ಮೈಸೂರಿನ ಅಭಿರುಚಿ ಬಳಗದಿಂದ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿಗೆ ಆಹ್ವಾನ

Upayuktha
0


ಮೈಸೂರು: ಅಭಿರುಚಿ ಬಳಗದ ಅಧ್ಯಕ್ಷ ಎನ್.ವಿ ರಮೇಶ್ ಅವರ 75ನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ, 2025ರ ಅಭಿರುಚಿ ಬಳಗದ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಕೊಡುವ ಬಗ್ಗೆ ನಿರ್ಧರಿಸಲಾಗಿದೆ. 2024-2025ರಲ್ಲಿ ತಮ್ಮ ಪುಸ್ತಕ ಪ್ರಕಟಿಸಿರುವ ಸಾಹಿತಿಗಳು, ಕವಿಗಳು ತಮ್ಮ ಪುಸ್ತಕದ ಮೂರು ಪ್ರತಿಗಳನ್ನು, 15-10-2025ರೊಳಗೆ, ತಮ್ಮ ಪೂರ್ಣ ವಿಳಾಸ, ಮೊಬೈಲ್ ನಂ, ಜೊತೆಗೆ ತಮ್ಮ ಒಂದು ಪಾಸ್‌ಪೋರ್ಟ್ ಅಳತೆ ಪೋಟೋ ಕಳಿಸಿಕೊಡಲು, ಮೈಸೂರಿನ ಅಭಿರುಚಿ ಬಳಗ (ರಿ) ಆಸಕ್ತ ಲೇಖಕರನ್ನು ಕೋರಿದೆ.


ಪುಸ್ತಕ ಪ್ರಶಸ್ತಿಗಳ ವಿವರ-

ಮೊದಲ ಬಹುಮಾನ- ರೂ 10,000

ಎರಡನೇ ಬಹುಮಾನ- ರೂ. 5,000

ಮೂರನೇ ಬಹುಮಾನ- ರೂ. 3,000

ವಿಶೇಷ ಬಹುಮಾನ- ರೂ. 2,000


ಬಹುಮಾನ ಪಡೆದವರಿಗೆ ಬಹುಮಾನದ ಹಣದೊಂದಿಗೆ ಸ್ಮರಣಿಕೆ, ಪ್ರಮಾಣಪತ್ರ, ಶಾಲು, ಹಾರ ಕೊಟ್ಟು ಗೌರವಿಸಲಾಗುವುದು. ಒಂದಕ್ಕಿಂತ ಹೆಚ್ಚು ಲೇಖಕರ ಕೃತಿಗಳು  ಆಯಾ ವಿಭಾಗದ ಸ್ಪರ್ಧೆಯಲ್ಲಿ ಗೆದ್ದರೆ, ಬಹುಮಾನದ ಹಣವನ್ನು ಅವರುಗಳಲ್ಲಿ ಹಂಚಲಾಗುವುದು. ಹೆಚ್ಚಿನ ವಿವರಗಳಿಗೆ 98455 65238 ಸಂಪರ್ಕಿಸಲು ಕೋರಲಾಗಿದೆ.


ನವೆAಬರ್ 28-29ರಂದು ಮೈಸೂರಿನಲ್ಲಿ ಜರುಗುವ ಎನ್.ವಿ ರಮೇಶ್ ಅವರ ಜನ್ಮದಿನದ ಸಂದರ್ಭದಲ್ಲಿ ಜರುಗುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮೈಸೂರಿನಲ್ಲಿ ಪ್ರಶಸ್ತಿ ವಿತರಣೆ  ನಡೆಯಲಿದೆ.


ಪುಸ್ತಕಗಳನ್ನು ಕಳಿಸಬೇಕಾದ ವಿಳಾಸ

ಅಂಚೆ ವಿಳಾಸ:- ಎನ್.ವ್ಹಿ. ರಮೇಶ್ 

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು, ಆಕಾಶವಾಣಿ

‘ತಂಗಶ್ರೀ’  # 2210, ಪಚ್ಚೆರಸ್ತೆ-೪ನೇ ಅಡ್ಡರಸ್ತೆ,

ಕುವೆಂಪುನಗರ, ‘ಕೆ’ ಬ್ಲಾಕ್, ಮೈಸೂರು-570 023.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top