ಮಂಗಳೂರು: ಮಾನಸಿಕ ಆರೋಗ್ಯ ತರಬೇತಿ ಕಾರ್ಯಕ್ರಮ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಇವರ ಜಂಟಿ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ ತರಬೇತಿ ಕಾರ್ಯಕ್ರಮ ಬುಧವಾರ ಆರ್.ಎ.ಪಿ.ಸಿ.ಸಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.    


ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞೆ ಡಾ. ಪ್ರಜಾಕ್ತ ರಾವ್  ಮಾತನಾಡಿ, ಇವರು ಒಸಿಡಿ ಎಂದರೆ (Obsessive-Compulsive Disorder) ಗೀಳು ಮನೋರೋಗ. ಇದರಿಂದ ಒಬ್ಬ ವ್ಯಕ್ತಿಗೆ ಅತಿಯಾದ, ಪುನರಾವರ್ತಿತ ಮತ್ತು ಅನಗತ್ಯ ಆಲೋಚನೆಗಳು ಬರುತ್ತವೆ. ಇದಕ್ಕಾಗಿ ಅವರು ಪುನರಾವರ್ತಿತ ನಡವಳಿಕೆಗಳನ್ನು ಮಾಡುತ್ತಾರೆ. ಇದು ಅವರ ದೈನಂದಿನ ಜೀವನಕ್ಕೆ ತೊಂದರೆ ನೀಡುತ್ತದೆ ಎಂದು ಹೇಳಿದರು.


ಲಿಂಕ್ ಡಿ ಎಡಿಕ್ಷನ್ ಸೆಂಟರ್  ಆಡಳಿತಾಧಿಕಾರಿ ಲಿಡಿಯೋ ಲೋಬೊ ಮಾತನಾಡಿ,  ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯ ದುರುಪಯೋಗ ಹಾಗೂ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀಳುತ್ತದೆ ಎಂಬುವುದನ್ನು ತಿಳಿಸಿದರು.


ಪದ್ಮಾ ಇವರು ಅಂಗಾಂಗ ದಾನಿಗಳಾಗಿ ಜೀವ ರಕ್ಷಕನಾಗಿ, ಬೇರೆಯವರ ಜೀವನದಲ್ಲಿ ಬೆಳಕನ್ನು ಚೆಲ್ಲುವ ಕಾರ್ಯಕ್ಕೆ ನೋಂದಾವಣೆ ಮಾಡಲು ತಿಳಿಸಿದರು.


ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾಡಳಿತ ಆರೋಗ್ಯ ಮತ್ತು ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಿಳಿಸಲಾಯಿತು.


ವಿಚ್ಚೇದನ ಸಮಾಲೋಚಕಿ ಮಾನಸ ಹೆಗ್ಡೆ ಇವರು ಮೆಂಟಲ್ ಹೆಲ್ತ್ ಕೇರ್ ಆ್ಯಕ್ಟ್ (Mental Health Care Act) 2017 ನ ಬಗ್ಗೆ ಹಾಗೂ ಮಾನಸಿಕವಾಗಿ ನೊಂದವರಿಗೆ ತಾಳ್ಮೆಯಿಂದ ಮಾತನ್ನು ಆಲಿಸಿ ಸಮಾಧಾನವಾದ ಮಾತು ಆಡಬೇಕು  ಎಂದು ಹೇಳಿದರು.


ಸುಷ್ಮಾ ಇವರು ಮಾತನಾಡಿ, ಕರ್ನಾಟಕ ಮೆದುಳು ಉಪಕ್ರಮವಾದ ಪಾಶ್ವವಾಯು, ತಲೆನೋವು, ಅಪಸ್ಮಾರ ಮತ್ತು ಡಿಮೆನ್ಸಿಯಾದ ಬಗ್ಗೆ ಮಾಹಿತಿ ನೀಡಿದರು.


ಫಾದರ್ ಮುಲ್ಲರ್ ಆಸ್ಪತ್ರೆ ರೇಡಿಯಾಲಜಿಸ್ಟ್ ಡಾ.ಕೃಷ್ಣ ಕಿರಣ್ ಎಸ್, ಇವರು ಗರ್ಭಧಾರಣೆಯ ಪೂರ್ವ ಮತ್ತು ಪ್ರಸವ ಪೂರ್ವ ರೋಗ ನಿರ್ಣಯ ತಂತ್ರಗಳ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು.


ಜಿಲ್ಲಾ  ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು ಇವರು ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ. ಅದನ್ನು ಗ್ರಾಮ ಮಟ್ಟದಲ್ಲಿ ಪಸರಿಸುವ ಕೆಲಸ ನಮ್ಮದಾಗಬೇಕು ಎಂದು  ಹೇಳಿದರು.  


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಗಿ ಉಪಸ್ಥಿತರಿದ್ದರು.


ಜಿಲ್ಲಾ ಮಾನಸಿಕ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ.ಸುದರ್ಶನ್ ಸಿ ಎಮ್ ಸ್ವಾಗತಿಸಿದರು. ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ. ಎಂ ವಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top