ಮೂಡಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಸುರತ್ಕಲ್‌ನ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸುರತ್ಕಲ್‌ನಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಆಳ್ವಾಸ್ PU ಕಾಲೇಜು 8 ಚಿನ್ನ ಹಾಗೂ 3 ಬೆಳ್ಳಿಯೊಂದಿಗೆ ಒಟ್ಟು 11 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲೂ ಆಳ್ವಾಸ್ 6 ಚಿನ್ನ ಹಾಗೂ 3 ಕಂಚಿನೊಂದಿಗೆ ಒಟ್ಟು 9 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡು ಅವಳಿ ಪ್ರಶಸ್ತಿಗೆ ಭಾಜನವಾಯಿತು.
ಹುಡುಗರ ವಿಭಾಗದಲ್ಲಿ ಆಳ್ವಾಸ್ ಸಾಧನೆ : 61 ಕೆಜಿ – ಅರುಣ್ (ಪ್ರಥಮ), 65 ಕೆಜಿ - ಶಶಿಕುಮಾರ್ (ಪ್ರಥಮ), ರಂಜನ್ (ದ್ವಿತೀಯ), 70 ಕೆಜಿ – ಮನೋಜ್ (ಪ್ರಥಮ), 74 ಕೆಜಿ - ಶಿವರಾಜ್ ಕುಮಾರ್ (ಪ್ರಥಮ), ರಜತ್ ಬಾಸು (ದ್ವಿತೀಯ), 79 ಕೆಜಿ - ಸಂಕೇತ್ (ಪ್ರಥಮ), 86 ಕೆಜಿ – ಕುಶಾಲ್ (ಪ್ರಥಮ), 92 ಕೆಜಿ - ಶಮಂತ್ ಶೆಟ್ಟಿ (ಪ್ರಥಮ), ಜೇಷ್ಠ ಗೌಡ (ದ್ವಿತೀಯ), 97+ ಕೆಜಿ – ಗಣೇಶ್ ಯು (ಪ್ರಥಮ) ಸ್ಥಾನ ಪಡೆದರು.
ಹುಡುಗಿಯರ ವಿಭಾಗದಲ್ಲಿ ಆಳ್ವಾಸ್ ಸಾಧನೆ : 50 ಕೆಜಿ – ಕಾವ್ಯ ಎನ್ (ತೃತೀಯ), 53 ಕೆಜಿ – ಗಂಗಮ್ಮ (ತೃತೀಯ), 55 ಕೆಜಿ – ಗಂಗಮ್ಮ ಅವ್ವನವ್ವರ್ (ತೃತೀಯ), 59 ಕೆಜಿ - ಸ್ಪೂರ್ತಿ (ಪ್ರಥಮ), 62 ಕೆಜಿ – ಊರ್ಮಿಳಾ (ಪ್ರಥಮ), 65 ಕೆಜಿ – ಸೌಮ್ಯ (ಪ್ರಥಮ), 68 ಕೆಜಿ – ಚೈತಿಕಾ ಎನ್ ಎಸ್ (ಪ್ರಥಮ), 72 ಕೆಜಿ – ಜಾಹ್ನವಿ ಕುರಗೋಡು (ಪ್ರಥಮ), 76 ಕೆಜಿ - ನವ್ಯಶ್ರೀ (ಪ್ರಥಮ) ಸ್ಥಾನ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
