ಸಾಮಾಜಿಕ ಕಾಳಜಿಯೊಂದಿಗೆ ವ್ಯವಹಾರಕ್ಕೆ ಮುಂದುವರಿದರೆ ಸಮೃದ್ಧಿ: ದಿನೇಶ್ ಕೆ.ಶೆಟ್ಟಿ

Upayuktha
0



ದಾವಣಗೆರೆ: ಮಾನವನ ಜೀವನಕ್ಕೆ ಮಾನವೀಯ ಮೌಲ್ಯದೊಂದಿಗೆ ತೊಡಗಿಸಿಕೊಂಡರೆ ಹೊಟ್ಟೆ ಪಾಡು ಸಾರ್ಥಕವಾಗುತ್ತದೆ. ವ್ಯವಹಾರಕ್ಕೆ ಸಾಮಾಜಿಕ ಕಾಳಜಿಯೊಂದಿಗೆ ಮುಂದುವರಿದರೆ ಸಮೃದ್ಧಿಯಾಗುತ್ತದೆ. ವಾಣಿಜ್ಯ ನಗರಿಗೆ ನಾಲ್ಕು ದಶಕಗಳಿಂದ ಕರಾವಳಿಯ ಅಪ್ಪಟ ಕನ್ನಡ ಆರಾಧನೆಯ ಕಲೆ ಯಕ್ಷಗಾನವನ್ನು ಪರಿಚಯಿಸಿದ್ದು ಶೆಣೈಯವರು ಎಂದು ಹರಿಹರ-ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿಯವರು ತಮ್ಮ ಅಂತರಾಳದ ಅನಿಸಿಕೆ ಹಂಚಿಕೊಂಡರು.


ದಾವಣಗೆರೆಯ ಎ.ವಿ.ಕೆ. ಕಾಲೇಜ್ ರಸ್ತೆಯಲ್ಲಿರುವ ಚೇತನಾ ಹೋಟೆಲ್ ಸಭಾಂಗಣದಲ್ಲಿ ತಾರಿವಾಳ ಗ್ಲೋಬಲ್ ಗೋಲ್ಡ್ ಸಂಸ್ಥೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕರಾದ ರಾಜೇಶ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕವಾಗಿ ಎಲ್ಲರೂ ಸಹಕಾರ, ಸಹಯೋಗ ಇದ್ದರೆ ನಮ್ಮ ನಿಮ್ಮೆಲ್ಲರ ಈ ಸಂಸ್ಥೆ ಮುಂದುವರಿಯುತ್ತದೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾರಿವಾಳ ಗ್ಲೋಬಲ್ ಸಮೂಹದ ಸಂಸ್ಥಾಪಕರಾದ ಬಸವರಾಜ್ ಸಂಗಮೇಶ್, ಮುಖ್ಯ ಅತಿಥಿಗಳಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷ ನಾಯಕರಾದ ಪ್ರಸನ್ನಕುಮಾರ್, ಉಡುಪಿ ಜಿಲ್ಲೆಯ ಮಣಿಪಾಲದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|| ಎಸ್.ಯು. ಶರೀಫ್, ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ ಈ ಚಿನ್ನದ ಸಂಸ್ಥೆ ದೇವನಗರಿಯಲ್ಲಿ ಪ್ರಾರಂಭವಾಗಿದ್ದು ಶ್ಲಾಘನೀಯ ಎಂದರು.


ಸಮಾರಂಭದ ಮೊದಲು ಪ್ರೇಕ್ಷಕರ ಸಮಯ ವ್ಯರ್ಥವಾಗಬಾರದು ಎಂದು ಸದುದ್ದೇಶದಿಂದ ಸಾಲಿಗ್ರಾಮ ಗಣೇಶ್ ಶೆಣೈಯವರು ರಾಮಾಯಣ, ಮಹಾಭಾರತ ಕುರಿತು ರಸಪ್ರಶ್ನೆ, ಮನೋರಂಜನೆಯೊಂದಿಗೆ ಕಾರ್ಯನಿರ್ವಹಿಸಿದರು. ನೆರೆದ ಪ್ರೇಕ್ಷಕರು ತಮ್ಮ ತಮ್ಮ ಅನುಭವ, ಸಾಮಾನ್ಯಜ್ಞಾನದ  ಅರಿವು ಮೂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ದಾವಣಗೆರೆಯ ತಾರಿವಾಳ ಗ್ಲೋಬಲ್ ಗೋಲ್ಡ್ ಸಂಸ್ಥೆಯ ಸಂಸ್ಥಾಪಕ ಶೋಭಾ ರೂಪೇಶ್, ಸಮಿತಿ ಸದಸ್ಯರಾದ ರಾಜೇಶ್ ಸುವರ್ಣ, ಎಸ್.ರವೀಂದ್ರ ಆಚಾರ್ಯ, ಹರೀಶ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿವಮ್ಮ ಎಸ್. ಪ್ರಾರ್ಥನೆಯೊಂದಿಗೆ ಸ್ವಾಗತಿಸಿ, ನಿರೂಪಿಸಿ  ಕೊನೆಯಲ್ಲಿ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top