ಚದುರಂಗ ಸ್ಪರ್ಧೆಯಲ್ಲಿ ಅಂಬಿಕಾದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Upayuktha
0

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾಭಾರತಿ ವಲಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 


ಅಂಬಿಕಾ ಪದವಿಪೂರ್ವ ವಿದ್ಯಾಲಯ: ನೇರಳಕಟ್ಟೆಯ ಸತ್ಯಶಂಕರ ಪಿ ಎಮ್ ಮತ್ತು ಶ್ವೇತಾ ಕೆ ದಂಪತಿ ಪುತ್ರ ಅಶ್ವಿನ್ ಪಿ.ಎಸ್. ಹಾಗೂ ಸುಳ್ಯ ಕಲ್ಮಡ್ಕದ ರಾಧಾಕೃಷ್ಣ ವಿ ಮತ್ತು ರೇಖಾ ದಂಪತಿ ಪುತ್ರ ರಂಜನ್ ವಿ. ಅವರು ಚಿಕ್ಕಬಳ್ಳಾಪುರದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟ ಹಾಗೂ ವಲಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಕ್ಟೋಬರ್ 8 ರಂದು ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚೆಸ್ ಟೂರ್ನಮೆಂಟಲ್ಲಿ ಸ್ಪರ್ಧಿಸಲಿದ್ದಾರೆ.


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ: ಚಿಕ್ಕಬಳ್ಳಾಪುರದ ಚಿಂತಾಮಣಿ ಮುಂಗನಹಳ್ಳಿಯ ಪಟ್ಟಿ ಆದಿನಾರಾಯಣ ರಾಮ ಲಕ್ಷಮಣ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಪ್ರಾಂತಮಟ್ಟದ ಹಾಗೂ ವಿಭಾಗ ಮಟ್ಟದ ಚೆಸ್ ಪಂದ್ಯಾಟದ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸಂತೋಷ್ ಎನ್ ಹಾಗೂ ಶ್ರುತಿ ಎಸ್ ದಂಪತಿ ಪುತ್ರ, ಎಂಟನೇ ತರಗತಿಯ ಸನ್ಮಯ್.ಎನ್, ಸುಪ್ರೀತ್ ಜೋಯಲ್ ಲೋಬೊ ಮತ್ತು ಶಿನಿ ಪೈಸ್ ದಂಪತಿಯ ಪುತ್ರ, ಆರನೇ ತರಗತಿಯ ವಿದ್ಯಾರ್ಥಿ ಸಂಹಿತ್ ಜೋಸ್ಸಿ ಲೋಬೋ, ಶ್ರೀನಿವಾಸ ಮಯ್ಯ ಮತ್ತು ಜಯಲಕ್ಷ್ಮೀ ಎಸ್ ಮಯ್ಯ ದಂಪತಿಯ ಪುತ್ರ, ಮಯೂರ್.ಎಸ್.ಮಯ್ಯ, ಅರವಿಂದ ಕುಮಾರ್ ಕೆ ಮತ್ತು ಜ್ಯೋತಿ ಕುಮಾರಿ ಕೆ ದಂಪತಿಯ ಪುತ್ರ  ರತುಲ್ ಅದ್ವೈತ ಹಾಗೂ ಪ್ರವೀಣ್ ರೈ ಸಿ ಮತ್ತು ತೃಪ್ತಿ ರೈ ದಂಪತಿಯ ಪುತ್ರ. ಆರನೆ ತರಗತಿಯ ತ್ರಿನಯ್ ರೈ ಇವರು  ಪ್ರಾಂತ ಹಗೂ ವಿಭಾಗೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.






Post a Comment

0 Comments
Post a Comment (0)
To Top