ಕಾರ್ಕಳ: ಬಿಎಸ್ಸಿ ನರ್ಸಿಂಗ್ ಕಾಲೇಜು ಕಾರ್ಕಳದಲ್ಲಿ ಕಳೆದ 4 ವರ್ಷಗಳಿಂದ ಇರುವ ಅನೇಕ ಸಮಸ್ಯೆಗಳನ್ನು ಬೇಗನೆ ಬಗೆಹರಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಒಂದು ಸುಸಜ್ಜಿತ ಕಟ್ಟಡವಿಲ್ಲದೆ, ಕಾಲೇಜು ನಿರ್ವಹಣೆಗೆ ಬೇಕಾದ ಗುಮಾಸ್ತರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಇಲ್ಲದೆ, ಸರಿಯಾದ ಉಪನ್ಯಾಸಕರು ಇಲ್ಲದೆ, ಸರಿಯಾದ ತರಗತಿ ಕೊಠಡಿಗಳು ಇಲ್ಲದೆ, ಶಾಚಾಲಯಗಳ ವ್ಯೆವಸ್ಥೆಗಳು ಸರಿಯಾಗಿ ಇಲ್ಲದೆ, ನರ್ಸಿಂಗ್ ವ್ಯಾಸಂಗಕ್ಕೆ ಬೇಕಾದ ಅತ್ಯಗತ್ಯ ಉಪಕರಣಗಳು ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾದ ಸರಿಯಾದ ಪ್ರಯೋಗಾಲಯ ವಿಲ್ಲದೆ, ಗ್ರಂಥಾಲಯ ವ್ಯವಸ್ಥೆ ಕಾಲೇಜಿನಲ್ಲಿ ಇಲ್ಲದೆ, ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ.
ಅದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತಿದ್ದು ಇದಕ್ಕೆ ಸಂಬಂದಿಸಿ ಕಾಲೇಜಿನ ಆಡಳಿತ ಮಂಡಳಿ ತಕ್ಷಣವೇ ಬಂದು ಸರಿಯಾದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒಂದು ಉತ್ತಮವಾದ ಅವಕಾಶ ಒದಗಿಸಬೇಕಾಗಿ ಎಬಿವಿಪಿ ಕಾರ್ಕಳ ವತಿಯಿಂದ ಪ್ರಾಂಶುಪಾಲರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ, ಉಡುಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


