ಉಡುಪಿ: ಆಗಸ್ಟ್ 1 ರಿಂದ 48 ದಿನಗಳ ಕಾಲ ತನಕ ನಡೆಯುವ ಶ್ರೀ ಕೃಷ್ಣ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಲೋಕಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಸ್ವಾಮಿ ಶ್ರೀ ಕೃಷ್ಣಾಯ ನಮ: ಮಂತ್ರಜಪ ಪಠಣ ಪ್ರತಿ ಜಿಲ್ಲೆ/ರಾಜ್ಯ/ದೇಶ/ವಿದೇಶಗಳಲ್ಲಿ ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಪಠಣ ನಡೆಯುತ್ತಿದೆ. ಅದರಂತೆ ಸೆ.7 ಭಾನುವಾರ ಬೆಳಿಗ್ಗೆ 10-00 ಯಿಂದ 11.00 ರವರಿಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭಾಧ್ರಪದ ಶುಕ್ಲ ಪೂರ್ಣಿಮ ಖಗ್ರಾಸ ಚಂದ್ರ ಗ್ರಹಣ ಪ್ರಯುಕ್ತ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ)ದ ಸಂಯುಕ್ತ ಆಶ್ರಯದಲ್ಲಿ 1008 ಕೃಷ್ಣಭಕ್ತರಿಂದ 1008 ಬಾರಿ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರದ ಜಪ ಪಠಣ ಸಾಮೂಹಿಕವಾಗಿ ನಡೆಯಲಿದೆ.
ಶ್ರೀ ಕ್ರಷ್ಣ ಸದ್ಭಕ್ತರು ಮನೆ ಮಂದಿಯೊಂದಿಗೆ ಸಾಂಪ್ರದಾಯಿಕ ಶೈಲಿಯ ವಸ್ತ್ರದಾರಣೆಯೊಂದಿಗೆ ಶ್ರೀ ಕೃಷ್ಣ ನಾಮಸ್ಮರಣೆಯ ಈ ಉತ್ಸವದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಶ್ರೀ ಗಳ ಆಶಯ.ಕಲಿಯುಗದಲ್ಲಿ ಎಲ್ಲಾ ಕಷ್ಟಗಳ ಪರಿಹಾರಕ್ಕೆ ಕ್ರಷ್ಣ ಮಂತ್ರ ರಾಮಬಾಣವಾಗಿದೆ. ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರು ಪುತ್ತಿಗೆ ಮಠದ ಯುಟ್ಯೂಬ್ ನಲ್ಲಿ ಲೈವ್ ವ್ಯವಸ್ಥೆ ತಿದ್ದುಪಡಿ ಆನ್ ಲೈನ್ ನಲ್ಲಿ ಭಾಗವಹಿಸಲು ಅವಕಾಶವಿದೆಯೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


