ಮುಂಡಿತ್ತಡ್ಕ: ಕಾಸರಗೋಡು ತಾಲೂಕಿನ ಅತೀ ಪುರಾತನವಾದ ಹಾಗೂ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು, ಇದರ ಅಂಗವಾಗಿ ಭಕ್ತರಿಂದ ತ್ವರಿತಗತಿಯಲ್ಲಿ ಶ್ರಮದಾನ ನಡೆಯುತ್ತಿದೆ. ಕ್ಷೇತ್ರದ ಆಡಳಿತ ಸಮಿತಿ ಹಾಗೂ ಶ್ರೀದುರ್ಗಾ ಯುವಕ ಸಂಘದ ಸದಸ್ಯರು, ಬುಧವಾರ ರಾತ್ರಿ ಅನಂತಪುರದ ಭಕ್ತರು ಶ್ರಮದಾನಕ್ಕೆ ನೇತೃತ್ವ ನೀಡಿ ರಾತ್ರಿ ಶ್ರಮದಾನದಲ್ಲಿ ಭಾಗವಹಿಸಿ ಕೃತಾರ್ಥರಾದರು.
ಜೂ.18ರಂದು ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞ ಕಲಶ ನಡೆಸಿ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇದೀಗ ನೂತನ ಗರ್ಭಗುಡಿಯ ನಿರ್ಮಾಣ ಕಾರ್ಯದಂಗವಾಗಿ ಅ. 24ಕ್ಕೆ ಶಿಲಾನ್ಯಾಸ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


