ಸೆ.16: ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ರಥಯಾತ್ರೆಯ ಬೃಹತ್ ಶೋಭಾಯಾತ್ರೆ

Chandrashekhara Kulamarva
0


ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣ ಪ್ರಾಂತದ ವತಿಯಿಂದ ವೀರರಾಣಿ ಅಬ್ಬಕ್ಕ 500ನೇ ಜಯಂತಿ ಪ್ರಯುಕ್ತ ಅಯೋಜಿಸಲಾಗಿರುವ ರಾಣಿ ಅಬ್ಬಕ್ಕ ರಥಯಾತ್ರೆ ರಾಜ್ಯಾದ್ಯಂತ ಬಹಳ ಯಶಸ್ವಿಯಾಗಿ ಸಂಚರಿಸಿ ಸೆಪ್ಟೆಂಬರ್ 16ರಂದು ಮಂಗಳೂರಿಗೆ ತಲುಪಲಿದೆ. 


ಈ ರಥಯಾತ್ರೆಯ ಮೊದಲನೇ ರಥವು  15 ರಂದು ಬೆಳಿಗ್ಗೆ 10  ಗಂಟೆಗೆ ಉಜಿರೆ ಎಸ್‌ಡಿಎಂ ಕಾಲೇಜು ಮುಂಭಾಗ ಮಧ್ಯಾಹ್ನ 2  ಗಂಟೆಗೆ ಪುತ್ತೂರು ವಿವೇಕಾನಂದ ಕಾಲೇಜು, ಸಂಜೆ 06  ಗಂಟೆಗೆ ಕಲ್ಲಡ್ಕ ಮತ್ತು ಎರಡನೇ ರಥ  ಸಂಜೆ 06  ಗಂಟೆಗೆ ಸುಳ್ಯದಲ್ಲಿ ಸಂಚರಿಸಲಿದೆ.


ಸೆ. 16 ರ ಬೆಳಗ್ಗೆ  9.30ಕ್ಕೆ ಸರಿಯಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ, ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅನಂತರ 11.30ಕ್ಕೆ ಸರಿಯಾಗಿ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆಯ 5.30ರ ಹೊತ್ತಿಗೆ ರಥ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದ ಬಳಿ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.


إرسال تعليق

0 تعليقات
إرسال تعليق (0)
To Top