ತೊಗರಿ ಬೆಳೆಯಲ್ಲಿ ಕಂಡುಬರುವ ಗಂಧಕದ ಕೊರತೆ ನಿವಾರಣೆಗೆ ಸಲಹೆ

Upayuktha
0


ಬಳ್ಳಾರಿ: ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಬೆಳೆದ ತೊಗರಿ ಬೆಳೆಯಲ್ಲಿ ಕಂಡುಬರುತ್ತಿರುವ ಗಂಧಕದ ಕೊರತೆಯ ಲಕ್ಷಣಗಳನ್ನು ಸುಲಭವಾಗಿ ನಿವಾರಿಸಬಹುದು ಎಂದು ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದರು.


ಗುರುವಾರ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ.ಪಾಲಯ್ಯ,ಪಿ., ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ.ರವಿ ಎಸ್., ವಿಜ್ಞಾನಿ (ಗೃಹ ವಿಜ್ಞಾನ) ರಾಜೇಶ್ವರಿ ಹಾಗೂ (ಕೃಷಿ ವಿಸ್ತರಣೆ) ಡಾ.ನವೀನ್‌ಕುಮಾರ್.ಪಿ ಅವರನ್ನೊಳಗೊಂಡ ತಂಡವು ಬಳ್ಳಾರಿ ತಾಲ್ಲೂಕಿನ ಕಗ್ಗಲ್ಲು ಗ್ರಾಮದ ಪ್ರಗತಿಪರ ರೈತರಾದ ಸಮುದ್ರ ರಾಜ ಅವರ ತೊಗರಿ ಕ್ಷೇತ್ರಕ್ಕೆ ಹಾಗೂ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ತೊಗರಿ ಬೆಳೆಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿರುವ ಗಂಧಕದ ಕೊರತೆಯ ಲಕ್ಷಣಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದರು.


ಗಂಧಕದ ಕೊರತೆಯಿಂದ ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಚಿಕ್ಕದಾಗಿ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ಕಾರಣದಿಂದ ಗಿಡದ ಬೇರುಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ತರಹದ ಲಕ್ಷಣಗಳು ಈಗಾಗಲೇ ತಾಲ್ಲೂಕಿನ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಂಡಿದೆ.


ವಿಜ್ಞಾನಿಗಳ ತಂಡ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಹತೋಟಿಗೆ ತರಲು ಪ್ರತಿ ಎಕರೆಗೆ  20 ಕೆ.ಜಿ ಅಮೋನಿಯಂ ಸಲ್ಫೇಟ್ ಅಥವಾ 10 ಕೆ.ಜಿ ಪೊಟ್ಯಾಶಿಯಂ ಸಲ್ಫೇಟ್ ಅಥವಾ 50 ಕೆ.ಜಿ ಸೂಪರ್ ಪಾಸ್ಪೆಟ್ ಅಥವಾ  100 ಕೆ.ಜಿ ಜಿಪ್ಸಂ ನ್ನು ಬೆರೆಸಿ ಸಿಂಪಡಿಸುವುದರ ಮೂಲಕ ಗಂಧಕದ ಕೊರತೆಯನ್ನು ಸುಲಭವಾಗಿ ನಿವಾರಿಸಬಹುದಾಗಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top