ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ ಪೂರ್ವ ಅಧ್ಯಕ್ಷರ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮ ಉಪ್ಪಿನ ಕೋಟೆ ಬಳಿಯ ಕುದ್ರು ರಿಲ್ಯಾಕ್ಸ್ ಪಾರ್ಕ್ ಸಭಾಂಗಣದಲ್ಲಿ ಸೆ.7 ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಡೆಪ್ಯೂಟಿ ವಲ್ಡ್ ಚೇರ್ಮನ್ ನೂರುದ್ದೀನ್ ಸೇವಾಲಾ ಇವರು ಉದ್ಘಾಟಿಸಿ ಮಾತನಾಡಿ, ಭಾರತೀಯ ಮೂಲದ ಅಂತರಾಷ್ಟ್ರೀಯ ಸಂಸ್ಥೆ ಜಯಂಟ್ಸ್ ಸಂಸ್ಥೆಯು 50 ವರ್ಷಗಳಿಂದ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ನಿತ್ಯ ನಿರಂತರವಾಗಿ ಮಾಡುತ್ತಿದೆ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಈ ಸಂಸ್ಥೆ ನಡೆಯುತ್ತಿರುವುದು ಗಮನಾರ್ಹ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಸದಸ್ಯತನ ಬೆಳವಣಿಯಾಗಬೇಕಾಗಿದೆ ಎಂದರು.
ಜಯಂಟ್ಸ್ ಪೂರ್ವ ಅಧ್ಯಕ್ಷೆ ಶಶಿಕಲಾ ನಾಯ್ಡು, ಸುಂದರ ಪೂಜಾರಿ ಮೂಡುಕುಕ್ಕುಡೆ, ಉದಯ್ ಬಿ, ದಿನಕರ್ ಕೆ. ಅಮೀನ್, ಮಧುಸೂದನ್ ಹೇರೂರು, ಮತ್ತು ನೂರುದ್ದೀನ್ ಸೇವಾಲಾ ಇವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೇವರು ಎಲ್ಲರಿಗೂ ಸೇವೆ ಮಾಡಲು ಅವಕಾಶ ನೀಡುವುದಿಲ್ಲ. ಕೇವಲ ಕೆಲವು ಮಂದಿ ಮಾತ್ರ ಈ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಸಾಲಿಗೆ ನಾವು ನೀವು ಸೇರಿರುವುದು ನಮ್ಮ ಪೂರ್ವಜನ್ಮದ ಪುಣ್ಯ, ಪ್ರಕೃತಿ ನಮಗೆ ನೀಡಿದ ಅಪೂರ್ವ ಕೊಡುಗೆಗಳನ್ನು ನಿರಂತರವಾಗಿ ಸ್ಮರಣೆ ಮಾಡಿ ನಾವು ಅದಕ್ಕಾಗಿ ಪ್ರತಿದಿನ ಪ್ರಕೃತಿಗೆ ಧನ್ಯವಾದಗಳನ್ನು ಹೇಳಬೇಕು.ಈ ಅಂತರಾಷ್ಟ್ರೀಯ ಸಂಸ್ಥೆಯು ಸಲ್ಲಿಸುತ್ತಿರುವ ಸೇವೆ ಅಭಿನಂದನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಅಣ್ಣಯ್ಯದಾಸ್ ವಹಿಸಿ ಶುಭ ಹಾರೈಸಿದರು.
ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಕೆ. ಅಮೀನ್ ಜಯಂಟ್ಸ್ ಫೌಂಡೇಶನ್ ಅಧ್ಯಕ್ಷ ತೇಜಶ್ವರ್ ರಾವ್, ಸ್ಪೆಷಲ್ ಕಮಿಟಿ ಸದಸ್ಯ ಮೋಹನ್ ಕರೆಕರ್, ಗಜಾನನ ನೀಲಕರಿ, ಯುನಿಟ್ ಡೈರೆಕ್ಟರ್ ಎಚ್. ವೆಂಕಟೇಶ್ ಮುಂತಾದವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಮಧುಸೂದನ್ ಹೇರೂರು ಮತ್ತು ಜಯಂಟ್ಸ್ ಪೂರ್ವ ಅಧ್ಯಕ್ಷರ ಸಮಿತಿಯ ಪ್ರಮುಖರಾದ ಪಾಂಡುರಂಗ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಪೂರ್ವ ಅಧ್ಯಕ್ಷರನ್ನು ಗೌರವಿಸಲಾಯಿತು. ಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಿತು.
ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ ಒಲಿವರ್ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗೆ 1 ಲಕ್ಷ ರೂ ಸಹಾಯಧನ ವಿತರಿಸಲಾಯಿತು. ಕರ್ನಾಟಕ ವಿವಿಧ ಜಿಲ್ಲೆಗಳಿಂದ ಸುಮಾರು 200 ಜನ ಪೂರ್ವಾಧ್ಯಕ್ಷರು ಭಾಗವಹಿಸಿದ್ದರು.
ಶ್ರೀನಾಥ್ ಕೋಟ, ಪ್ರಸನ್ನ ಕಾರಂತ್, ಮಂಜುನಾಥ್ ಶೆಟ್ಟಿಗಾರ್, ಡೊರಿಸ್, ಡೊನಾಲ್ಡ್, ರತ್ನಾ, ಪ್ರತಿಭಾ, ವಿವೇಕಾನಂದ ಕಾಮತ್, ಸುನೀತಾ ಮಧುಸೂಧನ್, ಉಷಾ ಎಸ್ ಪೂಜಾರಿ, ವಿಲ್ಸನ್, ಗಾಯತ್ರಿ, ಪ್ರದೀಪ್ ಶೆಟ್ಟಿ, ಅಕ್ಷತಾ ಶೆಟ್ಟಿ, ಡಾ. ಎನ್ ವಿ ಕಾಮತ್ ಮುಂತಾದವರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

