ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಭರತನಾಟ್ಯದ ಮೂಲಶೈಲಿಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ.
ಮಂಗಳೂರು: ಭರತನಾಟ್ಯದ ಹೆಸರಿನಲ್ಲಿ ಮೂಲ ಸಾಂಪ್ರದಾಯಿಕ ಶೈಲಿಯಿಂದ ತಪ್ಪಿ ನಡೆಯುವ ಪ್ರದರ್ಶನಗಳು ಈ ಕಲೆಗೆ ಅವಮಾನವೆಂದು ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಲಾವಿದರು ಭರತನಾಟ್ಯದ ಹೆಸರಿನಲ್ಲಿ ಪ್ರದರ್ಶನ ನೀಡುವಾಗ, ಅದರ ಮೂಲ ಶೈಲಿಗೆ ಧಕ್ಕೆ ತಾರದೆ ಅಚ್ಚುಕಟ್ಟಾಗಿ ನರ್ತಿಸಬೇಕೆಂದು ಆಗ್ರಹಿಸಿದೆ.
ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಮುಖವಾದ ಭರತನಾಟ್ಯವು ತನ್ನದೇ ಆದ ಸಾಂಪ್ರದಾಯಿಕ ಚೌಕಟ್ಟನ್ನು ಹೊಂದಿದೆ. ಅದನ್ನು ಗುರುಮುಖೇನ ಶ್ರದ್ದೆಯಿಂದ ಕಲಿತು, ಅಡವುಗಳು, ಅಂಗಶುದ್ಧಿ, ಹಸ್ತ ವಿನ್ಯಾಸ ಮತ್ತು ಅಭಿನಯದಲ್ಲಿ ಶಿಸ್ತು ಪಾಲಿಸುವುದು ಕಡ್ಡಾಯವೆಂದು ಪರಿಷತ್ ತಿಳಿಸಿದೆ. ಇಂತಹ ಶ್ರೀಮಂತ ನೃತ್ಯಕಲೆ ದೇಶದ ಶಾಸ್ತ್ರೀಯ ಪರಂಪರೆಯನ್ನು ಸಾರುವುದರ ಜೊತೆಗೆ ಸಂಸ್ಕೃತಿಯ ಪ್ರತೀಕವಾಗಿದೆ.
ಭರತನಾಟ್ಯದಲ್ಲಿ ವಿವಿಧ ಶೈಲಿಗಳಿದ್ದರೂ, ಹಿರಿಯರು ಕಾಲಾನುಸಾರ ಮಾಡಿದ ಬದಲಾವಣೆಗಳು ಮೂಲತತ್ತ್ವಕ್ಕೆ ಧಕ್ಕೆ ತರುವಂತಿಲ್ಲ. ಅಂತಹ ಬದಲಾವಣೆಗಳು ಕಲೆ ಬೆಳೆಯಲು ಸಹಕಾರಿ. ಆದರೆ ಮೂಲ ತತ್ತ್ವವನ್ನು ಬಿಟ್ಟು ದಾಖಲೆ ಹೆಸರಿನಲ್ಲಿ ಹಲವಾರು ಗಂಟೆಗಳ ಒಟ್ಟಾರೆ ಪ್ರದರ್ಶನ ನೀಡುವುದು ನೃತ್ಯದ ಅಸಲಿಯತನಕ್ಕೆ ಧಕ್ಕೆ ತರುತ್ತದೆ ಎಂದು ಪರಿಷತ್ ಎಚ್ಚರಿಸಿದೆ.
ಭರತನಾಟ್ಯ ನಮ್ಮ ಸಂಸ್ಕೃತಿಯ ಸ್ವರೂಪವಾಗಿರುವುದರಿಂದ, ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭರತನಾಟ್ಯದ ಕುರಿತು ತಪ್ಪು ಮಾಹಿತಿ ತಲುಪದಂತೆ ಎಚ್ಚರಿಕೆ ವಹಿಸುವುದು ಪರಿಷತ್‌ನ ಉದ್ದೇಶವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ