ಅಂಧಕಾರದಿಂದ ಹೊರ ತರುವವನೇ ಗುರು : ಡಾ . ರಾಧಾ ಕೃಷ್ಣನ್ ನಂಬೂದಿರಿ

Upayuktha
0



ಪುತ್ತೂರು: ಅಂಧಕಾರವೆಂಬ ಕತ್ತಲೆಯಿಂದ ನಮ್ಮನ್ನು ಹೊರ ತರುವವನೇ ನಿಜವಾದ ಗುರು ಆಗಿರುತ್ತಾನೆ. ಭಾರತ ಶ್ರೇಷ್ಠ ಗುರುಪರಂಪರೆಯುಳ್ಳ ದೇಶವಾಗಿದೆ. ಗುರು ಭಕ್ತಿ ನಮ್ಮನ್ನು ಯಾವತ್ತೂ  ಕಾಪಾಡುತ್ತದೆ. ಸತತ ಅಭ್ಯಾಸಗಳಿಂದ ಜ್ಞಾನವೃದ್ದಿಯಾಗುತ್ತದೆ.  ವಿದ್ಯೆಯಲ್ಲಿ ಸಿಗುವ ಸುಖವನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುವುದು " ಎಂದು ಮದ್ರಾಸ್ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಮುಖ್ಯಸ್ಥ ಡಾ . ರಾಧಾ ಕೃಷ್ಣನ್ ನಂಬೂದಿರಿ ಹೇಳಿದರು.


ಇವರು ವಿವೇಕಾನಂದ  ಕಲಾ, ವಿಜ್ಞಾನ , ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)  ಇದರ ಭವಿಷ್ ಘಟಕ, ಕಲಾ ವಿಭಾಗ ,ವಿಜ್ಞಾನ ವಿಭಾಗ,  ವಾಣಿಜ್ಯ ವಿಭಾಗ ,ವ್ಯವಹಾರ ನಿರ್ವಹಣಾ ವಿಭಾಗ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗ ಇದರ ಸಹಯೋಗದಲ್ಲಿ ನಡೆದ ಗುರುವಂದನಾ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ  ವಸಂತ ಮಾಧವ.ಟಿ, " ನಾವು ಪಡೆದ ಜ್ಞಾನವನ್ನು ಬೇರೆಯವರಿಗೆ ಪ್ರಸಾರ ಮಾಡಬೇಕು. ಇದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ. ನಮ್ಮ ಕೌಶಲ್ಯದಿಂದ ನಾವು ಸಮಾಜದ ಸಂಘಟನೆಯನ್ನು ಮಾಡಬೇಕು. " ಎಂದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ವೇದವ್ಯಾಸ ರಾಮಕುಂಜ ಗುರು ನಮನ ಸ್ವೀಕರಿಸಿದರು.  ವೇದಿಕೆಯಲ್ಲಿ  ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ,  ಆಡಳಿತ ಮಂಡಳಿ  ಸಂಚಾಲಕ ಮುರಳಿಕೃಷ್ಣ ಕೆ.ಎನ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ್ ನಾಯ್ಕ ಬಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಭವಿಷ್ ಘಟಕದ ಸಂಯೋಜಕ ಡಾ.ಪ್ರಮೋದ್ ಎಮ್.ಜಿ ಸ್ವಾಗತಿಸಿ,ಉಪಪ್ರಾಂಶುಪಾಲ ಪ್ರೊ.ಶ್ರೀ ಕೃಷ್ಣಗಣರಾಜ್  ಭಟ್ ವಂದಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಚೈತನ್ಯ ಚಂದಪ್ಪ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top