಿಗಾಗಿ ನಾವು ಪ್ರತಿ ವರ್ಷ ಸೆಪ್ಟೆಂಬರ್ 5ನೇ ತಾರೀಖು ನಾವು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.


ನಮ್ಮ ನೆನಪಿನಲ್ಲಿ ಎರಡು ತರಹದ ಶಿಕ್ಷಕರು ನೆನಪಿನಲ್ಲಿ ಇರುತ್ತಾರೆ.  ತುಂಬಾ ಸ್ಟ್ರಿಕ್ಟ್ ಆದ ಶಿಕ್ಷಕರು ಮತ್ತು ತುಂಬ ಸಾಫ್ಟ್ ಇದ್ದ ಶಿಕ್ಷಕರು. ಆದರೆ ನಮಗೆ ತುಂಬ ನೆನಪಿರುವುದು ಸ್ಟ್ರಿಕ್ಟ್ ಇದ್ದ ಶಿಕ್ಷಕರು, ಏಕೆಂದರೆ ನಮಗೆ ಕಷ್ಟ ಕೊಟ್ಟವರು ಯಾವಾಗಲೂ ನೆನಪಿರುತ್ತಾರೆ.


ವರ್ಣಾಕ್ಷರಗಳನ್ನು ಕಲಿಸಿದ ಶಿಕ್ಷಕರಿಂದ ಹಿಡಿದು ಪೋಸ್ಟ್ ಗ್ರಾಜುಯೇಟ್ ಲೆಕ್ಚರರ್ ವರೆಗೆ ಎಲ್ಲರೂ ನಮ್ಮ ನೆನಪಿನಲ್ಲಿ ಇರುವವರೇ. ಈಗಲೂ ನಮ್ಮ ಕಡೆ ಮಕ್ಕಳು ದಡ್ಡ ಆಗಿದ್ದಾರೆ. ಯಾವ ನಿಮ್ಮ ಮಾಸ್ತರ ಕಲಿಸಿದವನು ಎಂದು ಬಯ್ಯುತ್ತಾರೆ. ಹಿಂದಿನ ಕಾಲದಲ್ಲಿ ಏನಾದರೂ ಪತ್ರ ಬಂದರೆ ಅದನ್ನು ತಿಳಿದುಕೊಳ್ಳಲು ಶಿಕ್ಷಕರನ್ನು ಹುಡುಕುತ್ತಾ ಬರುತ್ತಿದ್ದರು.


ಸಾಕ್ಷರತಾ ಆಂದೋಲನದಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕ ವೃತ್ತಿ ಒಂದು ರೀತಿಯಲ್ಲಿ ಪಬ್ಲಿಕ್ ಸರ್ವಿಸ್ ಇದ್ದ ಹಾಗೆ.. ಮಕ್ಕಳ ಪಾಲಿಗೆ ಅವರೇ ಸೆಲೆಬ್ರಿಟಿಗಳು. ಶಿಕ್ಷಕರ ಸ್ಟೈಲ್ ಫಾಲೋ ಮಾಡುವ ವಿದ್ಯಾರ್ಥಿಗಳಿಗೆ ಒಂದೊಂದು ಸಾರಿ ಶಿಕ್ಷಕರೇ ಬೆಸ್ಟ್ ಫ್ರೆಂಡ್. ಮನೆಯಲ್ಲಿ ಹೇಳಲಾಗದ ಸಮಸ್ಯೆಗಳನ್ನು ಬಾಯಿ ಬಿಡಿಸುವ ಚಾಕಚಕ್ಯತೆಯಿಂದ  ಶಿಕ್ಷಕರು ಪೊಲೀಸರಿಗಿಂತ ಒಂದು ಹೆಜ್ಜೆ ಮುಂದು.


ಮಕ್ಕಳ ಸಲುವಾಗಿ ರಿಟೈರ್ಡ್ ಆಗುವವರೆಗೆ ಪುಸ್ತಕ ಹಿಡಿಯಬೇಕಾದ ಅನಿವಾರ್ಯತೆ ಇದ್ದರೂ ಟೆಕ್ನಾಲಜಿ ಬಳಸಿಕೊಳ್ಳುವಲ್ಲಿ ಕೂಡ ಮುಂದು ಎಂದು ಹೇಳಬಹುದು.


ಈಗಲೂ ಜನ ಗಣತಿ, ಎಲೆಕ್ಷನ್, ಸರ್ಕಾರದ ಯೋಜನೆಗಳಿಗೆ ಶಿಕ್ಷಕರು taken as granted ಇದ್ದ ಹಾಗೆ.


ಮಕ್ಕಳ ಪ್ರಗತಿ ಕಂಡು ಸಂತಸ ಪಡುವ ಜೀವಿಗಳು ಎಂದರೆ ಅದು ಶಿಕ್ಷಕರು ಮಾತ್ರ. ಪ್ರತಿಭಾ ಕಾರಂಜಿ, ನಾನಾ ಸ್ಪರ್ಧೆಗಳಲ್ಲಿ ಮಕ್ಕಳು ಗೆದ್ದರೆ ಶಿಕ್ಷಕರು ತಾವೇ ಗೆದ್ದಂತೆ ಸಂತಸ ಪಟ್ಟು ಮೊಬೈಲ್ನಲ್ಲಿ ಸ್ಟೇಟಸ್ ಹಾಕಿ ಖುಷಿ ಪಡುತ್ತಾರೆ. ತಮ್ಮ ಮಕ್ಕಳು ಗೆಲ್ಲಲಿ ಎಂದು ಜಗಳ ಕಾಯುವುದು ಉಂಟು.

ಮಕ್ಕಳಿಗೆ ಡ್ಯಾನ್ಸ್ ಕಲಿಸುವ, ಸ್ವತಃ ಆಟ ಆಡಿ ಕಲಿಸುವ, ತಮ್ಮ ವಯಸ್ಸನ್ನು ಮರೆತು ಬೆರೆಯುವ ಶಿಕ್ಷಕರು ಭಾವನಾ ಜೀವಿಗಳು. ಶಿಕ್ಷಣ ಇಲಾಖೆ ಮತ್ತು ಮಕ್ಕಳ ನಡುವೆ ಕೊಂಡಿ ಆಗಿರುವ ಶಿಕ್ಷಕರಿಗೆ ನಮೋ ನಮಃ. ಶಿಕ್ಷಕ ದೇವೋ ಭವ.


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top