ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಹಾಗೂ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಕೃಷ್ಣಾಷ್ಟಮೀ ಪರ್ವಕಾಲದಲ್ಲಿ ಹಮ್ಮಿಕೊಂಡಿರುವ ಜ್ಞಾನ ಮಂಡಲೋತ್ಸವ ನಿಮಿತ್ತ ದಿನಾಂಕ ಸೆಪ್ಟೆಂಬರ್ 12ರಂದು ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಸಾರುವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ (IKS) ವಿಭಾಗ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಬೆಳಿಗ್ಗೆ 9:30 ಕ್ಕೆ ಪರ್ಯಾಯ ಶ್ರೀಪುತ್ತಿಗೆ ಮಠದ ಆಸ್ಥಾನ ವಿದ್ವಾಂಸರಾದ ಅಮೇರಿಕಾದ ನಿವಾಸಿಗಳಾದ ಕೇಶವ್ ರಾವ್ ತಾಡಿಪತ್ರಿ ಅವರು ಆಯ್ಕೆಯಾಗಿದ್ದಾರೆ. ಉಭಯ ಶ್ರೀಪಾದರ ಸನ್ನಿಧಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಾಧಿಪತಿಗಳಾದ ಗೌರವಾನ್ವಿತ ಡಾ.ವಿನಯ್ ಹೆಗ್ಡೆ ಅವರು ವಹಿಸಲಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಎಂ. ಎಸ್ ಮೂಡಿತ್ತಾಯ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಅಹಲ್ಯಾ ಎಸ್, ವಿಜ್ಞಾನ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಪದ್ಮಶ್ರೀ ಡಾ. ಪ್ರಹ್ಲಾದ್ ರಾಮ್ ರಾವ್, ಉಡುಪಿಯ ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ. ಶ್ರೀಪತಿ ತಂತ್ರಿ, ಪ್ರಸಿದ್ಧ ವಿದ್ವಾಂಸ ಶ್ರೀ ಗೋಪೀನಾಥಾಚಾರ್ ಗಲಗಲಿ USA, ಸಂಶೋಧಕ ಡಾ.ಸುದರ್ಶನ್ ಮೂರ್ತಿ USA, ಸಂಶೋಧಕ ವಿದ್ವಾಂಸ ಡಾ ಲಕ್ಷ್ಮೀ ಮೂರ್ತಿ USA, ಕಾಣಾದ ಸಂಸ್ಡೆಯ ಡಾ ಗುರುಪ್ರಸಾದ್ USA, ದುಬೈನ ಲೆಕ್ಕ ಪರಿಶೋಧಕರಾದ ಮುರಳೀಧರ ತಂತ್ರಿ, ನಿಟ್ಟೆ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ ಗೋಪಾಲ್ ಮೊಗೆರಾಯ, ನಿಟ್ಟೆ ಇಂಜನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ನಿರಂಜನ್ ಎನ್ ಚಿಪ್ಳೂನ್ಕರ್, ಪರ್ಯಾಯ ಶ್ರೀಪಾದರ ಅಂತಾರಾಷ್ಟ್ರೀಯ ಕಾರ್ಯದರ್ಶಿಗಳಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ (IKS) ನಿರ್ದೇಶಕರಾದ ಡಾ ಸುಧೀರ್ ರಾಜ್ ಕೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಧ್ಯಾಹ್ನ 11 ಕ್ಕೆ ಪ್ರಥಮ ಅಧಿವೇಶನ ಪ್ರಾರಂಭಗೊಳ್ಳಲಿದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ. ಎಂ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಅಧಿವೇಶದಲ್ಲಿ ನಿಟ್ಟೆ IKS ಕೇಂದ್ರದ ನಿರ್ದೇಶಕ ಡಾ. ಸುಧೀರ್ ರಾಜ್ ಕೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ವಾಂಸ ಡಾ.ಕೆ.ಇ.ವೆಂಕಟನಾಥನ್ ಇವರು ಪ್ರಬಂಧವನ್ನು ಮಂಡಿಸುವರು.
ಮಧ್ಯಾಹ್ಮ 2 ಕ್ಕೆ ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ದ್ವಿತೀಯ ಅಧಿವೇಶನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ, ವಿದ್ವಾಂಸ ಡಾ. ರಾಮಕೃಷ್ಣ ಭಟ್ ಕೆ., ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಸ್.ಮುರಳೀಧರ ರಾವ್ ಹಾಗೂ ಅಮೇರಿಕಾದ ಡಾ. ಸುದರ್ಶನ ಮೂರ್ತಿ ಅವರು ಪ್ರಬಂಧವನ್ನು ಮಂಡಿಸುವರು.
ಸಮಾರೋಪ ಕಾರ್ಯಕ್ರಮ:
ಸಂಜೆ 4 30 ಕ್ಕೆ ಪರಮಪೂಜ್ಯ ಉಭಯಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಹಲ್ಯಾ ಎಸ್ ಇವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಆಯುರ್ವೇದ ಸಂಶೋಧಕ ವಿದ್ವಾಂಸ ಡಾ. ತನ್ಮಯ ಗೋಸ್ವಾಮಿ, ಅಮೇರಿಕಾದ ಶ್ರೀಕೃಷ್ಣರಾಜ್ ಆರ್, ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ. ಶ್ರೀರಮಣ ಐತಾಳ್, ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಡಾ. ದೇವಿದಾಸ್ ಎಸ್, ನಾಯಕ್, ಇವರು ಭಾಗವಹಿಸುವರು.
ವಿಶೇಷ ಉಪನ್ಯಾಸಕರಾಗಿ ಹಿರಿಯ ವಿಜ್ಞಾನಿಗಳಾದ ಪದ್ಮಶ್ರೀ ಡಾ. ಪ್ರಹ್ಲಾದ್ ರಾಮ್ ರಾವ್ ಹಾಗೂ ಅಮೇರಿಕಾದ ವಿದ್ವಾನ್ ಗೋಪೀನಾಥಾಚಾರ್ ಗಲಗಲಿ ಆಗಮಿಸುವರು.
ಈ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ 50 ಕ್ಕೂ ಹೆಚ್ಚಿನ ಪ್ರಬಂಧಗಳು ಬಂದಿವೆ. ಇವುಗಳಲ್ಲಿ ಆಯ್ದ ಪ್ರಬಂಧಗಳನ್ನೊಳಗೊAಡ “ಜ್ಞಾನಭಾರತಮ್” ಪುಸ್ತಕವನ್ನು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಆನ್‌ಲೈನ್ ಮೂಲಕ 50 ಕ್ಕೂ ಹೆಚ್ಚಿನ ವಿದ್ವಾಂಸರು ಪ್ರಬಂಧವನ್ನು ಮಂಡಿಸುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

