ಕಬಡ್ಡಿ ಪಂದ್ಯಾಟ: ವಿವೇಕಾನಂದ PU ವಿದ್ಯಾಲಯದ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Upayuktha
0



ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಸರಕಾರಿ ಪದವಿಪೂರ್ವ ಕಾಲೇಜು, ಉಪ್ಪಿನಂಗಡಿ ಇದರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ  ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿನಿಯರಾದ ತ್ರಿಶಾಲಿ ಕೆ ಆರ್, ವರ್ಷ ಕೆ, ಆದ್ಯಾ ಬಿ ಆರ್, ಗ್ರೀಷ್ಮಾ, ವೀಕ್ಷಾ, ಶ್ರಾವ್ಯಾ, ರಕ್ಷಾ ಎ ಎಲ್, ಯಜ್ಞಾ ಹಾಗೂ ಪ್ರಥಮ ಪಿಯುಸಿಯ ವಿನ್ಯಾ ರೈ ಭಾಗವಹಿಸಿದ್ದರು.


ದ್ವಿತೀಯ ವಿಜ್ಞಾನ ವಿಭಾಗದ ವೀಕ್ಷಾ ಆಲ್ ರೌಂಡರ್ ಪ್ರಶಸ್ತಿಯನ್ನು ಹಾಗೂ ದ್ವಿತೀಯ ಕಲಾ ವಿಭಾಗದ ರಕ್ಷಾ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಇವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ ಎಸ್, ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿದ್ದು, ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top