ಸುರಪುರ: 'ಕಾವ್ಯದ ಆಪ್ತತೆ ಮನದ ಕಡಲಿನ ಭಾವವನ್ನು ಸ್ಪಂದಿಸುತ್ತದೆ. ಎಲ್ಲವನ್ನೂ ಮರೆಸುವುದು ಒಳ್ಳೆಯ ಕಾವ್ಯದ ವ್ಯಸನ. ಈಗ ಕಾವ್ಯವು ಗದ್ಯದ ರೂಪ ಪಡೆದು ಕಾವ್ಯದ ಅಸಲಿಯತ್ತೆ ಕಾಣೆಯಾಗುತಲಿದೆ' ಎಂದು ಯಾದಗಿರಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರದಲ್ಲಿ ಮಾತನಾಡಿದರು.
ನಂತರ ನಡೆದ ಕವಿಗೋಷ್ಠಿಯನ್ನು ವಿಮರ್ಶಿಸಿದ ಯುವ ಕವಿ ವೆಂಕಟೇಶಗೌಡ ಪಾಟೀಲ ಮಾತನಾಡುತ್ತ, ಆಧುನಿಕ ಕಾವ್ಯದ ಹೊಳಹುಗಳ ಬಗ್ಗೆ ವಿವರಿಸಿದರು. 'ಕಾಲಕ್ಕೆ ತಕ್ಕಂತೆ ಕಾವ್ಯದ ಮಾರ್ಗ ಬದಲಾಗುತ್ತದೆ. 21 ನೇ ಶತಮಾನದಲ್ಲಿ ಯಾವ ಪಂಥಗಳು ಇಲ್ಲ ಯಾವ ಪಂಥಗಳು ನಿಲ್ಲದ ಕಾಲವಿದು. ಕಾವ್ಯ ರೂಪಾತ್ಮಕವಾಗಿ ಮಾತಾಡಬೇಕು. ಕಾವ್ಯದ ಶರೀರ ಛಂದಸ್ಸು ಅದರ ಅಧ್ಯಯನ ಕವಿ ಮಾಡಬೇಕು. ಕವಿತೆ ಒಮ್ಮೆಲೇ ರೂಪಗೊಳ್ಳುವುದಿಲ್ಲ ಅದು ಕಾಲದ ಕೂಸು ಎಂದು ಅವರು ನುಡಿದರು.
ಪಂಪ-ಬಸವ-ಹರಿಹರನ ಕಾವ್ಯ ಮಾರ್ಗ ಅವರು ಕಾಲವು ರೂಪಿಸಿತು. ನಮ್ಮ ಮನೋಧರ್ಮ ನಮ್ಮ ಕಾವ್ಯ ರೂಪಿಸುವುದು. ಕವಿತೆ ಬರೆದಾದ ಮೇಲೆ ತಿದ್ದಿ ಬರೆಯಬೇಕು. ಅದನ್ನು ಮರು ಕಟ್ಟಬೇಕು. ಗಟ್ಟಿ ಮಾನವೀಯ ಆಶಯ ವಿಲ್ಲದ ಕವಿತೆ ಯಶಸ್ಸು ಕಾಣಲಾರದು. 'ಕಾವ್ಯ ಎನ್ನುವುದು ಕಾಲದ ಕೂಸು ಎಂದು ಡಿ.ಆರ್. ನಾಗರಾಜ ನುಡಿದರು.
ಇದರೊಂದಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಲ್ಲಣ್ಣ ಕೋಳೂರಗಿ ಹಾಗೂ ಸಾಹೇಬರೆಡ್ಡಿ ಇಟಗಿ, ನೂತನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಾವೇದ ಹವಾಲದಾರ, ನೂತನ ನಾಮ ನಿರ್ದೇಶಿತ ನಗರಸಭೆ ಸದಸ್ಯ ಪ್ರಕಾಶ ಅಲಬನೂರ ಅವರನ್ನು ಕಾರ್ಯಕ್ರಮದಲ್ಲಿ ಗಮಕ ಕಲಾ ಪರಿಷತ್ರಿನ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಪ್ರಕಾಶಚಂದ ಜೈನ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ ಆಗಮಿಸಿದ್ದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಯಲ್ಲಪ್ಪ ಹುಲಕಲ್ಲ, ಹೋಮಗಾರ್ಡ ಕಮಾಂಡೆಂಟ್ ವೆಂಕಟೇಶ ಶಹಪುರಕರ, ಮಹೇಂದ್ರ ಅಂಗಡಿ, ಜಾಗೃತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾರ್ಗೆಲ್, ಬಣಗಾರ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಬಣಗಾರ,ನಬೀಲಾಲ ಮಕಾನದಾರ,ಮಹ್ಮದಸಾ ಢಾಲಾಯತ,H. ರಾಠೋಡ
ಕನಕಪ್ಪ ವಾಗನಗೇರ,ಶರಣಗೌಡ ಪಾಟೀಲ ಜೈನಾಪುರ ಶರಣಬಸವ ಹೂಗಾರ,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜು ಕುಂಬಾರ, ಬಾಬು ಹಾಗೂ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ದೇವು ಹೆಬ್ಬಾಳ ನಿರೂಪಿಸಿದರು, ಪ್ರಕಾಶ ಬಣಗಾರ ಸ್ವಾಗತಿಸಿದರು. ದೊಡ್ಡಮಲ್ಲಿಕಾರ್ಜುನ ಉದ್ಧಾರ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


 
 
 
 
 
 
 
 
 
 
 
 

 
