1962ರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವನ್ನು ನಮ್ಮ ದೇಶದಲ್ಲಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾರೆ. ಹಿಂದಿನಿಂದ ಗುರುವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಮ ಎಂದು ತಿಳಿದು, ಅವರನ್ನು ಸ್ಮರಿಸುವ ಮಂತ್ರ ಹೀಗಿದೆ.
ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರವೇ ನಮಃ
ಓಂ ಸಹನಾಮವತು, ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು
ಮಾವಿದ್ವಿಷಾಯೈ ಓಂ ಶಾಂತಿಃ ಶಾಂತಿಃ ಶಾಂತಿಃ
ಹಿಂದೆ ಗುರುಶಿಷ್ಯರು ಒಟ್ಟಾಗಿ, ಪ್ರಾರ್ಥನೆ ಮಾಡುತ್ತಿದ್ದ ಪ್ರಾರ್ಥನೆ ಇದು. ಇದರರ್ಥ ಒಟ್ಟಾಗಿ ಬಾಳೋಣ, ಒಟ್ಟಿಗೆ ಊಟ ಮಾಡೋಣ, ಒಟ್ಟಾಗಿ ನಮ್ಮ ಶಕ್ತಿಯನ್ನು ಬೆಳಸಿಕೊಳ್ಳೋಣ ಈ ಮೂಲಕ ನಮ್ಮ ತೇಜಸ್ಸನ್ನು ಬೆಳಸಿಕೊಳ್ಳೋಣ, ಎಲ್ಲರಿಗೂ ಶಾಂತಿ ದೊರಕಲಿ. ಆದಿ ಕಾಲದಿಂದ ಪುರಾಣ, ಇತಿಹಾಸ, ಧರ್ಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಯಾ ಕಾಲಕ್ಕೆ ಆಯಾ ಕ್ಷೇತ್ರದ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಪುರಾಣ ಕಾಲಕ್ಕೆ ಹೋದರೆ ಸಪ್ತರ್ಷಿಗಳಾದ ಅತ್ರಿ, ಭಾರದ್ವಾಜ, ಗೌತಮ, ಜಮದಗ್ನಿ, ಕಾಶ್ಯಪ, ವಸಿಷ್ಠ ಹಾಗೂ ವಿಶ್ವಾಮಿತ್ರ. ರಾಮಾಯಣದಲ್ಲಿ ಸ್ವಯಂ ವಿಷ್ಣುವಿನ ಅವತಾರವಾದ ಶ್ರೀರಾಮನಿಗೆ ವಿಧ್ಯಾ ಗುರುಗಳು ವಸಿಷ್ಠ ಋಷಿ. ರಾಮ- ಲಕ್ಷ್ಣಣರಿಗೆ ಶಸ್ತ್ರ ವಿದ್ಯೆ ಕಲಿಸಿಕೊಟ್ಟವರು ವಿಶ್ವಾಮಿತ್ರ. ಮಹಾಭಾರತದಲ್ಲಿ ದ್ರೋಣಾಚಾರ್ಯ ಕೃಪಾಚಾರ್ಯ, ಪಾಂಡವರು ಹಾಗೂ ಕೌರವರಿಗೆ ಶಸ್ತ್ರ ವಿದ್ಯೆ ಕಲಿಸಿದವರು ಪರಶುರಾಮ ಕರ್ಣನ ಗುರು. ಧಾರ್ಮಿಕ ಗುರುಗಳಾಗಿ ಅದ್ವೈತವನ್ನು ಸಾರಿದ ಶಂಕರಾಚಾರ್ಯರು ಧ್ವೈತವನ್ನು ಸಾರಿದ ಮಧ್ವಾಚಾರ್ಯರು ವಿಶಿಷ್ಟಾದ್ವೈತವನ್ನು ಭೋಧಿಸಿದ ರಾಮಾನುಚಾರ್ಯರು, ಜೈನ ಧರ್ಮ ಭೋಧಿಸಿದ ಮಹಾವೀರ, ಭೌದ್ಧಧರ್ಮ ಸ್ಥಾಪಿಸಿದ ಗೌತಮಬುದ್ಧ, ಕ್ರಿಶ್ಚಿಯನ್ ಧರ್ಮದ ಯೇಸುಕ್ರಿಸ್ತ ಮಹಮ್ಮದ್ ಪೈಗಂಬರ್ ಇವರುಗಳನ್ನು ಆಯಾ ಮತಗಳ ಗುರುಗಳೆಂದು ಗೌರವಿಸಿ ಅವರ ತತ್ವಗಳನ್ನು ಅನುಸರಿಸಲು ಪ್ರಯತ್ನಿಸುತ್ತೇವೆ. ರಾಮಾಯಣ ಬರೆದ ವಾಲ್ಮೀಕಿಯೂ ನಮಗೆ ಗುರು. ಯೋಗ ಶಾಸ್ತ್ರವನ್ನು ಕೊಟ್ಟ ಪತಂಜಲಿಯೂ ನಮಗೆ ಗುರು. ಭಕ್ತರಿಗೆ ರಾಘವೇಂದ್ರಸ್ವಾಮಿಗಳು ಗುರು. 12ನೇ ಶತಮಾನದ ಶರಣ ಪರಂಪರೆಯ ಅಲ್ಲಮಪ್ರಭು, ಬಸವಣ್ಣ, ಅಕ್ಕ ಮಹಾದೇವಿ, ಇವರೆಲ್ಲರ ಜೀವನಶೈಲಿ, ಭಕ್ತಿ, ಸಮಾನತೆ- ಕಾಯಕತತ್ವ –ದಾಸೋಹ ಹಾಗೂ ಪ್ರಸಾದಗಳೆಂಬ ತತ್ವಗಳ ಪರಿಪಾಲನೆ ಹಾಗೂ ಅನುಷ್ಠಾನಗಳಿಂದ, ಇವರು ಬರೆದ ವಚನಗಳಿಂದ ಈ ಎಲ್ಲ ಶರಣರು ನಮಗೆ ಗುರು ಸಮಾನ. 15ನೇ ಶತಮಾನದ ದಾಸ ಪರಂಪರೆಯ ಪುರಂದರದಾಸರು, ಕನಕದಾಸರು, ವಿಜಯದಾಸರು ಅವರ ಬರೆದಿರುವ ಲಕ್ಷಾವಧಿ ದೇವರ ನಾಮಗಳು - ಸುಳಾದಿಗಳು – ಕೀರ್ತನೆಗಳಿಂದ ಅವರ ಸಾಹಿತ್ಯದಷ್ಟೇ ಮುಖ್ಯವಾದ ಅವರ ಜೀವನಶೈಲಿಯಿಂದ, ಭಗವಂತನಲ್ಲಿ ಸಮರ್ಪಣೆ ಮಾಡಿಕೊಳ್ಳುವ ಅವರ ಭಕ್ತಿಯಿಂದ ನಮಗೆ ಮಾರ್ಗ ತೋರುವ ಗುರುಗಳಾಗಿದ್ದಾರೆ. ಭಕ್ತಿಪಂಥದ ಕಬೀರದಾಸರು, ಸೂರದಾಸರು, ಮೀರಾಬಾಯಿ, ಚೈತನ್ಯ ಪ್ರಭು, ಇವರ ಆಯಾ ಪ್ರದೇಶಗಳಲ್ಲಿ ಗುರುಗಳಾಗಿದ್ದಾರೆ. ಕರ್ನಾಟಕದ ಸರ್ವಜ್ಞ, ಮುಪ್ಪಿನ ಷಡಾಕ್ಷರಿ, ಶಿಶುನಾಳ ಷರೀಫ, ಇವರೆಲ್ಲ ಜಾತಿ, ಧರ್ಮಗಳ ಸೀಮೆ ದಾಟಿದ ಸೀಮಾತೀತ ಗುರುಗಳು. ಇತಿಹಾಸದ ಪುಟಗಳನ್ನು ತೆರೆದಾಗ ಮೌರ್ಯ ಸಾಮ್ರಾಜ್ಯ ಸ್ಥಾಪಿಸಿದ ಚಂದ್ರಗುಪ್ತನ ಗುರು ಚಾಣಕ್ಯ, ಮೊಗಲರ ವಿರುದ್ಧ ಹೋರಾಡಲು ಹಿಂದೂ ಸಾಮ್ರಾಜ್ಯ ಕಟ್ಟಿದ ಚತ್ರಪತಿ ಶಿವಾಜಿಯ ಗುರು ಸಮರ್ಥ ರಾಮದಾಸರು, ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹುಕ್ಕ, ಬುಕ್ಕರ ಗುರು ವಿದ್ಯಾರಣ್ಯರು.ಆಯಾ ಕಾಲಕ್ಕೆ ತಮ್ಮ ಶಿಷ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಾಮ್ರಾಜ್ಯ ಕಟ್ಟಲು ಅನುವಾದವರು. ಸಾಮಾಜಿಕ ಸುಧಾರಣೆ ತರಲು ಕ್ರಾಂತಿಕಾರಕ ಪ್ರಯತ್ನ ಮಾಡಿದ ದಯಾನಂದ ಸರಸ್ವತಿ, ರಾಜಾರಾಮ ಮೋಹನರಾಯ ಇವರೆಲ್ಲ ಆ ಕಾಲಕ್ಕೆ ಹೊಸ ಪಥ ತೋರಿಸಿದ ಮಾರ್ಗದರ್ಶಕ ಗುರುಗಳು. ಇನ್ನೂ ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಭಾರತೀಯ ಸಂಸ್ಕøತಿ ಮೊಳಗಿದ ಸ್ವಾಮಿ ವಿವೇಕಾನಂದರ ಗುರು ರಾಮಕೃಷ್ಣ ಪರಮಹಂಸರನ್ನು ಮರೆಯಲು ಸಾಧ್ಯವಾದೀತೇ! ಅರವಿಂದರು, ಏಕನಾಥ, ಮುಂತಾದ ಇನ್ನೂ ಎಷ್ಟೋ ಗುರುಗಳ ಪರಂಪರೆ ಈ ದೇಶದಲ್ಲಿದೆ. ಭಾರತ ಸಂಗ್ರಾಮದ ಕಾಲದಲ್ಲಿ ಲೋಕಮಾನ್ಯ ತಿಲಕರು, ಗಾಂಧಿ, ಲಾಲ್ - ಬಾಲ್ -ಪಾಲ್, ನೆಹರು, ರಾಜಗೋಪಾಲ್ ಆಚಾರಿ, ಬಿ. ಆರ್ ಅಂಬೇಡ್ಕರ್ ಇವರೆಲ್ಲ ಹೊಸ ಕಾಲಕ್ಕೆ ಹೊಸ ಕ್ರಾಂತಿಕಾರಿ ಮಾರ್ಗವನ್ನು ತೋರಿಸಿಕೊಟ್ಟ ಗುರುಗಳು. ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟು, ದುರ್ಬಲ ಮಹಿಳೆಯರಿಗೆ ಬೆಂಬಲ ಕೊಟ್ಟ ಜ್ಯೋತಿಬಾಪುಲೆ - ಸಾವಿತ್ರಿಬಾಪುಲೆ ಇವರು ಮಹಾಗುರುಗಳು. ಶಾಂತಿನಿಕೇತನ ಸ್ಥಾಪಿಸಿದ ರವೀಂದ್ರನಾಥ ಟಾಗೋರ್ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಇವರೆಲ್ಲ ಆಯಾ ಕ್ಷೇತ್ರಗಳ ಮಹಾನ್ ಗುರುಗಳು. ಸಂಗೀತ ಕ್ಷೇತ್ರಕ್ಕೆ ಬಂದರೆ ತ್ರಿಮೂರ್ತಿಗಳಾದ ತ್ಯಾಗರಾಜರು –ಮುತ್ತುಸ್ವಾಮಿ ದೀಕ್ಷಿತರು, ಹಾಗೂ ಶ್ಯಾಮ ಶಾಸ್ತ್ರಿಗಳನ್ನು ಮರೆಯಲು ಸಾಧ್ಯವೇ? ನೃತ್ಯ ಕ್ಷೇತ್ರಕ್ಕೆ ಬಂದರೆ ಮದ್ರಾಸಿನ ಕಲಾಕ್ಷೇತ್ರದ ರುಕ್ಮಿಣಿ ಅರುಂಡೆಲ್, ಮೈಸೂರಿನ ವಸುಂಧರಾ ದೊರೆಸ್ವಾಮಿ, ವಿಜಯಾನರಸಿಂಹಮೂರ್ತಿ, ತುಳಸಿ ರಾಮಚಂದ್ರ, ಕೃಪಾಪಡಕೆ, ಇವರೆಲ್ಲರ ಕೊಡುಗೆ ಅಪಾರ. ಆಕಾಶವಾಣಿಯ ಮೂಲಕ ನೂರಾರು ಬಾನುಲಿ ಹಾಗೂ ರಂಗಭೂಮಿ ನಾಟಕಗಳು, ಖ್ಯಾತ ಚಲನಚಿತ್ರ ಕಲಾವಿದರಿಗೆ 1936ರಿಂದ ತರಬೇತಿ ಕೊಡುತ್ತಿದ್ದ ಇಂದಿನ ತಲೆಮಾರಿಗೆ ಪರಿಚಯವಿಲ್ಲದ ನನ್ನ ತಂದೆ ಎನ್.ಎಸ್ ವಾಮನ್ ಕೂಡ ಕಲಾಗುರು. ಇವರೆಲ್ಲರನ್ನೂ ಸ್ಮರಿಸುತ್ತಾ ಎಲ್ಲ ಶಿಕ್ಷಕರಿಗೆ ನಮ್ಮ ಗೌರವ ಸಲ್ಲಿಸೋಣ. ಈ ಹಿನ್ನೆಲೆಯಲ್ಲಿ ಇಂದು ಗುರು -ಶಿಷ್ಯರ ಸಂಬಂಧ ಹಾಗೂ ಗುರುವಿನ ಮಹತ್ವದ ಬಗ್ಗೆ ಈಗ ಗಮನಿಸೋಣ.
ಪರಸ್ಪರ ನಂಬಿಕೆ, ಗೌರವ ಹಾಗೂ ಶ್ರದ್ಧೆ ಇರುವುದೇ, ಗುರು ಶಿಷ್ಯ ಸಂಬಂಧ. ಗುರು, ಜ್ಞಾನ, ಜಾಣ್ಮೆ ಹಾಗೂ ಜೀವನಕೌಶಲ್ಯ ಪ್ರಸರಣ ಮಾಡುತ್ತಾನೆ.ಸಾಂಪ್ರದಾಯಿಕ – ವೈಯಕ್ತಿಕ ಸಂಪರ್ಕ ಮತ್ತು ಮಾರ್ಗದರ್ಶನ ವೈಯಕ್ತಿಕಗೊಳಿಸಿದ ಕಲಿಕೆ – ವಿದ್ಯಾರ್ಥಿಯ ವಿಶಿಷ್ಠ ಸಾಮಥ್ರ್ಯಗಳು ಕಲಿಕೆ ಅಗತ್ಯ. ಗಣನೆಗೆ, ಮಾರ್ಗದರ್ಶನ ಈಗ ಕಸ್ಟಮೈಸ್ ಮಾಡಿದ ಕಲಿಕಾ ಅನುಭವ. ಈಗಿನ ಮಾರುಕಟ್ಟೆ ಕಂಪನಿಗಳಲ್ಲಿ ವಿದ್ಯಾರ್ಥಿ ಕಲಿಯುವಾಗ ಅವರ ಕೌಶಲ್ಯ, ಸಾಮಥ್ರ್ಯ ಅಭಿವೃದ್ಧಿಪಡಿಸಲು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸವಾಲುಗಳು ಮತ್ತು ಅವಕಾಶ ಎದುರಿಸಲು ಮಾರ್ಗದರ್ಶನ ಈಗ ತ್ವರಿತ ಪ್ರತಿಕ್ರಿಯೆ ಪ್ರಶ್ನೆಗಳಿಗೆ ಉತ್ತರ ಒದಗಿಸಲು ಅವರ ಅಧ್ಯಯನದಲ್ಲಿ ಟ್ರ್ಯಾಕ್‍ನಲ್ಲಿರಲು ಸಹಾಯ ಮಾಡಲು ಏ1 ಚಾಲಿತ ಕಲಿಕಾ ಸಹಾಯಕರು ಚಾಟ್ ಚಾಟ್ ಬಳಸುತ್ತಿದ್ದಾರೆ. ಸುಸಜ್ಜಿತ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಬೆಂಬಲ ಮಾರ್ಗದರ್ಶನ ಮಾಡುವ ಮೂಲಕ ಕಲಿಯುವ ಅಭ್ಯಾಸ ನೋಡಿಕಲಿ, ಕೇಳಿಕಲಿ ಮಾಡಿಕಲಿ ಸಾಂಪ್ರದಾಯಿಕಕ್ಕಿಂತ ಪ್ರಾಯೋಗಿಕ ಅನುಭವ ಸಂವಾದಾತ್ಮಕ ಗುರು ಶಿಷ್ಯ ಸಂಪ್ರದಾಯ ಹಿಂದಿನ ಕೆಲವು ತಲೆಮಾರುಗಳ ಬೆನ್ನುಲುಬಾಗಿದೆ.
ಡಿಜಿಟಲ್ ಯುಗದಲ್ಲಿ ಆನ್‍ಲೈನ್ ಡಿಜಿಟಲ್ ಪರಿಕರ ಸ್ವಯಂ ಕಲಿಕಾ ಅಪ್ಲಿಕೇಶನ್ ಬಳಸಿದ ಶಿಕ್ಷಕರ ಕಠಿಣ ಪರಿಶ್ರಮ. ಇಲಿರ್ನಿಂಗ್ ಪ್ಲಾಟ್ ಫಾರ್ಮ್, ಆನ್ ಲೈನ್ ಮುಖತಃ – ಮೈಕಿಲ್ಲದೇ, 45 ನಿಮಿಷ, 1 ಗಂಟೆ ನೀರು ಕುಡಿಯದೇ, ಬಿಟ್ಟೂ ಬಿಡದೇ ಇಲ್ಲದೇ, ಪಾಠ ಹಳ್ಳಿ ಶಾಲೆಗಳ - ಹಂಚಿಲ್ಲದ, ಅಂದ ಚೆಂದವಿಲ್ಲದ ಮರದ ಹಳೇ ಬೆಂಚು, ಡೆಸ್ಕು, ಕುರ್ಚಿಗಳಲ್ಲಿ ಪಾಠ ಚಾಕ್‍ಪೀಸಲ್ಲಿ ಕಲಿಸಿದ ಶಿಕ್ಷಕರು ಬ್ಲಾಕ್ ಬೋರ್ಡ್ ಮೇಲೆ ಬರೆದ ಶಿಷ್ಯರ ಅಂದಿನ ಪ್ರಯತ್ನ, ಶ್ರಮ ಸಾಧನೆಗೆ, ಇಂದಿನ ಆಧುನಿಕ ಕಂಪ್ಯೂಟರ್, ಮೊಬೈಲ್, ಗುರುಶಿಷ್ಯರ ಪ್ರಯತ್ನಕ್ಕೆ ಸಾಟಿಯಾಗಲಾರದು. ಇಂದಿರುವ ಸೌಲಭ್ಯಗಳಿಗೆ ಇಂದಿನ ಜನ ಹೊಂದಿಕೊಂಡಿದ್ದಾರೆ. ವಿದ್ಯುತ್ ಹೋದರೆ ಯು.ಪಿ.ಎಸ್ ಜನರೇಟರ್ ಎಲ್ಲಾ ಇದೆ. ಎಲ್ಲರಿಗೂ ಅಲ್ಲ. ಆದರೂ ಇಂದಿನ ಅನೇಕ ಶಿಕ್ಷಕರಿಗೆ ಸಂಬಳ, ಭಡ್ತಿ, ವರ್ಗಾವಣೆ, ಕಡೆ ಗಮನ ಹೆಚ್ಚು. ಬಹಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕವಾಗಿ ಮೇಲೆ ಬರುವ ಅವಕಾಶ. ಬಹಳ ಜನ ಪಾಸಾದರೆ ಸಾಕು. ಶ್ರೀಮಂತ ಕುಟುಂಬ ವಿದೇಶಕ್ಕೆ ಕಳಿಸುತ್ತಾರೆ. ಸ್ವಂತ ಕಂಪನೀಲಿ ಕೆಲಸ ಗ್ಯಾರಂಟಿ ಎಂದೇ ಇರುತ್ತಾರೆ. ಮಹತ್ವಾಕಾಂಕ್ಷೆ ಅನೇಕರಲ್ಲಿದೆ. ಆದರೆ ಅದಕ್ಕೆ ಇನ್ನು ಸಾಕಷ್ಟು ಪ್ರಯತ್ನ ಸಾಧನೆ ಬೇಕು. ಇದರಿಂದ ಅಂಕ ಹೆಚ್ಚು ಬರಬಹುದು. ರ್ಯಾಂಕ್ –ಮೆಡಲ್ ಎಲ್ಲ. ಆದರೆ ಇಂಥ ಬಹಳ ಜನರಿಗೆ ಅವರ (ಸೇಫ್ಟಿ ಝೋನ್)ಸುರಕ್ಷಿತ ವಲಯ ಹೋದರೆ ಸ್ವಲ್ಪ ಅಡೆತಡೆ ಬಂದರೂ, ಅವರ ಪ್ರಯತ್ನ ಯಶಸ್ಸು ಸಿಗದಿದ್ರೆ ಹತಾಶರಾಗಿ ಖಿನ್ನತೆ, ಆತ್ಮಹತ್ಯೆಗೆ ಜಾರುತ್ತಾರೆ.ಜೀವನ ಧೈರ್ಯ ಶಿಕ್ಷಕರು ಕೊಡಬೇಕು. ಹಣ -ಪದವಿ-ಸ್ಥಾನ ಮಾನ ವಿದೇಶ ಪ್ರಯಾಣ, ವಾಸ – ಆಸ್ತಿ – ಎಲ್ಲಕ್ಕಿಂತ ಮುಖ್ಯ. ಆತ್ಮಸ್ಥೈರ್ಯ ಏನಾದರೂ ಸಹಿಸುವ ತಾಳ್ಮೆ, ಆಘಾತ ಎದುರಿಸುವ ಸ್ಥೈರ್ಯ ಶಾರೀರಿಕ – ಮಾನಸಿಕ ದಾಢ್ರ್ಯತೆ ಕೊಡಬೇಕು. ಓದಿ, ಓದಿ ಕೂಚು ಭಟ್ಟನಾಗದೇ ಸ್ಮರಣಾಶಕ್ತಿ, ಸುಧಾರಿಸುವ, ಆಟ, ಓಟಗಳಿಂದ ಶಾರೀರಿಕ, ಮಾನಸಿಕ ಶಕ್ತಿ ಸಂಪಾದನೆ ವಿವಿಧ ಕಲೆಗಳ ಸೈಡ್ ಲರ್ನಿಂಗ್ ಅಂದರೆ ಜೊತೆ, ಜೊತೆಗೆ ಕಲಿಯುವಿಕೆ ಕಲಿಸಲು ಪ್ರೇರಣೆ ಕೊಡಬೇಕು. ಸ್ಟಾರ್ಸ್ ಆಗಿದ್ದರೆ ಅಂಥ ಸ್ಟಾರ್‍ಗಳನ್ನು ನಿರ್ಮಿಸುವ ಸ್ಟಾರ್ ಮೇಕರ್ಸ್ ಇಂದಿನ ಗುರುಗಳಾಗಬೇಕು. ಪ್ರಪಂಚದಲ್ಲಿ ಎಷ್ಟೋ ಜನ ತಮ್ಮ ಶಿಕ್ಷಣ ಪದವಿಗಿಂತ ಪಠ್ಯೇತರ ಚಟುವಟಿಕೆಗೂಡಿ, ನಾಟಕ-ಡ್ಯಾನ್ಸ್, ಭಾಷಣ, ಕ್ರೀಡೆ, ಸ್ವಂತ ಸಂಘಟನಾ ಶಕ್ತಿಯಿಂದ ಸ್ಟಾರ್ ಆಗಿದ್ದಾರೆ. ಅಂಥಾ ಸ್ಟಾರ್ ಮೇಕರ್ಸ್ ನೀವಾಗಬೇಕು. ದೇಶಾಭಿಮಾನ, ಭಾಷಾಭಿಮಾನ, ಪರಿಸರ ಪ್ರೇಮ, ಪರಸ್ಪರ ಸೌಹಾರ್ದತೆ, ವಿಶ್ವ ಮಾನವ ಭಾವ, ಸೋದರತ್ವ, ವಿಶ್ವಾಸ, ರೇಡಿಯೋ ಕೇಳಿ, ಚಂದನ ದೂರದರ್ಶನ ನೋಡಿ, ಪತ್ರಿಕೆ ಓದಿ ಅಂತ ಹೇಳಿ. ವ್ಯಕ್ತಿತ್ವ ವಿಕಸನ ಪ್ರಾಯೋಗಿಕವಾಗಿರಬೇಕು.
ಎನ್.ವ್ಹಿ.ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು
ಆಕಾಶವಾಣಿ
ಮೊ: 98455 65238
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ