ಸುರತ್ಕಲ್: ವಿದ್ಯಾರ್ಥಿ ಸೆನೆಟ್ ಕಾಲೇಜುಗಳ ಅತಿಮುಖ್ಯ ಭಾಗವಾಗಿದ್ದು ವಿದ್ಯಾರ್ಥಿಗಳಿಗೆ ಅವರ ಅಗತ್ಯತೆಗಳು ಮತ್ತು ಕಾಳಜಿಗಳನ್ನು ಸಮರ್ಥಿಸಲು ಧ್ವನಿ ನೀಡಿ ನಾಯಕತ್ವದ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿ ಸೆನೆಟ್‌ನ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯವಾಗಿದೆ ಎಂದು ಮಂಗಳೂರಿನ ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಡಾ. ಆರತಿ ಶೆಟ್ಟಿ ನುಡಿದರು. ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ವಿದ್ಯಾರ್ಥಿ ಸಂಘ ಮತ್ತು ಲಲಿತಕಲಾ ಸಂಘಗಳ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ಆಸಕ್ತಿ ಬೆಳಸಿಕೊಳ್ಳಬೇಕು. ಕಾಲೇಜಿನ ಲಲಿತಕಲಾ ಸಂಘವು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದು ವಿದ್ಯಾರ್ಥಿಗಳು ಗುಣಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಕಾಲೇಜು ಜೀವನವು ಕೇವಲ ಕಲಿಕೆಯಲ್ಲ ಅದು ಮುಂದಿನ ಜೀವಾನುಭವ ಪ್ರಾರಂಭವಾಗುವ ಪ್ರಥಮ ಹೆಜ್ಜೆಯಾಗಿದ್ದು ನಾಯಕತ್ವದ ಗುಣಗಳನ್ನು ಉತ್ತೇಜಿಸುವ ವೇದಿಕೆಯಾಗಿದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ. ವಿದ್ಯಾರ್ಥಿ ಸೆನೆಟ್‌ನ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಉಪಪ್ರಾಂಶುಪಾಲ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ನೀಲಪ್ಪ ವಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಧನ್ಯಕುಮಾರ್ ವೆಂಕಣ್ಣವರ್, ಲಲಿತಕಲಾ ಸಂಘದ ಸಂಯೋಜಕರಾದ ಡಾ. ಸಂತೋಷ್ ಆಳ್ವ, ಕುಮಾರ್ ಮಾದರ್, ಶರ್ಮಿತಾ ಯು, ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳಾದ ಅನಿತ ಪಿ.ಆರ್. ಭಟ್, ಶ್ರೀನಿವಾಸ್ ಶಿಗ್ಲಿ, ಅಜಿತ್ ಕುಮಾರ್, ಉಪ ಕಾರ್ಯದರ್ಶಿಗಳಾದ ತೃಪ್ತಿ, ಪ್ರಿನ್ಸಿತಾ ಡಿ’ಸೋಜಾ, ರಶ್ಮಿ, ಪಿ.ಜಿ. ಅಶ್ವಿನಿ, ಲಲಿತಕಲಾ ಸಂಘದ ಕಾರ್ಯದರ್ಶಿಗಳಾದ ಭೂಷಣ್ ಮತ್ತು ಪ್ರತೀಕ್ಷಾ ಎ. ಭಟ್, ಉಪಕಾರ್ಯದರ್ಶಿಗಳಾದ ವಿನೀತ್ ರಾಜ್, ಶ್ರೇಯ ಟಿ. ಶೆಟ್ಟಿ ಉಪಸ್ಥಿತರಿದ್ದರು. ದೀಕ್ಷಿತ್ ಸ್ವಾಗತಿಸಿ ಶ್ರಾವ್ಯ ವಂದಿಸಿದರು. ದೇವಿಕ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


